ನಕಲಿಗಳ ಹಾವಳಿಗೆ ತತ್ತರಿಸಿದ ದಾವಣಗೆರೆ ಮಹಾನಗರ ಪಾಲಿಕೆ.! ಫೋರ್ಜರಿ ದಾಖಲೆ ನೀಡಿ ಕಾಮಗಾರಿ ಪಡೆಯಲು ಮುಂದಾದ ಗುತ್ತಿಗೆದಾರ.!

ದಾವಣಗೆರೆ: ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬರುವ ಕೆ ಹೆಚ್ ಬಿ ತುಂಗಭದ್ರಾ ಬಡಾವಣೆಯಲ್ಲಿ ಬೀದಿದೀಪಗಳನ್ನು ದುರಸ್ಥಿ ಮತ್ತು ನಿರ್ವಹಣೆಯ ವಾರ್ಷೀಕ ಟೆಂಡರ್ ಪಡೆಯಲು ಯತ್ನಿಸಿದ ಗುತ್ತಿಗೆದಾರನ ವಿರುದ್ದ ದಿನಾಂಕ 27.06.2023 ರಿಂದ 24.06.2024 ಒಂದು ವರ್ಷದವರೆಗೆ ಪಾಲಿಕೆಯಲ್ಲಿ ಕರೆಯುವ ಯಾವುದೇ ಟೆಂಡರ್ ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿರುವ ಪ್ರಕರಣ ಗರುಡವಾಯ್ಸ್.ಕಾ ಮಾಧ್ಯಮಕ್ಕೆ ಲಭ್ಯವಾಗಿದೆ.

2021-2022 ನೇ ಸಾಲಿನ ಪಾಲಿಕೆ ಸಾಮಾನ್ಯ ನಿಧಿಯಡಿ ಕರೆಯಲಾದ ಟೆಂಡರ್ ಸಂಖ್ಯೆ  DMA/2022-23/EI/WORK_INDENT 132292 In the limits of city corporation Davanagere Providing infrastructure for street lighting by supplying and errection of highmast,mini highmast,octagonal poles at various places of KHB Thungabhadra badavane ಅಂದಾಜು ಮೊತ್ತ 128 ಲಕ್ಷಗಳು ಹಾಗು ಟೆಂಡರ್ ಗೆ ಇಟ್ಟ ಮೊತ್ತ 1,13,08,347.13 ರೂಪಾಯಿಗಳ  ಕಾಮಗಾರಿಯ ಟೆಂಡರ್ ನಲ್ಲಿ ಭಾಗವಹಿಸಿದ ಗುತ್ತಿಗೆದಾರರಾದ ಶ್ರೀ ಎಂಟರ್ ಪ್ರೈಸಸ್ ಶಿವಮೊಗ್ಗ ಇವರ ತಾಂತ್ರಿಕ ಬಿಡ್ ಪರಿಶೀಲಿಸಿದಾಗ ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದ್ದು ಆರ್ಥಿಕ ಇಲಾಖೆ ಅಧಿಸೂಚನೆ ಸಂಖ್ಯೆ ಎಫ್ ಡಿ884 ಇ ಎಕ್ಸ್ ಪಿ-12/2019, ಬೆಂಗಳೂರು ದಿನಾಂಕ 07.05.2020 ಪ್ರಕಾರ ಕ್ರಮವಹಿಸಿ ಒಂದು ವರ್ಷದವರೆಗೆ ಪಾಲಿಕೆಯ ಯಾವುದೇ ಟೆಂಡರ್ ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ರವರು ಆದೇಶಿಸಿದ್ದಾರೆ.

ಪ್ರಕರಣದ ವಿವರ:

ದಾವಣಗೆರೆ ಮಹಾನಗರ ಪಾಲಿಕೆ  ದಿನಾಂಕ 27-06-2023 ರಂದು ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಡಿಬಾರ್ಮೆಂಟ್  ಕಮಿಟಿ ಸಭೆಯ ನಡವಳಿಕೆಯಲ್ಲಿ ಈ ವಿಚಾರ ಪ್ರಸ್ಥಾಪಿಸಿ ಸುದೀರ್ಘವಾಗಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಾಲಾಗಿದೆ.

