ಜಕಾತಿ ವಸೂಲಿ ಟೆಂಡರ್ ಪ್ರಕ್ರಿಯೆಯಲ್ಲಿ ಜಂಜಾಟ.! 18 ಕ್ಕೆ ಮುಂದೂಡಿದ ಪಾಲಿಕೆ

ಜಕಾತಿ ವಸೂಲಿ ಟೆಂಡರ್ ಪ್ರಕ್ರಿಯೆಯಲ್ಲಿ ಜಂಜಾಟ.! 18 ಕ್ಕೆ ಮುಂದೂಡಿದ ಪಾಲಿಕೆ
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡುವ ಹಕ್ಕಿಗೆ ಸಂಬಂಧಪಟ್ಟಂತೆ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮಾ.18ಕ್ಕೆ ಮುಂದೂಡಲಾಗಿದೆ.
ಸುಂಕವಸೂಲಿ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಮಣಿಕಂಠ ಸರ್ಕಾರ್, ಬಿ.ಕೆ. ಸಂತೋಶ್ ಹಾಗೂ ಎಂ. ಗಿರೀಶ್ ಈ ಮೂವರು ಅರ್ಜಿ ಸಲ್ಲಿಸಿದ್ದರು. ಆದರೆ ಗುರುವಾರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಕರೆಯಲಾಗಿದ್ದ ಹರಾಜು ಪ್ರಕ್ರಿಯೆಯಲ್ಲಿ ಗಿರೀಶ್ ಅವರನ್ನು ಹೊರತುಪಡಿಸಿ ಉಳಿದ ಇಬ್ಬರು ಗೈರು ಹಾಜರಾಗಿದ್ದರು.
ಗಿರೀಶ್ ಅವರೊಬ್ಬರೇ ಹರಾಜಿನಲ್ಲಿ ಭಾಗವಹಿಸಿರುವ ಕಾರಣ ಸರ್ಕಾರದ ನಿಯಮಾವಳಿಗಳ ಪ್ರಕಾರ ಬಿಡ್ ಮಾಡಲು ಬರುವುದಿಲ್ಲ ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಹಾಗೂ ಮೇಯರ್ ಅವರೊಂದಿಗೆ ಚರ್ಚಿಸಿ, ಅವರ ಆದೇಶದ ಮೇರೆಗೆ ಹರಾಜು ಪ್ರಕ್ರಿಯೆಯನ್ನು ಮಾರ್ಚ್ 18ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಬಿಡ್ ಮಾಡಲು ಆಗಮಿಸಿದ್ದ ಗಿರೀಶ್ ಹಾಗೂ ಅವರ ಸ್ನೇಹಿತರು ಅವರು ತೀವ್ರವಾಗಿ ಆಕ್ಷೇಪಿಸಿ, ನಾವು ಬಂದಿದ್ದೇವೆ ಇಮದೇ ಬಿಡ್ಗೆ ಅವಕಾಶ ನೀಡಿ, ಅವರಿಗೆ ಇಂದು ಬಿಡ್ ಇದೆ ಎಂದು ಗೊತ್ತಿದ್ದರೂ ಬಂದಿಲ್ಲದಿರುವುದು ಸರಿಯಲ್ಕ, ನೀವು ಬರದೇ ಇರುವವರ ಬಗ್ಗೆ ಕಂಡಿಷನ್ ನಲ್ಲಿ ನಮೂದಿಸಬೇಕು ಎಂದು ಹೇಳಿದರು.
ನಾವು 5 ರೂ. ಬಡ್ಡಿಯಂತೆ ಹಣ ಹೊಂದಿಸಿಕೊಂಡು ಬಂದಿರುತ್ತೇವೆ. ನೀವು ಈಗ ಏಕಾಏಕಿ ಹರಾಜು ಪ್ರಕ್ರಿಯೆ ಮುಂದೂಡಿದರೆ ನಮಗೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.
ಒಬ್ಬರೇ ಬಂದಾಗ ಬಿಡ್ ಮಾಡಲು ಕಾನೂನು ಪ್ರಕಾರ ಅವಕಾಶವಿಲ್ಲ. ಆದ್ದರಿಂದ 18 ರಂದು ಮತ್ತೆ ಕರೆಯಲಾಗುವುದು ಎಂದು ಉಪ ಆಯುಕ್ತರು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ 2023-24ನೇ ಸಾಲಿನ ಅವಧಿಗೆ ಕೆ.ಆರ್. ತರಕಾರಿ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶ, ಕಾಯಿಪೇಟೆ, ಶಾಂತಿ ಟಾಕೀಸ್ , ಬಸ್ ನಿಲ್ದಾಣದ ಒಳಭಾಗ, ಮಂಡಿಪೇಟೆ, ಚೌಕಿಪೇಟೆ, ಬಸವರಾಜ ಪೇಟೆ, ನರಸರಾಜ ರಸ್ತೆ, ಪಿ.ಜೆ. ಬಡಾವಣೆ, ಚರ್ಚ್ ರಸ್ತೆ, ಗುಂಡಿ ಮಹದೇವಪ್ಪ ವೃತ್ತ, ಹಳೇ ಬಸ್ ನಿಲ್ದಾಣದ ಮುಂಭಾಗ ಹಾಗೂ ಒಳಭಾಗ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಮದ ಮುಂಭಾಗ, ವಿದ್ಯಾರ್ಥಿಭವನ, ಹದಡಿ ರಸ್ತೆ, ಸಿ.ಜೆ. ಆಸ್ಪತ್ರೆ ರಸ್ತೆ, ಬೀಲಿಂಗೇಶ್ವರ ದೇವಸ್ಥಾನದ ಮುಂಭಾಗ, ಜಯದೇವ ವೃತ್ತದಿಂದ ಅಶೋಕ ರಸ್ತೆ, ರಿಂಗ್ ರಸ್ತೆ, ನಿಜಲಿಂಗಪ್ಪ ಬಡಾವಣೆ, ಕೆಟಿಜೆ ನಗರ, ವಿನೋಬನಗರ, ವಿದ್ಯಾನಗರ, ಜಾಲಿನಗರ, ಸಿದ್ದವೀರಪ್ಪ ಬಡಾವಣೆ, ಹೊಂಡದ ಸರ್ಕಲ್ ರಸ್ತೆ ಹಾಗೂ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಘಲ್ಲಿ ನಿತ್ಯ ಹಾಗೂ ವಾರದ ಸಂತಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿ ಮಾಡುವ ಹಕ್ಕಿನ ಬಹಿರಂಗ ಹರಾಜನ್ನು ಮಾ.2ರಂದು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಕರೆಯಲಾಗಿತ್ತು.
ಹರಾಜಿನಲ್ಲಿ ಭಾಗವಹಿಸುವವರು 10 ಲಕ್ಷ ರೂ.ಗಳ ಡಿಡಿಯನ್ನು ಪಾಲಿಕೆ ಆಯುಕ್ತರ ಹೆಸರಿಗೆ ಪಾವತಿಸಿ, ಅರ್ಜಿ ನಮೂನೆ ಭರ್ತಿ ಮಾಡಿ ಟೋಕನ್ ಪಡೆಯಬೇಕಾಗಿತ್ತು.
ಪುನಃ ಹೊಸದಾಗಿ ಅರ್ಜಿ ಸಲ್ಲಿಸುವವರಿಗೂ ಇದೀಗ ಅವಕಾಶ ಸಿಕ್ಕಂತಾಗಿದೆ ಎಂದು ಉಪ ಆಯುಕ್ತೆ ಲಕ್ಷ್ಮಿ ತಿಳಿಸಿದರು.