ಗಿರೀಶ್ ಡಿ.ಆರ್. ಹೋರಾಟದ ಹೆಜ್ಜೆ ಗುರುತುಗಳು! ತನ್ನಂತೆ ಇತರರನ್ನು ಕಾಣುವ ಗಿರೀಶ್ ಸಮಾಜಕ್ಕೆ ಮಾದರಿ

ವಿದ್ಯಾನಾಯ್ಕ್ ಅರೇಹಳ್ಳಿ

ದಾವಣಗೆರೆ : ಮನುಷ್ಯನಿಗೆ ಮನೆಯೇ ಮೊದಲ ಪಾಠ ಶಾಲೆ, ಮನೆಯ ವಾತಾವರಣ ಯಾವ ರೀತಿ ಇರುತ್ತದೆಯೋ ಅದೇ ರೀತಿ ಬೆಳೆಯುವ ಮಕ್ಕಳು ಇರುತ್ತಾರೆ. ಒಳ್ಳೆಯ ವಿಚಾರಗಳನ್ನು ಮಕ್ಕಳಿಗೆ ಕಲಿಸಿದರೆ ಮಕ್ಕಳು ಸಹ ಒಳ್ಳೆಯ ದಾರಿಯಲ್ಲಿ ನಡೆಯುತ್ತಾರೆ ಎನ್ನುವುದಕ್ಕೆ ಸೂಕ್ತ ನಿದರ್ಶನ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್. ಹೌದು, ತಾತ ದಿವಂಗತ ಹೇಮ್ಲಾನಾಯ್ಕ್ ಅವರ ಸಾಮಾಜಿಕ ಚಿಂತನೆ, ಸಾಮಾಜಿಕ ಕಾರ್ಯವನ್ನೇ ಸ್ಫೂರ್ತಿಯಾಗಿಸಿಕೊಂಡು ತಾತನ ದಾರಿಯಲ್ಲೇ ನಡೆಯುತ್ತಿದ್ದಾರೆ ಗಿರೀಶ್ ಡಿ.ಆರ್.

• ತಾತ ಹೇಮ್ಲಾನಾಯ್ಕ್ ಸಾಮಾಜಿಕ ಸೇವೆಯೇ ಗಿರೀಶ್‌ಗೆ ಸ್ಪೂರ್ತಿ, ತಾತನ ಹೆಜ್ಜೆಯಲ್ಲಿ ಮುಂದಡಿ ಇಡುತ್ತಿರುವ ಗಿರೀಶ್ ಡಿ.ಆರ್. : ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ತಾಂಡದ ರಾಮನಾಯ್ಕ್ ಮತ್ತು ಸಾಕಿಬಾಯಿ ದಂಪತಿಯ ಮೊದಲ ಮಗ ಗಿರೀಶ್ ಡಿ.ಆರ್. ಇವರ ತಂದೆ ರಾಮಾನಾಯ್ಕ್ ಉಪನ್ಯಾಸಕರು, ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ದೊಡ್ಡೇರಿ ತಾಂಡದ ಜನ ಅತ್ಯಂತ ಕಡು ಬಡತನದಿಂದ ಜೀವನ ಸಾಗಿಸುತ್ತಿರುವವರು. ಇಲ್ಲಿ ಸುಮಾರು 60 ಮನೆಗಳಿವೆ. ತಾಂಡಾದ ಬಹುಪಾಲು ಕುಟುಂಬಗಳು ದಿನನಿತ್ಯದ ಕೂಲಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇವರ ತಾತ ದಿವಂಗತ ಹೇಮ್ಲಾನಾಯ್ಕ್ ಅವರ ಕಾಲದಲ್ಲಿ ಇದಕ್ಕೂ ಹೆಚ್ಚಿನ ಬಡತನವಿತ್ತು ಈ ತಾಂಡದಲ್ಲಿ. ಇಂತಹ ಸಂದರ್ಭಗಳಲ್ಲಿ ಗಿರೀಶ್ ಅವರ ತಾತ ದಿವಂಗತ ಹೇಮ್ಲಾನಾಯ್ಕ್ ತಮ್ಮ ತಾಂಡಾ ಹಾಗೂ ಅಕ್ಕಪಕ್ಕದ ಊರುಗಳ ಅನಾರೋಗ್ಯ ಪೀಡಿತ ದನಕರುಗಳಿಗೆ, ಮೂಕಪ್ರಾಣಿಗಳಿಗೆ ಉಚಿತವಾಗಿ ನಾಟಿ ಔಷಧ ನೀಡುವುದರಲ್ಲಿ ಹೆಸರು ವಾಸಿಯಾಗಿದ್ದರು. ಅವರ ಪ್ರಾಮಾಣಿಕ ಸೇವೆಯನ್ನೇ ಮೈಗೂಡಿಸಿಕೊಂಡು ಬಂದ ಗಿರೀಶ್ ಡಿ.ಆರ್. ಇಂದು ಸಾಧ್ಯವಾದಷ್ಟು ಯುವಕರಿಗೆ, ವಿದ್ಯಾರ್ಥಿಗಳಿಗೆ ಸಲಹೆ, ಸೂಚನೆ ಹಾಗೂ ವಿವಿಧ ರೀತಿಯ ಸಹಾಯ ಮಾಡುವ ಮೂಲಕ ಹೆಸರು ವಾಸಿ ಯಾಗಿದ್ದಾರೆ. ನಮ್ಮ ತಾತ ಮಾಡುತ್ತಿದ್ದ ಸಾಮಾಜಿಕ ಸೇವೆಯೇ ನಾನು ಇಂದು ಮಾಡುವ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಮೊದಲ ಸ್ಪೂರ್ತಿ ಎನ್ನುತ್ತಾರೆ ಗಿರೀಶ್ ಡಿ.ಆರ್.

