ಮಾಯಕೊಂಡದಲ್ಲಿ ಚುನಾವಣೆ ಬಹಿಷ್ಕಾರ ತೀರ್ಮಾನ
ದಾವಣಗೆರೆ: ಮಾಯಕೊಂಡ ಕ್ಷೇತ್ರವನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡದಿರುವ ಅಲ್ಲಿನ ಜನಪ್ರತಿನಿಧಿಗಳ ಅಸಹಾಯಕತೆ ಖಂಡಿಸಿ ಬರುವ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ತಿಳಿಸಿದೆ.
ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರವಾಗಿ ಏಳು ಬಾರಿ ಚುನಾವಣೆ ಕಂಡಿದ್ದು, ಅಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರತಿನಿಧಿಗಳು ವಿಜೇರಾಗಿದ್ದರು. ಈಗಾಗಲೇ ಮಾಯಕೊಂಡವನ್ನು ತಾಲ್ಲೂಕಾಗಿ ಘೋಷಿಸುವಂತೆ ಹಲವಾರು ಹೋರಾಟಗಳು ನಡೆದಿವೆಯಾದರೂ ಫಲಕಾರಿಯಾಗಿಲ್ಲ. ಆದ್ದರಿಂದ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸುವುದು ಖಚಿತ ಎಂದು ಸಮಿತಿ ಸಂಚಾಲಕರಾದ ಚಿನ್ನಸಮುದ್ರ ಶೇಖರ್‌ನಾಯ್ಕ್, ಮಾಯಕೊಂಡದ ಅಶೋಕ್, ಪ್ರತಾಪ್ ಮತ್ತಿತರರು ಸ್ಪಷ್ಟಪಡಿಸಿದ್ದಾರೆ.