ಜನವರಿ 14 ರಂದು ಮುಖ್ಯಮಂತ್ರಿಗಳ ದಾವಣಗೆರೆ ಜಿಲ್ಲಾ ಪ್ರವಾಸ ವಿವರ
ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 14ರ ಶನಿವಾರ ದಾವಣಗೆರೆ ಜಿಲ್ಲೆ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಿಂದ ಆಯೋಜಿಸಿರುವ ಹರಜಾತ್ರಾ ಮಹೋತ್ಸವ ಹಾಗೂ ರೈತ ರತ್ನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಜನವರಿ 14ರ ಮಧ್ಯಾಹ್ನ 12-30ಕ್ಕೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣ ಬೆಳೆಸಿ ಮಧ್ಯಾಹ್ನ 1-20ಕ್ಕೆ ದಾವಣಗೆರೆ ಜಿ.ಎಂ.ಐ.ಟಿ. ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 1-30ಕ್ಕೆ ರಸ್ತೆ ಮೂಲಕ ಹರಿಹರ ವೀರಶೈವಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಆಯೋಜಿಸಿರುವ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 4-30ಕ್ಕೆ ಹರಿಹರದಿಂದ ದಾವಣಗೆರೆಗೆ ರಸ್ತೆಮಾರ್ಗವಾಗಿ, ಸಂಜೆ 5 ಗಂಟೆಗೆ ಹೆಲಿಪ್ಯಾಡ್‍ನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.