• ಗಿರೀಶ್ ಡಿ.ಆರ್. ಹೋರಾಟದ ಹೆಜ್ಜೆ ಗುರುತುಗಳು: ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ.ಆರ್ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಎತ್ತಿದ ಕೈ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ರೂಪಿಸಲು ತಮ್ಮ ಕೈಲಾದ ಸಲಹೆ ಸೂಚನೆಗಳು ನೀಡುತ್ತಾ ತನ್ನಂತೆ ಇತರರನ್ನು ಕಾಣುವ ಮನೋಭಾವದವರು. ಅಷ್ಟೇಅಲ್ಲದೆ ಇಲ್ಲಿಯ ವರೆಗೂ ಸಮುದಾಯದ ಜನರ ಅಭಿವೃದ್ದಿಗೆ ಶ್ರಮಿಸುವ ಇವರು ವಿವಿಧ ಯಶಸ್ವಿ ಹೋರಾಟಗಳನ್ನು ಮಾಡುವ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ, ಪರಿಸರ ಜಾಗೃತಿ, ರೈತಪರ, ಕಾರ್ಮಿಕ ಪರ, ವಿದ್ಯಾರ್ಥಿಗಳ ಪರ ಹೋರಾಟಗಳಲ್ಲಿ ಗಿರೀಶ್ ಡಿ.ಆರ್. ಮುಂಚೂಣಿಯಲ್ಲಿರು ತ್ತಾರೆ. ಇವರ ಇಂತಹ ಮಾನವೀಯ ಗುಣವುಳ್ಳ ವ್ಯಕ್ತಿತ್ವವನ್ನು ಗಮನಿಸಿ ರಾಜ್ಯ ಹಲವು ಸಂಘ ಸಂಸ್ಥೆಗಳು ಇವರನ್ನು ಪುರಸ್ಕರಿಸಿವೆ.

