ಯುಐ ಪಾತ್ ಸಂಸ್ಥೆಯೊಂದಿಗೆ ಜಿಎಂಐಟಿ ಒಡಂಬಡಿಕೆ! ಜಿಎಂಐಟಿ:ಯುಐ ಪಾತ್ ಸಂಸ್ಥೆಯ ಸದಸ್ಯತ್ವ ಪ್ರಮಾಣಪತ್ರ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯವು ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಯುಐ ಪಾತ್ ಸಂಸ್ಥೆ ಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಈ ಒಡಂಬಡಿಕೆಯಿಂದ ತಾಂತ್ರಿಕ ವಿದ್ಯಾರ್ಥಿಗಳನ್ನು ರೋಬೋಟಿಕ್ ಪ್ರೋಸೆಸ್ ಆಟೊಮೇಷನ್ ವಿಷಯದ ಮೇಲೆ ತರಬೇತಿಯನ್ನು ನೀಡಿ ಕೈಗಾರಿಕೆಗಳಿಗೆ ಸಜ್ಜುಗೊಳಿಸುವುದು ಆಗಿದೆಆಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಕೈಗಾರಿಕಾ ತರಬೇತಿಗಳನ್ನು ನೀಡುತ್ತಿದ್ದು ಅವರುಗಳನ್ನು ಕೈಗಾರಿಕೆಗಳಿಗೆ ತಕ್ಕಂತೆ ತಯಾರು ಮಾಡುವ ಜವಾಬ್ದಾರಿಯನ್ನು ಹೊಂದಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತಿಮುಖ್ಯ, ಆ ನಿಟ್ಟಿನಲ್ಲಿ ಜಿಎಂಐಟಿ ಒಟ್ಟು 86 ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ವೈ ಯು ಸುಭಾಷ್ ಚಂದ್ರ, ಐಸಿಟಿ ಅಕ್ಯಾಡೆಮಿ ದಾವಣಗೆರೆ ವಿಭಾಗದ ಸಂಯೋಜಕರಾದ ಜಕಾ ಉಲ್ಲಾ ಉಪಸ್ಥಿತರಿದ್ದರು.