25 ಕೆಜಿ 160 ಗ್ರಾಂ ಗಾಂಜಾ ನಾಶಪಡಿಸಿದ ದಾವಣಗೆರೆ ಪೊಲೀಸ್.!
ದಾವಣಗೆರೆ: ಗುಡ್ಡದ ರೀತಿಯಲ್ಲಿ ಬೆಳೆದಿದ್ದ ಗಾಂಜಾ ಮಾಫಿಯಾವನ್ನು ಡಿಸಿಆರ್‌ಬಿ ಡಿ ಎಸ್ ಪಿ ಬಿ.ಎಸ್.ಬಸವರಾಜ್ ನೇತೃತ್ವದ ಸಿಇಎನ್ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದ ಕಾರಣ ಬೃಹತ್ ಮರವಾಗಬೇಕಾಗಿದ್ದ ಗಾಂಜಾವನ್ನು ಗಿಡದಲ್ಲಿಯೇ ಚಿವುಟಿ ಹಾಕಿದ್ದಾರೆ.
ದಾವಣಗೆರೆಯಲ್ಲಿ ಗಾಂಜಾ ಬೆಳೆಯುವುದು ಕಡಿಮೆ..ಈ ಗಾಂಜಾ ಬೆಳೆ ಪಶ್ಚಿಮ ಘಟ್ಟ ಸೇರಿದಂತೆ ಇತರೆ ಕಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿತ್ತು. ದಿನ ಕಳೆದಂತೆ ತಂತ್ರಜ್ಞಾನ ಮುಂದುವರಿದಿದ್ದು, ಡ್ರೋಣ್ ಬಳಸಿ ಗಾಂಜಾ ಬೆಳೆ ಪತ್ತೆ ಮಾಡಲು ಪೊಲೀಸ್ ಇಲಾಖೆ ಮುಂದಾದ ವೇಳೆ ಅದನ್ನು ಬೆಳೆಯೋರು ಕಡಿಮೆಯಾದರು. ಹೀಗಿರುವಾಗ ಗಾಂಜಾ ಪೆಡ್ಲರ್‌ಗಳು ಬೇರೆ ರಾಜ್ಯಘಿ, ರಾಷ್ಟ್ರಗಳಿಂದ ಗಾಂಜಾ ತರಲು ಮುಂದಾಗಿರಬಹುದು ಎಂಬ ಅನುಮಾನವು ಇದೆ. ಅರಬ್ ರಾಷ್ಟ್ರಗಳಲ್ಲಿ ಮಾದಕ ದ್ರವ್ಯಗಳ ಮಾರಾಟದ ಕಡಿವಾಣಕ್ಕೆ ಯಾವುದೇ ಕಾನೂನುಗಳಿಲ್ಲಘಿ. ಇದು ಭಾರತಕ್ಕೆ ಮುಳುವು ಆಗಿರಬಹುದು ಎಂಬ ಕುತೂಹಲವಿದೆ. ಅಲ್ಲಿಂದ ಕೈಯಿಂದ, ಕೈ ಬದಲಾಗಿ ಗಾಂಜಾ ಸೊಪ್ಪು ಬರುತ್ತಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಅಲ್ಲದೇ ದಾವಣಗೆರೆ ಪೊಲೀಸರು ಎಲ್ಲ ಕಡೆ ಹದ್ದಿನ ಕಣ್ಣೀಟ್ಟಿದ್ದು, ಗಾಂಜಾ ಮಾರಾಟಗಾರರ ಮೇಲೆ ಕಣ್ಣೀಟ್ಟಿದ್ದಾರೆ. ಅದರಲ್ಲಿ ಸಿಇಎನ್ ಪೊಲೀಸರ ಪಾತ್ರವೂ ಹೆಚ್ಚಿದ್ದುಘಿ, ಕಾಲ ಕಾಲಕ್ಕೆ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಡ್ರಗ್ಸ್ ಮುಕ್ತ ಜಿಲ್ಲೆಯ ಗುರಿಹೊಂದಿರುವ ಪೊಲೀಸ್ ಇಲಾಖೆ ನಿರಂತರವಾಗಿ ದಾಳಿಗಳನ್ನು ನಡೆಸಿ ಕಳೆದ 3 ವರ್ಷಗಳಲ್ಲಿ ಅಪಾರ ಪ್ರಮಾಣದ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳ ಹೆಡೆ ಮುರಿ ಕಟ್ಟಿದೆ. ಕಳೆದ 2020 ರಿಂದ ಇಲ್ಲಿಯರೆಗೂ ಜಿಲ್ಲೆಯಲ್ಲಿ 12 ಪ್ರಕರಣಗಳನ್ನು ಪತ್ತೆ ಹಚ್ಚಿ 5 ಜನರಿಗೆ ನ್ಯಾಯಾಲಯದಿಂದ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
2020 ನೇ ಸಾಲಿನಲ್ಲಿ 4 ಪ್ರಕರಣಗಳನ್ನು ಪತ್ತೆ ಹಚ್ಚಿ 3 ಪ್ರಕರಣಗಳಲ್ಲಿ ಶಿಕ್ಷೆಯಾಗುವಂತೆ ಸಾಕ್ಷಿ ಸಂಗ್ರಹಿಸಲಾಗಿದೆ. 2021 ನೇ ಸಾಲಿನಲ್ಲಿ 7 ಪ್ರಕರಣಗಳನ್ನು ಪತ್ತೆ ಹಚ್ಚಿ ಇಬ್ಬರಿಗೆ ಶಿಕ್ಷೆ ಕೊಡಿಸಲಾಗಿದೆ. ಐದು ಪ್ರಕರಣ ನ್ಯಾಯಾಲಯದಲ್ಲಿದೆ. 2022 ನೇ ಸಾಲಿನಲ್ಲಿ ಅಂದರೆ ಕಳೆದ ಜನವರಿಯಿಂದ ಇಲ್ಲಿಯವರೆಗೂ 1 ಪ್ರಕರಣ ಪತ್ತೆ ಹಚ್ಚಲಾಗಿದೆ.
ಮಾದಕ ದ್ರವ್ಯ ನಾಶಪಡಿಸುವಿಕೆ
ಪೊಲೀಸ್ ಇಲಾಖೆ ನ್ಯಾಯಾಲಯದ ಸೂಚನೆ ಮೇರೆಗೆ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ದಿನದಂದು ನಿರ್ಜನ ಪ್ರದೇಶದಲ್ಲಿ 6 ಲಕ್ಷದ 34 ಸಾವಿರದ 420 ರೂ. ವೌಲ್ಯದ ಮಾದಕ ದ್ರವ್ಯವನ್ನು ಜು.26 ರಂದು ನಾಶಪಡಿಸಿದೆ.
ಯಾವ ಠಾಣೆಯಲ್ಲಿ ಎಷ್ಟು ಮಾದಕ ದ್ರವ್ಯ ನಾಶ
* ಸಿಇಎನ್ ಅಪರಾಧ ಠಾಣೆ : 4 ಲಕ್ಷದ 86 ಸಾವಿರ ಮೌಲ್ಯದ ಮಾದಕ ದ್ರವ್ಯ ವಶ
*ವಿದ್ಯಾನಗರ : 78,000
*ಬಸವಾಪಟ್ಟಣ : 27,000
*ಆಜಾದ್‌ನಗರ: 28,420
*ಹರಿಹರ : 15,000