8 ಸಾವಿರಕ್ಕೂ ಹೆಚ್ಚು ಆಹಾರ ಕಿಟ್ ವಿತರಣೆ: ಇನ್ನೂ ಕೋವಿಡ್‌ನಂತಹ ತುರ್ತು ಸಂದರ್ಭಗಳಲ್ಲಿ ವಿವಿಧ ಗ್ರಾಮ, ನಗರ ಪ್ರದೇಶಗಳಿಗೆ ಭೇಟಿ ನೀಡಿ ಆಹಾರ ಕಿಟ್, ಔಷಧಿ ಇತ್ಯಾದಿಗಳನ್ನು ವಿತರಿಸಿ ಸೈ ಎನಿಸಿಕೊಂಡವರು. ಕೊರೋನಾ ಅಲೆ ಸಂದರ್ಭದಲ್ಲಿ 8 ಸಾವಿರ ರೇಷನ್ ಕಿಟ್ ಹಾಗೂ 5 ಸಾವಿರಕ್ಕೂ ಹೆಚ್ಚು ಮೆಡಿಕಲ್ ಐಸೋಲೇಷನ್ ಕಿಟ್‌ ಗಳನ್ನು ವಿತರಿಸುವ ಮೂಲಕ ಮಾದರಿಯಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಮತಾಂತರ ಜಾಗೃತಿ ಕಾರ್ಯಕ್ರಮ, ರೈತ ಪರ ಹೋರಾಟಗಳಲ್ಲಿ, ಕೋವಿಡ್‌ನಂತಹ ಸಂದರ್ಭಗಳಲ್ಲಿ ವಿಕಲಚೇತನರು, ಬಡ ಕೂಲಿ ಕಾರ್ಮಿ ಕರಿಗೆ ಹೀಗೆ ಪ್ರತಿಯೊಂದು ಸಮುದಾಯಕ್ಕೂ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಸೇರಿದಂತೆ ತಮ್ಮ ಮನಸ್ಸು ಪ್ರೇರೇಪಿಸುವ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿಯಾಗಿದ್ದಾರೆ ಗಿರೀಶ್ ಡಿ.ಆರ್.

• ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕನಸು ಹೊತ್ತ ಗಿರೀಶ್ ತಂದೆ ರಾಮಾನಾಯ್ಕ್: ಗಿರೀಶ್ ಡಿ.ಆರ್. ಇವರ ಇಂದಿನ ಸಾಮಾಜಿಕ ಸೇವೆಗೆ ಅವರ ತಂದೆ ರಾಮನಾಯ್ಕ್ ಕೂಡ ಸ್ಪೂರ್ತಿ. ಅತ್ಯಂತ ಕಡು ಬಡತನದಲ್ಲಿ ಶಿಕ್ಷಣ ಪಡೆದು ಪ್ರಸ್ತುತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಯ್ಕ್ ಅವರಿಗೆ ವಿದ್ಯಾರ್ಥಿಗಳೆಂದರೆ ಅಚ್ಚುಮೆಚ್ಚು. ವಿದ್ಯಾರ್ಥಿಗಳಿಗೆ ವಿದ್ಯಾ ದಾನದ ಜೊತೆಗೆ ವಯಕ್ತಿಕ ಸಹಾಯ ಮಾಡುವ ಮೂಲಕ ರಾಮನಾಯ್ಕ್ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಾಗಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ದೇಶದ ಅತ್ಯುನ್ನತ ಸೇವೆಗಳಾದ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಇನ್ನಿತರೆ ಆಡಳಿತಾತ್ಮಕ ಸೇವೆಗಳಿಗೆ ಕಳಿಸಬೇಕೆಂಬುದು ಇವರ ಆಶಯ. ಅದೇ ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿ ಗಳಿಗೆ ಬೋಧಿಸಿದ್ದಾರೆ. ಅಷ್ಟೇಅಲ್ಲದೆ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಅರಿವಿನ ಜೊತೆಗೆ ಸಾಮಾಜಿಕ ಚಿಂತನೆ, ಸಮಾನತೆ, ಮಾನವೀಯ ಮೌಲ್ಯಗಳನ್ನು ಪರಿಚಯಿಸುವುದು ಕೂಡಾ ಇವರ ವೃತ್ತಿಯ ಪ್ರಮುಖ ಭಾಗವಾಗಿದೆ ಎಂದು ನಂಬಿರುವವರು ರಾಮಾನಾಯ್ಕ್.

ರಾಮಾನಾಯ್ಕ್ ಅವರು ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 5 ವರ್ಷ ಹಾಗೂ ಭದ್ರಾವತಿ ತಾಲೂಕಿನ ಆನವೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ 10 ವರ್ಷ ಉಪನ್ಯಾಸಕರಾಗಿ ಮತ್ತು ಪ್ರಸ್ತುತ ಶಿವಮೊಗ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇವರಿಗೆ ಜನ ಮೆಚ್ಚಿದ ಶಿಕ್ಷಕ ಎಂಬ ಪ್ರಶಸ್ತಿ ಸೇರಿದಂತೆ ಇತರೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿರುವುದು ಸಹ ಇವರ ಪ್ರಾಮಾಣಿಕ ಕರ್ತವ್ಯಕ್ಕೆ ಸಿಕ್ಕ ಪ್ರತಿಫಲ.

