ದಾವಣಗೆರೆಯ ಕಲಾನಿಕೇತನ ಕಾಲೇಜ್ ವತಿಯಿಂದ ಕಲಾ ಕೃತಿಕ -2023 ಫ್ಯಾಷನ್ ಶೋ ಮತ್ತು ‘ಮಿಸ್.ಫ್ಯಾಷನ್ ಫ್ಲೋರಿಶ್–23’ ಸ್ಪರ್ಧೆ

Kala Kriti-2023 Fashion Show and 'Miss.Fashion Flourish-23' Contest by Kalaniketana College, Davangere
ದಾವಣಗೆರೆ: ಕಲಾನಿಕೇತನ ಕಾಲೇಜ್ ಆಫ್ ಫ್ಯಾಷನ್ ಡಿಜೈನಿಂಗ್‌ ವತಿಯಿಂದ ಕಲಾ ಕೃತಿಕ -2023′ ಫ್ಯಾಷನ್ ಶೋ ಮತ್ತು ‘ಮಿಸ್.ಫ್ಯಾಷನ್ ಫ್ಲೋರಿಶ್–23’ ಸ್ಪರ್ಧೆ ಕಾರ್ಯಕ್ರಮವನ್ನು ಆ.13 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಹೋಟೆಲ್‌ ಪೂಜಾ ಇಂಟರ್ನ್ಯಾಶನಲ್‌ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಕ್ರಿಯೇಟಿವ್ ಎಜುಕೇಷನ್‌ ಕಾರ್ಯದರ್ಶಿ ಅಶೋಕ ರಾಯಬಾಗಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಇತರೆ ಗಣ್ಯರು ಆಗಮಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ಕಾಲೇಜಿನ ವಿದ್ಯಾರ್ಥಿನಿಯರು ತಾವುಗಳೇ ವಿನ್ಯಾಸಗೊಳಿಸಿದ ವೈವಿಧ್ಯಮಯ ಮತ್ತು ಕಲಾತ್ಮಕವಾದ ವಸ್ತ್ರ ವಿನ್ಯಾಸ ಪ್ರದರ್ಶನವನ್ನು ನಡೆಸಿಕೊಡಲಿದ್ದು, ಸುಮಾರು 150 ವಸ್ತ್ರ ವಿನ್ಯಾಸಗಳು ಉತ್ಸವದಲ್ಲಿ ಪ್ರದರ್ಶಿಸಲಾಗುವುದು. ಪ್ರದರ್ಶನದ ನಂತರ ಸಂಜೆ 5.30 ರಿಂದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ್ಯಾಂಕ್‌ ಪಡೆದ ಕಾಲೇಜಿನ ಏಳು ವಿದ್ಯಾರ್ಥಿನಿಯರಿಗೆ ಅವರ ಪೋಷಕರೊಂದಿಗೆ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಹಾಗೆಯೇ ಸ್ಥಳೀಯ ಉದಯೋನ್ಮುಖ ಯುವ ಮಹಿಳೆಯರಿಗೆ ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಲು ಮಿಸ್ ಫ್ಯಾಶನ್, ಫ್ಲೋರಿಶ್-01 ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಈ ಸ್ಪರ್ಧೆಯ ಅಂತಿಮ ಸುತ್ತು ನಮ್ಮ ಕಾಲೇಜಿನ ಕಲಾ ಕೃಷಿಕ 2023 ವೇದಿಕೆಯಲ್ಲಿ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!