2021-22 ನೇ ಪಾಲಿಕೆ ಸಾಮಾನ್ಯ ನಿಧಿಯಡಿ ರೂ.128.00 ಲಕ್ಷಗಳ ಕಾಮಗಾರಿಗೆ ಪಾಲಿಕೆ ವತಿಯಿಂದ ಟೆಂಡರ್ ಪ್ರಕಟಣೆ ಸಂಖ್ಯೆ ದಾಮಪಾ:ಕಾಅ3:ಇ-ಟೆಂಡರ್:03:2022-23 ದಿನಾಂಕ 01-06-2022 ರಂತೆ In the limits of city corporation Davanagere Providing infrastructure for street lighting by supplying and errection of highmast,mini highmast,octagonal poles at various places of KHB Thungabhadra badavane ಇ ಪ್ರಕ್ಯೂರಮೆಂಟ್ ಪೊರ್ಟಲ್ ಮೂಲಕ ಡಬಲ್ ಕವರ್ ಪದ್ದತಿಯಲ್ಲಿ ಟೆಂಡರ್ ಕರೆಯಲಾಗಿತ್ತು.

ಸದರಿ ಟೆಂಡರ್ನ್ ಫ್ರೀ ಬಿಟ್ ಸಭೆಯನ್ನು ದಿ;18-06-2022 ರಂದು ಮತ್ತು ಟೆಂಢರ್ ಸಲ್ಲಿಸಲು 28-06-2022 ರಂದು ಕೊನೆಯ ದಿನವಾಗಿ ನಿಗಧಿ ಮಾಡಲಾಗಿತ್ತು. ಆದರೆ ಯಾವುದೇ ಗುತ್ತಿಗೆದಾರರು ಫ್ರೀ ಬಿಡ್ ಸಬೇಗೆ ಹಾಜರಾಗದೆ ಸ್ವೀಕೃತವಾದ ತಾಂತ್ರಿಕ ಟೆಂಡರ್ ಗಳನ್ನು 30-06-2023 ರಂದು ಇ – ಫೊರ್ಟಲ್ ನಲ್ಲಿ ತೆರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ 6 ಜನ ಗುತ್ತಿಗೆದಾರರು ಭಾಗವಹಿಸಿದ್ದು ದಿ:02-08-2022 ರಂದು ತಾಂತ್ರಿಕ ಪರಿಶೀಲನಾ ಸಭೆಯಲ್ಲಿ ಎಲ್ಲಾ 6 ಜನ ಗುತ್ತಿಗೆದಾರರು ಭಾಗವಹಿಸಿದ್ದರು.