 ಗಿರೀಶ್ ಡಿ.ಆರ್ ಅವರ ಕುಟುಂಬ ಮತ್ತು ವಿದ್ಯಾಭ್ಯಾಸ : ಬಂಜಾರ ವಿದ್ಯಾರ್ಥಿ ಸಂಘದ ಗಿರೀಶ್ ಡಿ.ಆರ್ ಅವರ ತಂದೆ ರಾಮಾನಾಯ್ಕ್ ತಾಯಿ ಸಾಕಿಬಾಯಿ, ಗಿರೀಶ್ ಡಿ.ಆರ್ ಇವರೆ ಮೊದಲ ಮಗ, ಇವರು ಡಿಪ್ಲೋಮೋ ಮೆಕ್ಯಾನಿಕಲ್ ವ್ಯಾಸಂಗ ಮಾಡಿದ್ದಾರೆ. ಇವರಿಗೆ ಮಂಜುಳಾ ಡಿ.ಆರ್. ಹಾಗೂ ವಸುಂಧರ ಡಿ.ಆರ್ ಎಂಬ ಇಬ್ಬರು ತಂಗಿಯರಿದ್ದಾರೆ. ಮಂಜುಳ ಡಿ.ಆರ್. ಸಿವಿಲ್ ಇಂಜಿನಿಯರ್ ಮತ್ತು ವಸುಂಧರ ಡಿ.ಆರ್ ಡಿಪ್ಲೋಮೋ ಸಿವಿಲ್ ಇಂಜಿನಿಯರಿ0ಗ್ ವಿದ್ಯಾಭ್ಯಾಸ ಮಾಡಿದ್ದಾರೆ.

 

 

• ಬಂಜಾರ ವಿದ್ಯಾರ್ಥಿ ಸಂಘದ ಅಸ್ತಿತ್ವ ಮತ್ತು ಗಿರೀಶ್ ಡಿ.ಆರ್. ಪಾತ್ರ?
ಬಂಜಾರ ಸಮುದಾಯದ ವಿದ್ಯಾರ್ಥಿಗಳನ್ನು ಸಂಘಟಿಸಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸುವ ಸಲುವಾಗಿ 2016 ರಂದು ಬಂಜಾರ ವಿದ್ಯಾರ್ಥಿ ಸಂಘಟನೆ ಅಸ್ತಿತ್ವಕ್ಕೆ ಬಂದಿತು. ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳ ಸಲುವಾಗಿ, ಬಂಜಾರ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ, ಶೋಷಣೆ, ದಬ್ಬಾಳಿಕೆಯ ವಿರುದ್ಧವಾಗಿ ಧ್ವನಿ ಎತ್ತುವ ಹಾಗೂ ಪ್ರಜಾಸತ್ತಾತ್ಮಕ ಹೋರಾಟವನ್ನು ಕಳೆದ ಏಳು ವರ್ಷಗಳಿಂದ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕಾರ್ಯಾಗಾರ ತರಬೇತಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಆತ್ಮಸ್ಟೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.
ಕಳೆದ ಏಳು ವರ್ಷಗಳಿಂದ ಸತತವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಬಂಜಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ ಗಿರೀಶ್ ಡಿ.ಆರ್.

ಬಂಜಾರ ವಿದ್ಯಾರ್ಥಿ ಸಂಘ ಸಮುದಾಯದ ಪರವಾಗಿರುವ ಹೋರಾಟ ಹಾಗೂ ಕಾರ್ಯಚಟುವಟಿಕೆಗಳ ಹಿಂದೆ ಬಂಜಾರ ಸಮುದಾಯದ ನೌಕರರು, ಪ್ರಗತಿಪರ ಚಿಂತಕರು, ಹೋರಾಟಗಾರರು, ಕಾನೂನು ತಜ್ಞರು, ಬುದ್ಧಿಜೀವಿಗಳು ಮಾರ್ಗದರ್ಶನವನ್ನು ನೀಡಿ ಸಂಘಟನೆಯ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ. ಅವರೆಲ್ಲರ ಸಹಕಾರ ಮನೋಭಾವ, ಸಲಹೆ ಸೂಚನೆಗಳು ನನ್ನ ಸಾಮಾಜಿಕ ಕಾರ್ಯಕ್ಕೆ ಸ್ಪೂರ್ತಿದಾಯಕವಾಗಿವೆ ಎಂದು ಹೇಳಿದ್ದಾರೆ ಗಿರೀಶ್ ಡಿ.ಆರ್.

