Devadasi Paddathi:ದೇವದಾಸಿ ಪದ್ದತಿ ನಿಷೇಧಿಸಿ ಕಾಯ್ದೆ ಜಾರಿಗೆ ತಂದಿದ್ದರೂ ದೇವದಾಸಿ ಪದ್ದತಿ ಸಂಪೂರ್ಣ ನಿಂತಿಲ್ಲ: ಹಿರಿಯ ವಕೀಲ ಎಲ್.ಹೆಚ್.ಅರುಣ್‌ಕುಮಾರ್

ದಾವಣಗೆರೆ: ಹಲವಾರು ಸಂಘಟನೆಗಳ ಹೋರಾಟ ಹಾಗೂ ಅಕ್ಷರ ಅರಿವಿನ ಜಾಗೃತಿಯ ಮೂಲ ಧ್ವನಿಯಾಗಿ ದೇವದಾಸಿ ಪದ್ದತಿ ನಿಷೇಧಿಸಿ 1982ರಲ್ಲಿ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಸಹ ದೇವದಾಸಿ ಪದ್ದತಿ ಸಂಪೂರ್ಣವಾಗಿ ನಿಲ್ಲಿಸಲಾಗಿಲ್ಲ ಎಂದು ಹಿರಿಯ ವಕೀಲರಾದ ಎಲ್.ಹೆಚ್.ಅರುಣ್‌ಕುಮಾರ್ ಅಸಮಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಆವರಣದಲ್ಲಿ ವಿಮುಕ್ತ ದೇವದಾಸಿ ವೇದಿಕೆ ಹಾಗೂ ಇತರ ಪ್ರಗತಿ ಪರ ಸಂಘಟನೆಗಳ ಸಹಯೋಗದಲ್ಲಿ ದೇವದಾಸಿ ಪದ್ದತಿ ನಿರ್ಮೂಲನೆ, ಬದುಕುವ ಹಕ್ಕು ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ನೀಡುವ ಸಮಗ್ರ ಕಾಯ್ದೆಗೆ ಒತ್ತಾಯಿಸಿ ರಾಜ್ಯ ಮಟ್ಟದ ಜನ ಜಾಗೃತಿ ಕಲಾ ಜಾಥ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವದಾಸಿ ಪದ್ದತಿ ಆಚರಣೆಯಿಂದ ಜನ್ಮ ತಾಳಿರುವ ಎಲ್ಲ ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ ನೂತನ ಕಾನೂನು ಅಗತ್ಯವಿದ್ದು, ಆ ನಿಟ್ಟಿನಲ್ಲಿ ರಾಷ್ಟಿçÃಯ ಕಾನೂನು ವಿಶ್ವ ವಿದ್ಯಾನಿಯಲದ ಪರಿಣಿತರಿಂದ ರೂಪಿಸಿರುವ ಸಮಗ್ರ ಕರಡು ಮಸೂದೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ಹೇಳಿದರು.

ದೇವದಾಸಿ ಪದ್ದತಿ ನಿರ್ಮೂಲನೆ, ಪುನರ್ ವಸತಿ ಮತ್ತು ದೇವದಾಸಿಯರ ಸಮೀಕ್ಷೆ ನಡೆಸುವ ಮೂಲಕ ಮಾಶಾಸನ ದೊರೆಯುವಂತೆ ಕಾರ್ಯನ್ಮುಖರಾಗಬೇಕು ಎಂದರು.

ಪಿಯುಸಿಎಲ್ ಕರ್ನಾಟಕದ ಪ್ರೊ.ವೈ.ಜೆ.ರಾಜೇಂದ್ರ ಮಾತನಾಡಿ, ಬದುಕಿರುವ ಮಾಜಿ ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳ ಬದುಕುವ ಹಕ್ಕಿನ ಮೂಲಭೂತ ಪ್ರಶ್ನೆಗೆ ಸರ್ಕಾರ ಸೇರಿದಂತೆ ನಾಗರೀಕ ಸಮಾಜ ಉತ್ತರ ನೀಡಬೇಕಿದೆ,. ಕಲಾ ಜಾಥದ ಮೂಲಕ ದೇವದಾಸಿಯರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ವಿಮುಕ್ತ ಮಹಿಳಾ ದೇವದಾಸಿ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಕಲಾ ಜಾಥದ ಸಂಚಾಲಕ ಚಂದಾಲಿAಗ ಕಲಾಲ್ಬಂಡಿ ಮಾತನಾಡಿ, ಸರ್ಕಾರ ವಿಶೇಷ ಪ್ಯಾಕೇಜ್ ನಿಡುವ ಮೂಲಕ ದೇವದಾಸಿ ತಾಯಂದಿರು ಮತ್ತು ಅವರ ಕುಟುಂಬದ ಮಕ್ಕಳ ತಮ್ಮ ಭವಿಷ್ಯದ ಸ್ವಾಭಿಮಾನದ ಬದುಕು ಕಟ್ಟಿಕೊಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರದಲ್ಲಿ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ, ಎ.ನರಸಿಂಹಮೂರ್ತಿ ರಂಗನಿರ್ದೇಶಕ ಎಂ.ಆರ್. ಭೇರಿ, ವಕೀಲರಾದ ಡಿ.ಎಸ್.ಬಾಬಣ್ಣ, ಅನಿಷ್‌ಪಾಷಾ, ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಿ.ಉಮೇಶ್, ಸ್ಲಂ ಜನಾಂದೋಲನದ ಕರ್ನಾಟಕ ಜಿಲ್ಲಾ ಸಂಚಾಲಕರಾದ ರೇಣುಕಾ ಎಲ್ಲಮ್ಮ, ಶಬ್ಬೀರ್ ಸಾಬ್, ಸಾವಿತ್ರಮ್ಮ, ಪಡಿಯಮ್ಮ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಜಾಥಾದವರು ಪ್ರಸ್ತುತ ಪಡಿಸಿದ ದೇವರಿಗೆ ಸವಾಲು ನಾಟಕ ಪ್ರದರ್ಶನ ಜನರ ಪ್ರಶಂಸೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!