ಟೆಂಡರ್ ನಲ್ಲಿ ಭಾಗಿಯಾಗಿದ್ದ ಗುತ್ತಿಗೆದಾರರಾದ, 1) ಬಿ ಎಸ್ ಕೇಶವ ( ಗೀತಾ ಸ್ಟೋರ್ಸ್) 2) ಕೆ ರಾಮಮೋಹನ್ ( ಶ್ರೀ ಎಂಟರ್ಪ್ರೈಸಸ್) 3) ನಾಗರಾಜ್ (ಶ್ರೀ ವಿನಾಯಕ ಎಲೆಕ್ಟ್ರೀಕಲ್ಸ್) 4) ಶರಣ್ ಕುಮಾರ್ ( ಶ್ರೀ ಸಂಗಮೇಶ್ವರ ಎಲೆಕ್ಟ್ರೀಕಲ್ಸ್) 5) ಶಿವಣ್ಣ ರಾಮಚಂದ್ರ ಕಲಾಸಿಪಾಲ್ಯ ( ರಿನ್ಯೂ ಸಿಲೀಕಾನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್) 6) ಶ್ರೀಕಂಠ ಸಿ ( ಶ್ರೀಕಂಠೆಶ್ವರ ಎಲೆಕ್ಟ್ರೀಕಲ್ಸ್) ಇವರೆಲ್ಲಾ ಭಾಗವಹಿಸಿರುತ್ತಾರೆ. ಸದರಿ ಗುತ್ತಿಗೆದಾರರ ಸಲ್ಲಿಸಿದ್ದ ತಾಂತ್ರಿಕ ಬಿಡ್ನಲ್ಲಿ ಬಿಎಸ್ ಕೇಶ್ವ್, ನಾಗರಾಜ್ಮ ಶ್ರೀಕಂಠ ಎಂಬ ಮೂವರು ಗುತ್ತಿಗೆದಾರರ ಟೆಂಡರ್ ನಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ತಾಂತ್ರಿಕವಾಗಿ ಅರ್ಹತೆ ಹೊಂದಿರುತ್ತಾರೆ. ಆದರೆ ಕೆ. ರಾಮಮೋಹನ್, ಶರಣ್ ಕುಮಾರ್ ಮತ್ತು ಶಿವಣ್ಣ ರಾಮಚಂದ್ರ ಕಲಾಸಿಪಾಲ್ಯ ಮೂರು ಜನ ಗುತ್ತಿಗೆದಾರರು ನಕಲು ಮಾಡಿ, ಪಾಲಿಕೆಗೆ ಮೋಸ ಮಾಡುವ ಉದ್ದೇಶದಿಂದ ನಕಲು ಮಾಡಿರುವ ದಾಖಲೆಗಳನ್ನು ಸಲ್ಲಿಸಿರುವುದು ದೃಡಪಟ್ಟಿರುತ್ತದೆ. ಆರ್ಥಿಕ ಇಲಾಖೆ ಅಧಿಸೂಚನೆ ಸಂಖ್ಯೆ  FD 884 EXP-12/2019 Bangalore Dt.07-05-2020 Clause 26A ಪ್ರಕಾರ ಕ್ರಮ ವಹಿಸಲು ಜಿಲ್ಲಾ ಮಟ್ಟದ ಡಿಬಾರ್ಮೆಂಟ್ ಸಮಿತಿ ಸಭೆಗೆ ಪ್ರಸ್ತಾವನೆ ಸಲ್ಲಿಸಲು ಕಾರ್ಯಪಾಲಕ ಅಭಿಯಂತರರು ( ವಿದ್ಯುತ್) ರವರಿಗೆ ಸೂಚಿಸಲಾಗಿ ತಾಂತ್ರಿಕ ಬಿಡ್ ನಲ್ಲಿ ಅರ್ಹತೆ ಹೊಂದಿರುವ ಗುತ್ತಿಗೆದಾರರ ಆರ್ಥಿಕ ಬಿಟ್ ತೆರೆಯಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಈ ಎಲ್ಲಾ ತೀರ್ಮಾದಂತೆ ಕೆ ರಾಮಮೋಹನ್ ( ಶ್ರೀ ಎಂಟರ್ಪ್ರೈಸಸ್) ಸದರಿ ಟೆಂಡರ್ ನಲ್ಲಿ ಕೇಳಲಾಗಿದ್ದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ತಾಂತ್ರಕವಾಗಿ ಅರ್ಹತೆ ಹೊಂದಿರುತ್ತಾರೆ. ಗುತ್ತಿಗೆದಾರರು ಸಲ್ಲಿಸಿರುವ ದಾಖಲೆಗಳನ್ನು ಅವುಗಳ ನೈಜ್ಯತೆಯ ಬಗ್ಗೆ ಪರಿಶೀಲಿಸಿ ದೃಡಿಕರಿಸಲು ಸಂಬಂಧಪಟ್ಟ ಕಛೇರಿಗಳಿಗೆ ಕೋರಿದ್ದು, ಸಂಬಂಧಪಟ್ಟ ಎಲ್ಲಾ ಕಛೇರಿಗಳಿಂದ ದಾಖಲೆಗಳು ನೈಜ್ಯತೆಯಿಂದ ಇರುವ ಬಗ್ಗೆ ದೃಡೀಕರಣ ಪಡೆಯಲಾಗಿರುತ್ತದೆ.

