ದಾವಣಗೆರೆ: ಹರಿಹರ ತಾಲೂಕು ಬೆಸ್ಕಾಂ ಕಚೇರಿಯ ಸಹಾಯಕ ಇಂಜಿನಿಯರ್ ಬಿ.ಎಂ.ಕರಿಬಸವಯ್ಯ ಗುರುವಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹರಿಹರದ ಎಲೆಕ್ಟ್ರಿಕಲ್ ಗುತ್ತಿಗೆದಾರ ಮಹೇಶ್ವರಪ್ಪ ಬೇವಿನಹಳ್ಳಿ ಇವರಿಂದ ಐ.ಪಿ. ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಅನುಮೋದನೆ ನೀಡುವ ಸಂಬಂಧವಾಗಿ ಪ್ರತಿ ಸಂಪರ್ಕಕ್ಕೆ 5 ಸಾವಿರ ರೂ.ಗಳಂತೆ ಬೇಡಿಕೆ ಇಟ್ಟು. ಅಂತಿಮವಾಗಿ ಪ್ರತಿ ಸಂಪರ್ಕಕ್ಕೆ 1 ಸಾರವಿರ ರೂ.ಗಳಂತೆ ಕರಿಬಸವಯ್ಯ ಮುಂಗಡ ಲಂಚ ಪಡೆದುಕೊಂಡಿದ್ದರು.
ಈ ಫೆ.23ರ ಗುರುವಾರ ಬಳಿಗ್ಗೆ 6 ಸಾವಿರ ಲಂಚದ ಹಣವನ್ನು ತಮ್ಮ ಕಚೇರಿಯಲ್ಲಿ ಸ್ವೀಕರಿಸುವಾಗ ಲೋಕಾಯುಕ್ತ ತಂಡಕ್ಕೆ ಸಿಕ್ಕಿ ಬಿದ್ದಿದ್ದಾರೆ.
