ಗೋ ಪೂಜೆ ಸಿದ್ದಾಂತಕ್ಕೆ ತಕ್ಕಂತೆ ನಡೆದುಕೊಂಡ ಬಿಜೆಪಿ: ಹಸು ರಕ್ಷಣೆಯ ಸಾಹಸ ಹೇಗಿದೆ ಗೊತ್ತಾ.?

IMG-20210820-WA0012

 

ದಾವಣಗೆರೆ: ಗೋವುಗಳನ್ನ ಮಾತೆಗೆ ಹೋಲಿಸುವ, ಪೂಜಿಸುವ ತತ್ವ ಸಿದ್ದಾಂತ ಹೊಂದಿರುವ ಪಕ್ಷವೆಂದೇ ಬಿಂಬಿತವಾಗಿರುವ ಬಿಜೆಪಿಯವರು ಸಿದ್ದಾಂತಕ್ಕೆ ತಕ್ಕಂತೆ ತಾವಿರುವುದು‌ ಎಂಬುದನ್ನ ಸಾಬೀತು ಮಾಡಿದ್ದಾರೆ.

ಅರೇ, ಇದೇನಪ್ಪ ಹೀಗಂತೀರಾ? ಅದೇವ ಸಿದ್ದಾಂತದಂತೆ ಅವರು ನಡೆದುಕೊಂಡರು ಎಂದು ಪ್ರಶ್ನಿಸುತ್ತಿದ್ದೀರಾ ? ಇದಕ್ಕೆ ಉತ್ತರವಿಷ್ಟೇ, ದಾವಣಗೆರೆ ಇಂದ ಅವರಗೆರೆಗೆ ಹೋಗುವ ದಾರಿಯಲ್ಲಿ ಹಸುವೊಂದು ಕಂಬಿಗಳ ಮಧ್ಯದಲ್ಲಿ ಸಿಲಿಕಿಕೊಂಡಿತ್ತು.

ಇದನ್ನು ಕಂಡು ಕಾಣದಂತೆ ಹೋಗುತ್ತಿದ್ದವರ ಮಧ್ಯೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆಯ ಸದಸ್ಯ ಆರ್. ಎಲ್. ಶಿವಪ್ರಕಾಶ್ ಸಿಲುಕಿಕೊಂಡಿದ್ದ ಹಸುವನ್ನು ಬಿಡಿಸಿದ್ದಾರೆ.

ಸ್ವತಃ ತಾವೇ ಗ್ಯಾಸ್ ಕಟಿಂಗ್ ಮೂಲಕ ಕಂಬಿಗಳನ್ನು ಕತ್ತರಿಸಿ ಗೋಮಾತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಸಹಾಯ ಮಾಡಿದಂತಹ ಮಹಾನಗರ ಪಾಲಿಕೆಯ ಸದಸ್ಯರಾದ ಗೋಪಿನಾಯ್ಕ್ ಹಾಗೂ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಯಲ್ಲೇಶ್ ಇದ್ದರು.

Leave a Reply

Your email address will not be published. Required fields are marked *

error: Content is protected !!