ಆದರೆ ಸದರಿ ಗುತ್ತಿಗೆದಾರರು ಲ್ಯಾಡರ್ ವಾಹನದ ಬಗ್ಗೆ ಸಲ್ಲಿಸಿರುವ ಲೀಸ್ ಕರಾರು ಪತ್ರ ಪರಿಶೀಲಿಸಿದಾಗ ಮೂಲ ಮಾಲೀಕರ ಸಹಿಯನ್ನು ನಕಲು ಮಾಡಿರುವುದು ಪಾಲಿಕೆ ಕಛೇರಿಯಲ್ಲಿನ ದಾಖಲೆಗಳಿಂದ ತಿಳಿದು ಬಂದಿರುತ್ತದೆ. ಈ ಬಗ್ಗೆ ಮೂಲ ಮಾಲಿಕರಿಂದ ವಿವರಣೆ ಪಡೆಯಲಾಗಿ ಸದರಿ ಗುತ್ತಿಗೆದಾರರಾದ ಶ್ರೀ ಎಂಟರ್ಪ್ರೈಸಸ್ಸ ಮಾಲೀಕರಾದ ರಾಮಮೋಹನ್ ಸಹಿಯನ್ನು ನಕಲು ಮಾಡಿರುವುದು ದೃಡಪಟ್ಟಿರುತ್ತದೆ ಆದ್ದರಿಂದ ಟೆಂಡರ್ ದಸ್ತಾವೇಜಿನಲ್ಲಿರುವ ಷರತ್ತಿನಂತೆ ಕ್ರಮ ವಹಿಸಲು ಸಭೆ ತೀರ್ಮಾನ ಕೈಗೊಳ್ಳಾಲಾಯಿತು

ಟೆಂಡರ್ ಜೊತೆಯಲ್ಲಿ ಸಲ್ಲಿಸಿದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ರಾಮ ಮೋಹನ್ ( ಶ್ರೀ ಎಂಟರ್ಪ್ರೈಸಸ್ ) ಶಿವಮೊಗ್ಗ, ಇವರನ್ನು ದಿನಾಂಕ 27.06.2023 ರಿಂದ 24.06.2024 ರವರೆಗೆ ಒಂದು ವರ್ಷದವರೆಗೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕರೆಯುವ ಯಾವುದೇ ಟೆಂಡರ್ ನಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ.

ಒಟ್ಟಾರೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲು ಕರೆಯಲಾಗುವ ಟೆಂಡರ್ ನಲ್ಲಿ ಭಾಗವಹಿಸುವ ಕೆಲ ಗುತ್ತಿಗೆದಾರರು ಕಾಮಗಾರಿ ಪಡೆಯಲು ಹಾಗೂ ಪಾಲಿಕೆಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸಲ್ಲಿಸುತ್ತಿರುವುದು ಬೆಳಕಿಗೆ ಬಂದಿದ್ದು ಇನ್ನೂ ಅನೇಕ ಕಾಮಗಾರಿಗಳಿಗೆ ನಕಲಿ ದಾಖಲೆಗಳನ್ನು ಸಲ್ಲೀಸಿರುವ ಬಗ್ಗೆ ಗರುಡವಾಯ್ಸ್.ಕಾಂ ಹಾಗೂ ಗರುಡಚರಿತೆ ವಾರಪತ್ರಿಕೆ ದಾಖಲೆ ಸಮೇತ ವರದಿಯನ್ನು ಪ್ರಕಟಸುತ್ತದೆ.

Leave a Reply

Your email address will not be published. Required fields are marked *

error: Content is protected !!