ಸಿನಿಮಾ

ಈತ ನಾಯಕನಾಗಲು ಬಂದವನಲ್ಲ.! ಕಥೆ ಹೇಳಲು ಹೊರಟವನು.!! C H Nayak

ಈತ ನಾಯಕನಾಗಲು ಬಂದವನಲ್ಲ.! ಕಥೆ ಹೇಳಲು ಹೊರಟವನು.!! C H Nayak

ಬೆಂಗಳೂರು: ಸಣ್ಣಪುಟ್ಟ ಹಳ್ಳಿಯಿಂದ ಬಂದು ಮಾಯಾನಗರಿ ಬೆಂಗಳೂರಿನ ಗಾಂಧಿ ನಗರದಲ್ಲಿ ಸದ್ದು‌ಮಾಡುವುದು ಅಷ್ಟು ಸುಲಭದ ಕೆಲಸವಲ್ಲ! ಅಂತಹದ್ದರಲ್ಲಿ ಸಿನಿಮಾ ಮಾಡೋದು ಅಂದ್ರೆ ಸುಲಭದ ಮಾತಾ? ಈ ಮಾತು ಗಾಂಧಿನಗರವನ್ನು ಬಲ್ಲ ಎಲ್ಲರೂ ಹೇಳ್ತಾರೆ. ಅದು ಸತ್ಯ ಕೂಡ. ಇಂತಹ ಗಾಂಧಿನಗರದಲ್ಲಿ ಹೊಸ ಅಲೆ ಸೃಷ್ಟಿಸಿದ ಕೆಲವೇ ಕೆಲವರಲ್ಲಿ ಇತ್ತೀಚಿನ ತಲೆಮಾರನ್ನೇ ನೋಡೋದಾದ್ರೆ ನಟರಾದ ರಾಕಿಂಗ್_ಸ್ಟಾರ್_ಯಶ್, ದುನಿಯಾ_ವಿಜಯ್, ನೆನಪಿರಲಿ_ಪ್ರೇಮ್, ರಕ್ಷಿತ್_ಶೆಟ್ಟಿ, ನಿರ್ದೇಶಕರಾದ ವೃಷಬ್_ಶೆಟ್ಟಿ, ಆರ್_ಚಂದ್ರು, ಪ್ರೀತಂ_ಗುಬ್ಬಿ ಹೀಗೆ ಕೆಲವೇ ಕೆಲವು ಹಳ್ಳಿ ಹುಡುಗರ ಸಾಲು ಸಿಗುತ್ತದೆ. ಅಂತಹವರ ಸಾಲಿನಲ್ಲಿ ಹೈದ್ರಾಬಾದ್ ಕರ್ನಾಟಕದ ಬಿರು ಬಿಸಿಲಿನ ನೆಲದಿಂದ ( ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನಾರಬಂಡೆ ಗ್ರಾಮ ಈತನ ಊರು) ಎದ್ದು ಬಂದ ಹುಡುಗನೊಬ್ಬ ