ಮಾಗನೂರು ಬಸಪ್ಪ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಇಂದು ಗುರುವಂದನೆ

Guruvandane today from the old students of Maganur Basappa Schooll

ದಾವಣಗೆರೆ: ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 1990-91 ಮತ್ತು 1993-94ನೇ ಸಾಲಿನ ವಿದ್ಯಾರ್ಥಿಗಳಿಂದ ಇಂದು ದಿ.14ರ ಶನಿವಾರ ಗುರುವಂದನೆ ಹಾಗೂ ಗುರುಗಳೊಂದಿಗೆ ಬಾಲ್ಯದ ಸವಿನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಿ.ಇ.ಎ. ವಿದ್ಯಾಸಂಸ್ಥೆ ಉಪಾಧ್ಯಕ್ಷ ಎಂ.ಜಿ. ಸಂಗಮೇಶಗೌಡ್ರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಎಸ್.ಎಂ.ಬಿ.ಹೆಚ್.ಪಿ.ಎಸ್. ಮತ್ತು ಹೆಚ್.ಎಸ್. ಶಾಲೆಯ ನಿವೃತ್ತ ಶಿಕ್ಷಕರು ಆಗಮಿಸಲಿದ್ದಾರೆ. ಎಸ್.ಎಂ.ಎಂ.ಬಿ.ಹೆಚ್.ಎಸ್. ಶಾಲೆಯ ಮುಖ್ಯೋಪಾಧ್ಯಾಯ ಪಂಚಾಕ್ಷರಪ್ಪ, ಎಸ್.ಎಸ್.ಎಂ.ಬಿ.ಹೆಚ್.ಪಿ. ಮುಖ್ಯೋಪಾಧ್ಯಾಯ ಉಜ್ಜಿನಪ್ಪ ಉಪಸ್ಥಿತರಿರಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಶಾಲಾ ಕೊಠಡಿಯಲ್ಲಿ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಪಾದಪೂಜೆ ನಡೆಯಲಿದೆ. ನಂತರ ಗುರುಗಳೊಂದಿಗೆ ಸ್ವ-ಪರಿಚಯ, ಬೋಧನೆ ನಡೆಯಲಿದ್ದು, 11 ಗಂಟೆಗೆ ವೇದಿಕೆ ಕಾರ್ಯಕ್ರಮ, ಗುರುಗಳಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ 1.15ಕ್ಕೆ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!