ದಾವಣಗೆರೆಯಲ್ಲಿ ‘ಜೈಲರ್’ ಪುಸ್ತಕ ಉಡುಗೊರೆಯಾಗಿ ಪಡೆದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ

ದಾವಣಗೆರೆ: ಆಚಾರ್ಯ ಶ್ರೀ ಅಭಯ ಶೇಖರ್ ಸುರಿಶ್ವರಜೀ ಮಹಾರಾಜ್ ಅವರು ಬರೆದಿರುವ ‘ಜೈಲರ್’ ಪುಸ್ತಕವನ್ನು ಇಂದು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರಿಗೆ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್ ಉಡುಗೊರೆಯಾಗಿ ನೀಡಿದರು.
ಇತ್ತೀಚೆಗಷ್ಟೇ ಆಚಾರ್ಯ ಶ್ರೀ ಅಭಯ ಶೇಖರ್ ಸುರಿಶ್ವರಜೀ ಮಹಾರಾಜ್ ಅವರು ಹಿಂದಿ, ಗುಜರಾತಿ, ಇಂಗ್ಲೀಷ್ ನಲ್ಲಿ ಬರೆಯಲಾಗಿದ್ದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಲೋಕಾರ್ಪಣೆ ಗೊಳಿಸಿದ್ದರು. ಯುವ ಜನರು ಮಾನಸಿಕ ಕ್ಷೋಭೆಯಿಂದ ಹೊರಬರಲು ಈ ಕೃತಿ ಹೆಚ್ಚು ಸಹಾಯಕ ಎಂದು ಹೇಳಿದ್ದರು.
ಇದೇ ಕೃತಿತನ್ನು ಗೌತಮ್ ಜೈನ್ ಅವರು ಅಮಿತ್ ಷಾಗೆ ನೀಡಿದರು. ಕೃತಿ ಸ್ವೀಕರಿಸಿದ ಗೃಹಮಂತ್ರಿಗಳು ಖಂಡಿತವಾಗಿ ಓದುವುದಾಗಿ ತಿಳಿಸಿದರು.