ದಾವಣಗೆರೆ ನಗರದ ಹೊಸ ರಿಂಗ್ ರಸ್ತೆ ಸುತ್ತಮುತ್ತ ಚಿರತೆ ವಿಡಿಯೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ದಾವಣಗೆರೆ: ದಾವಣಗೆರೆ ನಗರದ ಕುಂದುವಾಡ ಕೆರೆ ಬಳಿಯ ಹೊಸ ರಿಂಗ್ ರಸ್ತೆಯ ಬಾಲಾಜಿನಗರ ಸುತ್ತ ಮುತ್ತ ಚಿರತೆಯು ಕಾಣಿಸಿದೆ ಎಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿದ್ದು ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ.
ರಾತ್ರಿ ವೇಳೆ ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ ಇದು ಸತ್ಯವೇ ಅಥವಾ ಸುಳ್ಳೇ ಎಂಬುದನ್ನ ಅರಣ್ಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಈ ಹಿಂದೆ ಕೂಡ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ದಾಗಿನಕಟ್ಟೆ ಹಾಗೂ ಯಲ್ಲೋನಹಳ್ಳಿ ಸುತ್ತಮುತ್ತಲ ಕೃಷಿ ಜಮೀನು ಮತ್ತು ಅರಣ್ಯ ಪ್ರದೇಶಗಳಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಅಲ್ಲೂ ಸಹ ಅರಣ್ಯ ಇಲಾಖೆಯು ರಾತ್ರಿವೇಳೆಯಲ್ಲಿ ಸಾರ್ವಜನಿಕರು ಹೊರಬಾರದಂತೆ ತಿಳಿಸಿದ್ದರು.
ದಾವಣಗೆರೆ ನಗರದಲ್ಲೂ ಸಹ ಚಿರತೆ ಇರುವ ಬಗ್ಗೆ ಅರಣ್ಯಾಧಿಕಾರಿಗಳು ಸ್ಪಷ್ಟೀಕರಣ ನೀಡಿ ಭಯದ ವಾತಾವರಣ ಸೃಷ್ಟಿಯಾಗದಂತೆ ನಿಗಾವಹಿಸಬೇಕು ಎಂದು ಸಾರ್ವಜನಿಕರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಕೆಲವರು ಹೇಳುವ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಚಿರತೆಯ ಸಂಚಾರದ ವಿಡಿಯೋ ಹರಿದಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ, ಕೆಲವರು ಬೇಕು ಅಂತಾ ಎಲ್ಲೊ ಬೆರೆ ಕಡೆಯ ವಿಡಿಯೋ ವನ್ನ ದಾವಣಗೆರೆಯಲ್ಲಿ ಅಂತಾ ವೈರಲ್ ಮಾಡಿದ್ದಾರೆ ಅಂತಾರೆ ಸ್ಥಳೀಯರು. ಒಟ್ಟಾರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಿಡಿಯೋ ಅಸಲಿ ಹಾಗೂ ನಕಲಿನ ಬಗ್ಗೆ ಹೇಳಿಕೆ ನೀಡಲಿದ್ದಾರೆ.