ದಾವಣಗೆರೆ ಲೋಕ ಅದಾಲತ್‍ನಲ್ಲಿ 12,958 ಪ್ರಕರಣ ಇತ್ಯರ್ಥ

ದಾವಣಗೆರೆ: ಜಿಲ್ಲಾ ನ್ಯಾಯಾಲಯವೂ ಸೇರಿ ಜಿಲ್ಲೆಯಲ್ಲಿರುವ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ಒಟ್ಟು 21,529 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳ ಪೈಕಿ 12,958 ಪ್ರಕರಣಗಳು ಇತ್ಯರ್ಥಗೊಂಡವು. ಒಟ್ಟು 12.29 ಕೋಟಿ ಪರಿಹಾರ ನೀಡಲಾಯಿತು.

ರಾಜಿಯಾಗಬಲ್ಲ 347 ಅಪರಾಧ ಪ್ರಕರಣಗಳಲ್ಲಿ 42 ಪ್ರಕರಣಗಳು ಇತ್ಯರ್ಥಗೊಂಡವು. 95 ಚೆಕ್ ಅಮಾನ್ಯ ಪ್ರಕರಣಗಳು ಇತ್ಯರ್ಥವಾಗಿದ್ದು, 2.71 ಕೋಟಿ ಪರಿಹಾರ ಒದಗಿಸಲಾಯಿತು. ಬ್ಯಾಂಕ್‍ಗೆ ಸಂಬಂಧಿಸಿದ 25 ಪ್ರಕರಣಗಳನ್ನು ಇತ್ಯರ್ಥ ಪಡಿಸಿ 69 ಲಕ್ಷ ಪರಿಹಾರ ಕಲ್ಪಿಸಲಾಯಿತು. ಹಣ ವಸೂಲಾತಿಯ 18 ಪ್ರಕರಣಗಳಲ್ಲಿ 53 ಲಕ್ಷ ಪರಿಹಾರ ನೀಡಲು ತಿಳಿಸಲಾಯಿತು.
ಮೋಟರ್ ವಾಹನ ಕಾಯ್ದೆಯಡಿ 51 ಪ್ರಕರಣಗಳನ್ನು ಬಗೆಹರಿಸಿ, 1.47 ಕೋಟಿ ಪರಿಹಾರವನ್ನು ಕೊಡಿಸಲಾಯಿತು. ಕಾರ್ಮಿಕರ ಸಮಸ್ಯೆ, ಮರಳು ಅಕ್ರಮ ಸಾಗಾಟ, ಪಾಲುದಾರಿಕೆ ಸಮಸ್ಯೆ, ಸಿವಿಲ್ ವ್ಯಾಜ್ಯಗಳು, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಹೀಗೆ ನಾನಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಸಿದರು.

Leave a Reply

Your email address will not be published. Required fields are marked *

error: Content is protected !!