ಬಾಬಾ ಸಾಹೇಬರ ಶಿಕ್ಷಣ ಮಂತ್ರ ಸಾರುವ ಹೆಗ್ಗುರಿ ಹೊತ್ತ ಗಿರೀಶ್ ಡಿ.ಆರ್ : ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ ಹಾಗೆ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮಂತ್ರವನ್ನು ಬಂಜಾರ ಸಮುದಾಯದವರಿಗೆ ಸಾರುವುದು ನನ್ನ ಮೊದಲ ಉದ್ದೇಶ ಎಂದು ಹೇಳುವ ಗಿರೀಶ್ ತನ್ನ ಶಕ್ತಿಮೀರಿ ಶಿಕ್ಷಣ ಮತ್ತು ನೈತಿಕ ಹೋರಾಟಕ್ಕೆ ಕರೆ ನೀಡುತ್ತಾರೆ. ಗಿರೀಶ್ ಅವರ ಇಂತಹ ಮಾನವೀಯ ಸೇವೆಯನ್ನು ಗುರುತಿಸಿ ಸಾಕಷ್ಟು ಸಂಘ-ಸ0ಸ್ಥೆಗಳು ಗೌರವಿಸಿ ಪುರಸ್ಕರಿಸಿವೆ. ಇವರ ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂಬುದು ಗರುಡವಾಯ್ಸ್ ಬಳಗದಿಂದ ಹಾರೈಸುತ್ತೇವೆ. ಒಟ್ಟಾರೆ ತಮ್ಮ ತಾತ ಮತ್ತು ತಂದೆಯ ಸಾಮಾಜಿಕ ಕಳಕಳಿ ಮೂಲಕ ಸ್ಪೂರ್ತಿ ಪಡೆದು ತನ್ನಂತೆ ಇತರರನ್ನು ಕಂಡು ಬಂಜಾರ ವಿದ್ಯಾರ್ಥಿ ಸಂಘಟನೆ ಮೂಲಕ ಹಾಗೂ ವಯಕ್ತಿಕವಾಗಿ ನೊಂದವರಿಗೆ ಸಲಹೆ ಸೂಚನೆಗಳನ್ನು ನೀಡಿ ಮುನ್ನೆಲೆಗೆ ಬರಲು ಸ್ಪೂರ್ತಿ ನೀಡುತ್ತಿರುವ ಗಿರೀಶ್ ಡಿ.ಆರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಭಾರತ ಸರ್ಕಾರದ ನೀತಿ ಆಯೋಗದಿಂದ ಪ್ರಮಾಣಿಕೃತ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಹಾಗೂ ಇಂಡಿಯನ್ ಎಂಪೈರ್ ಯೂನಿವರ್ಸಿಟಿ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಸಲ್ಲಿಸಿದ ಅವಿರತ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಗಿದೆ.

ದಿವಂಗತ ಈಸೂರು ಲೋಕೇಶ್ ಸಂಘಟನಾ ಗುರುಗಳು :
ಖ್ಯಾತ ವಕೀಲರು ಹಾಗೂ ಪ್ರಗತಿಪರ ಹೋರಾಟಗಾರರಾದ ದಿವಂಗತ ಈಸೂರು ಲೋಕೇಶ್ ಅವರು ಗಿರೀಶ್ ಅವರ ಸಂಘಟನಾ ಗುರುಗಳು. ಗಿರೀಶ್ ಅವರ ಇಂದಿನ ಬೆಳವಣಿಗೆಗೆ ಅವರ ಮಾರ್ಗದರ್ಶನ, ಸಲಹೆ, ಸೂಚನೆಗಳು ಪ್ರಮುಖ ಪಾತ್ರವಹಿಸಿದೆ ಎಂದು ಹೇಳುವ ಮೂಲಕ ಗುರುಗಳ ಆದರ್ಶ ವ್ಯಕ್ತಿತ್ವವನ್ನು ಗರುಡವಾಯ್ಸ್ನೊಂದಿಗೆ ಗಿರೀಶ್ ಹಂಚಿಕೊ0ಡರು.

 

 

Leave a Reply

Your email address will not be published. Required fields are marked *

error: Content is protected !!