Farmer; ಬೆಳೆಹಾನಿ ವೀಕ್ಷಿಸಿದ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ
ದಾವಣಗೆರೆ, ಆ.28: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ (Gunjan Krishna) ಹಾಗೂ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಆನಗೋಡು ಹೋಬಳಿಯಲ್ಲಿ ರೈತರ (Farmer) ಸಮ್ಮುಖದಲ್ಲಿ ಬೆಳೆಹಾನಿ ವೀಕ್ಷಣೆ ಮಾಡಿ ರೈತರಿಂದ ಅಹವಾಲು ಸ್ವೀಕರಿಸಿದರು.
ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು ಮೆಕ್ಕೆಜೋಳ ಸಂಪೂರ್ಣ ಬಾಡಿ ಹೋಗಿವೆ. ಈ ವೇಳೆ ರೈತರು ತಮಗಾದ ನಷ್ಟದ ಬಗ್ಗೆ ತಿಳಿಸಿದರು.
Gunjan Krishna; ಗ್ಯಾರಂಟಿ ಯೋಜನೆಗಳ ದುರ್ಬಳಕೆಯಾಗದಂತೆ ಪರಿಶೀಲಿಸಿ ಅನುಮೋದಿಸಿ
ವಸತಿ ಶಾಲೆಗೆ ಭೇಟಿ:
ದಾವಣಗೆರೆ ತಾಲ್ಲೂಕಿನ ವಡೇರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶೈಕ್ಷಣಿಕ ಚಟುವಟಿಕೆ ಮತ್ತು ಶಾಲೆಯ ಸ್ವಚ್ಛತೆ ಪರಿಶೀಲಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ:
ಆನಗೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಔಷಧ ದಾಸ್ತಾನು ಕೊಠಡಿ ವೀಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.