‘ಡ್ರೋನ್’ ಮೂಲಕ ಜಮೀನುಗಳ ತ್ವರಿತ ‘ಸರ್ವೇ’ಗೆ ಸರ್ಕಾರ ಚಿಂತನೆ
ಬೆ0ಗಳೂರು : ಜಮೀನುಗಳ ಸರ್ವೆ ಕಾರ್ಯಕ್ಕೆ ಮತ್ತಷ್ಟು ಚುರುಕು ನೀಡುವ ಸಲುವಾಗಿ, ರಾಜ್ಯ ಸರ್ಕಾರ ಇದೀಗ ಡ್ರೋನ್ ಸರ್ವೇ ನಡೆಸುವುದಕ್ಕೆ ಮುಂದಾಗಿದೆ. ವಿಧಾನ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, 100 ವರ್ಷಗಳಿಂದ ಆಸ್ತಿ ಸರ್ವೇ ಕಾರ್ಯವಾಗಿಲ್ಲ. ಸರ್ವೇ ಕಾರ್ಯವನ್ನು ಮಾಡುವುದಕ್ಕೆ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ. ತ್ವರಿತವಾಗಿ ಡ್ರೋನ್ ಮೂಲಕ ಸರ್ವೇ ಕಾರ್ಯ ನಡೆಸಲಾಗುತ್ತದೆ ಎಂಬುದಾಗಿ ತಿಳಿಸಿದರು. ಈಗಾಗಲೇ ಡ್ರೋನ್ ಮೂಲಕ ರೈತರ ಜಮೀನುಗಳನ್ನು ಸರ್ವೇ ಮಾಡುವಂತ ಕಾರ್ಯವು ರಾಮನಗರ, ತುಮಕೂರು, ಹಾಸನ, ಬೆಂಗಳೂರು ನಗರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಸಲಾಗಿದೆ. ಈ ಕಾರ್ಯ ವನ್ನು ಭಾರತೀಯ ಸರ್ವೇಕ್ಷಣಾ ಸಂಸ್ಥೆ ಮೂಲಕ ನಡೆಸಲಾಗಿದೆ. ಇನ್ನೂ ರಾಜ್ಯದ ಇನ್ನುಳಿದಂತ 26 ಜಿಲ್ಲೆಗಳಲ್ಲಿ ಡ್ರೋನ್ ಸರ್ವೇ ಕಾರ್ಯವನ್ನು ಆರಂಭಿಸಲಾಗುತ್ತಿದೆ. 1.40 ಲಕ್ಷ ಚದರ ಕಿಲೋಮೀಟರ್ ಡ್ರೋನ್ ಸರ್ವೇ ಕಾರ್ಯವನ್ನು ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ 287 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿದೆ ಎಂದರು.