ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿಗೆ ಅಲಹಾಬಾದ್ ಹೈಕೋರ್ಟ್ ಬುಧವಾರ 1 ಲಕ್ಷ ದಂಡ ರೂಗಳ ವಿಧಿಸಿದೆ.
2007 ಜನವರಿ 27 ರಂದು ನಡೆದ ಮೊಹರಂ ಮೆರವಣಿಗೆಯಲ್ಲಿ ಎರಡು ಪಂಗಡಗಳ ನಡುವೆ ಜಗಳ ಉಂಟಾಗಿ, ಓರ್ವ ಹಿಂದೂ ವ್ಯಕ್ತಿ ಮೃತಪಟ್ಟಿದ್ದರು. ಈ ಘಟನೆಗೆ ಅಂದಿನ ಗೋರಖಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಅವರು ಮಾಡಿದ ಭಾಷಣವೇ ಕಾರಣ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪರ್ವೇಜ್, 2008ರ ಸೆಪ್ಟೆಂಬರ್ 26 ರಂದು ದೂರು ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ಇತ್ಯರ್ಥವಾಗಿದ್ದರೂ ಕೂಡ ವ್ಯಕ್ತಿ ಪದೇ ಪದೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಪರ್ವೇಜ್ ಪರ್ವಾಜ್ ಎಂಬವರೇ ದಂಡ ತೆರಬೇಕಾಗಿದೆ.
