ರಂಗೋಲಿಯಲ್ಲಿ ಮೂಡಿದ ಮತದಾನ ಜಾಗೃತಿಯಲ್ಲಿ ಜಿಲ್ಲಾಧಿಕಾರಿ ಭಾಗಿ

ರಂಗೋಲಿಯಲ್ಲಿ ಮೂಡಿದ ಮತದಾನ ಜಾಗೃತಿಯಲ್ಲಿ ಜಿಲ್ಲಾಧಿಕಾರಿ ಭಾಗಿ

ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಗರದ ಗಾಜಿನ ಮನೆಯಲ್ಲಿ ಏ.22 ರಂದು ರಂಗೋಲಿ ಹಾಕುವುದರ ಮೂಲಕ ವೀಕ್ಷಕರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ನಾಲ್ಕನೇ ಶನಿವಾರ ರಜಾ ದಿನ ಹಾಗೂ ಬೇಸಿಗೆ ರಜಾ ನಿಮಿತ್ತ ಗಾಜಿನ ಮನೆ ವೀಕ್ಷಣೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ರಂಗೋಲಿ ಮೂಲಕ ವಿವಿಧ ಘೋಷವಾಕ್ಯಗಳನ್ನು ಬಿಡಿಸಲಾಯಿತು.

ರಂಗೋಲಿಯಲ್ಲಿ ಮೂಡಿದ ಮತದಾನ ಜಾಗೃತಿಯಲ್ಲಿ ಜಿಲ್ಲಾಧಿಕಾರಿ ಭಾಗಿ

ಪ್ರಜಾಪ್ರಭುತ್ವ ಉಳಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ನಮ್ಮ ಮತ ನಮ್ಮ ಭವಿಷ್ಯ, ತಪ್ಪದೇ ಮತದಾನ ಮಾಡಿ, ಚುನಾವಣೆ ಸಂತೆಯಲ್ಲ, ನಮ್ಮ ಮತ ಮಾರಾಟಕ್ಕಿಲ್ಲ, ಆರೋಗ್ಯಕ್ಕೆ ದವಸಧಾನ್ಯ ದೇಶಕ್ಕೆ ಮತ ಮಾನ್ಯ, ಮತದಾನ ನಮ್ಮ ಹಕ್ಕು ಎಂಬ ರಂಗು ರಂಗಿನ ಚಿತ್ರಗಳನ್ನು ರಂಗೋಲಿಯ  ಮೂಲಕ ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ಪಶು ಸಂಗೋಪನ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಸುಂಕದ್ , ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ರವಿ ,ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿ ಮಲ್ಲ ನಾಯ್ಕ, ಉಪಸ್ಥಿತಿರಿರುವರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!