Sub registrar; ಹರಿಹರ ಉಪನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಗಳ ಪರಿಷ್ಕರಣೆ – ತಹಶೀಲ್ದಾರ್
ದಾವಣಗೆರೆ(ಹರಿಹರ) : ಪ್ರಸಕ್ತ 2023 ಸಾಲಿನಲ್ಲಿ ಹರಿಹರ ಉಪನೋಂದಣಿ Sub registrar ಕಛೇರಿಯ ವ್ಯಾಪ್ತಿಯಲ್ಲಿ ಬರುವ ಹರಿಹರ ನಗರಸಭೆ, ಮಲೇಬೆನ್ನೂರು ಪುರಸಭೆ ಹಾಗೂ ಗ್ರಾಮಾಂತರ ಪ್ರದೇಶದ ಕೃಷಿ ಜಮೀನು ಹಾಗೂ ಕೃಷಿಯೇತರ ಆಸ್ತಿಗಳ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಿಸುವ ಸಲುವಾಗಿ ಸೆಪ್ಟಂಬರ್ 8 ರಂದು ತಹಶೀಲ್ದಾರ್ ಹಾಗೂ ತಾಲ್ಲೂಕು ಮೌಲ್ಯಮಾಪನ ಉಪಸಮಿತಿ, ಅಧ್ಯಕ್ಷರಾದ ಪೃಥ್ವಿ ಸ್ಥಾನಿಕಂ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಛೇರಿ ಆವರಣದಲ್ಲಿ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಸರ್ಕಾರಿ ಅಂದಾಜು ಮಾರ್ಗ ಸೂಚಿ ಬೆಲೆಗಳನ್ನು 2023-24ನೇ ಸಾಲಿನಲ್ಲಿ ಪರಿಷ್ಕರಿಸುವ ಸಂಬಂಧ ಚರ್ಚಿಸಿ, ಸರ್ವ ಸದಸ್ಯರ ಅಭಿಪ್ರಾಯದಂತೆ ಚಾಲ್ತಿ ಇರುವ ಮಾರ್ಗ ಸೂಚಿಬೆಲೆ 2019-20ನೇ ಸಾಲಿನಲ್ಲಿ ಪರಿಷ್ಕøತಗೊಂಡಿದ್ದು ನಂತರದಲ್ಲಿ ಪರಿಷ್ಕರಣೆಗೊಂಡಿರುವುದಿಲ್ಲ. ಆದ್ದರಿಂದ ಚಾಲ್ತಿ ಇರುವ ದರಗಳ ಪರಿಷ್ಕರಣೆ ಮಾಡುವುದು ಸೂಕ್ತವೆಂದು ತೀರ್ಮಾನಿಸಿ ಸೆಪ್ಟಂಬರ್ 10 ರಿಂದ 14 ದಿವಸಗಳೊಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಮತ್ತು ಸೂಚನೆಗಳನ್ನು ದಾಖಲಾತಿಗಳ ಆಧಾರಗಳ ಮೇಲೆ ಸಕಾರಣಗಳೊಂದಿಗೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ತಹಸೀಲ್ದಾರ್ ಹಾಗೂ ಉಪನೋಂದಣಾಧಿಕಾರಿಗಳು ಹರಿಹರ ಇವರಿಗೆ ಸಲ್ಲಿಸುವುದು.