ಸೆಂಟ್‌ಜಾನ್ಸ್ ಶಾಲೆಯಲ್ಲಿ ಸಂಕ್ರಾಂತಿ
ದಾವಣಗೆರೆ : ಲಂಗ, ದಾವಣಿ, ಪಂಚೆ, ಬಿಳಿ ಶರ್ಟ್ ಹೆಗಲಮೇಲೇ ಶಾಲೂ…ಅಮ್ಮನ ಜತೆಯೊಂದು ಸೆಲ್ಪಿಘಿ….ಹೀಗೆ ಪುಟ್ಟ ಹೆಜ್ಜೆಗಳಿನ್ನಿಟ್ಟು ಶಾಲೆಗೆ ಹೋಗುತ್ತಿದ್ದೀರೇ ನೋಡುಗರು ಈ ಪುಟಾಣಿಗಳನ್ನೇ ನೋಡುತ್ತಿದ್ದರು…
ನಗರದ ಸೆಂಟ್‌ಜಾನ್ಸ್ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಮಕ್ಕಳು ಹಳ್ಳಿಸೊಗಡಿನ ಬಟ್ಟೆ ಹಾಕಿ ಮಿಂಚಿದರು. ಶಾಲೆಯ ಆವರಣದಲ್ಲಿ ರಂಗೋಲಿ ಬಿಡಿಸಿ, ಕಬ್ಬಿನ ಜಲ್ಲೆ ಇಟ್ಟು ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಮಕ್ಕಳೆಲ್ಲರೂ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದಿದ್ದರು. ಮಕ್ಕಳು ಕೇವಲ ಅಂಕಗಳಿಗೆ ಮಾತ್ರ ಜೋತು ಬೀಳದೇ ಎಲ್ಲಾ ರೀತಿಯ ಪ್ರತಿಭೆಗಳನ್ನು ಅನಾವರಣಗೊಳಿಸಲು ಶಾಲೆಯಲ್ಲಿ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸಲಾಗಿತ್ತುಘಿ. ಎಳ್ಳು, ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ನಂಬಿಕೆಯುಳ್ಳ ಈ ಹಬ್ಬದ ಸಾರ್ಥಕತೆಯನ್ನು ಮಕ್ಕಳಿಗೆ ತಿಳಿಸುವ ಅವಶ್ಯಕತೆ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲಾಯಿತು.
ವರ್ಷದ ಮೊದಲ ಹಬ್ಬ ಸಂಕ್ರಾಂತಿಯಾಗಿದ್ದುಘಿ, ಈ ಹಬ್ಬ ಸುಗ್ಗಿ ಜೊತೆ ಹಿಗ್ಗು ತಂದಿದ್ದು, ನಾಡಿನೆಲ್ಲೆಡೆ ಸಂಭ್ರಮ, ಸಡಗರವನ್ನುಂಟು ಮಾಡಿದೆ. ಅದರಂತೆ ಈ ಶಾಲೆಯಲ್ಲಿ ಸಂಕ್ರಾಂತಿ ಕಲರವ ಮುಗಿಲು ಮುಟ್ಟಿತ್ತುಘಿ. ಮಕ್ಕಳೆಲ್ಲ ರೈತಾಪಿ ವೇಷಭೂಷಣ ಧರಿಸಿ, ಪಕ್ಕಾ ಹಳ್ಳಿ ಸೊಗಡನ್ನು ಪ್ರದರ್ಶಿಸಿದರು. ರೈತರ ಹಬ್ಬವನ್ನು ಪುಟಾಣಿಗಳು ಅರ್ಥಪೂರ್ಣವಾಗಿ ಆಚರಿಸಿದರು.
ಹುಡುಗರು ಪಂಚೆ ಉಟ್ಟುಕೊಂಡು ಖದರ್ ತೋರಿಸಿದರೆ, ಹೆಣ್ಮಕ್ಕಳು ಲಂಗಾದಾವಣಿ ಧರಿಸಿ ಪಕ್ಕಾ ಹಳ್ಳಿ ಹೆಣ್ಣು ಮಕ್ಕಳಾಗಿದ್ದರು. ಅಲ್ಲದೇ ಭೂದೇವಿಗೆ ನಮಿಸಿ ಜೋಳದ ರಾಶಿ ಮಾಡಿದರು. ಸ್ವತ: ಮಕ್ಕಳೇ, ತಮ್ಮ ತೊದಲು ನುಡಿಗಳಲ್ಲಿ ಹ್ಯಾಪಿ ಸಂಕ್ರಾಂತಿ ಎಂದರು. ಸದಾ ಆಫೀಸ್, ಕೆಲಸ ಅಂತಾ ಬ್ಯುಸಿ ಇದ್ದ ಪೊಷಕರಂತೂ ಮಕ್ಕಳ ಸಂಭ್ರಮ, ನೋಡಿ ಹಿರಿಹಿರಿ ಹಿಗ್ಗಿದರು. ಜೊತೆಗೆ ನಗರದ ಮಕ್ಕಳಿಗೆ ದೇಶಿ ಸಂಸ್ಕೃತಿ ಪರಿಚಯಿಸಿದ ಶಾಲೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು.