ಖ್ಯಾತ ವೈದ್ಯೆ, ಲೇಖಕಿ, ಸಾಹಿತಿ, ಕಿರುತೆರೆ ನಟಿ ಡಾ.ಎಚ್.ಗಿರಿಜಮ್ಮ ಇನ್ನಿಲ್ಲ

IMG-20210817-WA0014

 

ದಾವಣಗೆರೆ: ಖ್ಯಾತ ವೈದ್ಯೆ, ಪ್ರಸೂತಿ ಹಾಗು ಸ್ತ್ರೀರೋಗ ತಜ್ಞೆ, ಲೇಖಕಿ, ಸಾಹಿತಿ, ಕಿರುತೆರೆ ನಟಿ ಡಾ. ಎಚ್. ಗಿರಿಜಮ್ಮ ಮಂಗಳವಾರ ಹೃದಯಾಘಾತದಿಂದ ದಾವಣಗೆರೆಯಲ್ಲಿ ನಿಧನರಾಗಿದ್ದಾರೆ.

ಡಾ. ಎಚ್. ಗಿರಿಜಮ್ಮ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಹರಿಹರದಲ್ಲಿ ಹುಟ್ಟಿದ್ದು, ದಾವಣಗೆರೆಯಲ್ಲಿ ಪಿಯೂಸಿವರೆಗೂ ಅಧ್ಯಯನ ಮಾಡಿದ್ದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದರು.

ಅವರ ತಾಯಿಯ ಆಶಯದಂತೆ ಗಿರಿಜಮ್ಮ ವೈದ್ಯರಾಗಿ 20 ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರು. ಭಾಸ್ಕರ್ ಎನ್ನುವವರೊಂದಿಗೆ ವಿವಾಹವಾಗಿದ್ದರು.

ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದ ಗಿರಿಜಮ್ಮ ಮೊದಲ ಕತೆ ‘ಹೂಬಳ್ಳಿಗೆ ಈ ಆಸರೆ’. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳು ಪ್ರಕಟವಾಗಿವೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ ಮುಂತಾದ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸೇವೆಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!