ಪ್ಲಾಸ್ಟಿಕ್ ಕವರ್ ಬದಲು, ಬಟ್ಟೆ ಹಾಗೂ ಮರುಬಳಕೆಯ ಪೇಪರ್ ನಿರ್ಮಿತ ಚೀಲ ಬಳಸಲು ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಮನವಿ
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ, ನಗರವನ್ನು ಸ್ವಚ್ಛ, ಸುಸ್ಥಿರ ಹಾಗೂ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಪರಿವರ್ತಿಸಲು ಕೈಜೋಡಿಸುವ ಕುರಿತು, ನಗರದ ಉದ್ದಿಮೆದಾರರು ತಮ್ಮ ಉದ್ದಿಮೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನೀಷೇಧ ಪದ್ದತಿಯನ್ನು ಅನುಸರಿಸಲು ಕ್ರಮಕೈಗೊಂಡು, ಇದನ್ನು ತಮ್ಮ ಗ್ರಾಹಕರಿಗೂ ಜಾಗೃತಿಯನ್ನು ಮೂಡಿಸುತ್ತಾ, ಪ್ಲಾಸ್ಟಿಕ ಕವರ್ ಬದಲು, ಬಟ್ಟೆ ಹಾಗೂ ಮರುಬಳಕೆಯ ಪೇಪರ್ ನಿರ್ಮಿತ ಚೀಲವನ್ನು ಬಳಸಲು ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ 24 ನೇ ವಾರ್ಡಿನ ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್ ಹಾಗೂ 22 ನೇ ವಾರ್ಡಿನ ಸದಸ್ಯರಾದ ಶಿವಾನಂದ, ಪಾಲಿಕೆಯ ಆರೋಗ್ಯ ಅಧಿಕಾರಿ ನಿಖಿಲ್ ಮತ್ತು ಇತರರು ಉಪಸ್ಥಿತರಿದ್ದರು. ನಗರದ 24 ನೇ ವಾರ್ಡಿನ ಅವಾಂತರ, ಸ್ಟೈಲ್ ಯೂನಿಯನ್ ಅನೇಕ ಮಳಿಗೆಗಳಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಪ್ರಸಂಶನಾ ಪತ್ರ ನೀಡಲಾಯಿತು.