ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ 3,349 ಕೋಟಿ ರೂ. ದಾಖಲೆ ಆದಾಯ

ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ 3,349 ಕೋಟಿ ರೂ. ದಾಖಲೆ ಆದಾಯ

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು 2022ರಲ್ಲಿ 3,349 ಕೋಟಿ ರೂಪಾಯಿ ದಾಖಲೆಯ ಆದಾಯ ಗಳಿಸಿದೆ.
ಸಾಂಕ್ರಾಮಿಕ ರೋಗಕ್ಕೂ ಮುನ್ನ ಸಾರಿಗೆ ನಿಗವು 2019ರಲ್ಲಿ 3,182 ಕೋಟಿ ರೂ ಆದಾಯವನ್ನು ಗಳಿಸಿತ್ತು. 2020ರಲ್ಲಿ ಈ ಆದಾಯ 157 ಕೋಟಿ ರೂಗೆ ಇಳಿಕೆಯಾಗಿತ್ತು. 2022 ರಲ್ಲಿ 93 ಕೋಟಿ ರೂ ಗಳಿಸಿತ್ತು.
ಇದರಿಂದ ಸಾರಿಗೆ ನಿಗಮವು ನಷ್ಟವನ್ನು ಎದುರಿಸುತ್ತಿತ್ತು. ಇದೀಗ ನಿಗಮಕ್ಕೆ 3,349 ಕೋಟಿ ರೂ ಆದಾಯ ಬಂದಿದ್ದು, ತುಸು ಚೇತರಿಸಿಕೊಂಡಂತಾಗಿದೆ. ಇದು ಈವರೆಗಿನ ದಾಖಲೆಯ ಆದಾಯವಾಗಿದೆ ಎಂದು ತಿಳಿದುಬಂದಿದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಮಾತನಾಡಿ, 2016 ರಲ್ಲಿ 2,738 ಕೋಟಿ ರೂಪಾಯಿ ಆದಾಯ ಬಂದಿತ್ತು. 2017 ರಲ್ಲಿ 2,975 ಕೋಟಿ ರೂಪಾಯಿ, 2018 ರಲ್ಲಿ 3,131 ಕೋಟಿ ರೂಪಾಯಿ ಮತ್ತು 2019 ರಲ್ಲಿ 3,182 ಕೋಟಿ ರೂಪಾಯಿಗಳ ಆದಾಯ ಬಂದಿತ್ತು. “ಕೋವಿಡ್ ಬಸ್ ನಿಗಮದ ಸೇವೆಗಳು ಮತ್ತು ಅದರ ಸಂಚಾರ ಆದಾಯದ ಮೇಲೆ ಪರಿಣಾಮ ಬೀರಿತ್ತು. ಆದಾಯವು 1,569 ಕೋಟಿಗೆ ಕುಸಿದು 2021ರಲ್ಲಿ ಮತ್ತೆ 2,037 ಕೋಟಿ ರೂ.ಗೆ ಹೆಚ್ಚಳವಾಗಿತ್ತು. 2022-23ರಲ್ಲಿ ಆದಾಯವು 3,349 ಕೋಟಿ ರೂ.ಗಳೊಂದಿಗೆ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಯಾವುದೇ ರೀತಿಯ ಟಿಕೆಟ್ ದರ ಪರಿಷ್ಕರಣೆ ಮಾಡದೆ ಆದಾಯವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.
ಆದಾಯ ಹೆಚ್ಚಳದ ಹೊರತಾಗಿಯೂ ಕೆಎಸ್‌ಆರ್‌ಟಿಸಿ ನಷ್ಟವನ್ನೇಕೆ ಅನುಭವಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶೇ.35ರಷ್ಟು ಸಂಚಾರದಲ್ಲಿ ಬಸ್ ಗಳಲ್ಲಿ ಶೇ.50ಕ್ಕಿಂತ ಕಡಿಮೆ ಜನರಿರುತ್ತಾರೆ. ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ, ಪೀಕ್ ಆವರ್ ಅಲ್ಲದ ಸಮಯದಲ್ಲಿ ಕಡಿಮೆ ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ. ಬಸ್ ಗಳಲ್ಲಿ ಯಾವಾಗಲೂ ಶೇ.70ರಷ್ಟು ಜನರು ಪ್ರಯಾಣಿಸುವಂತಿರಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!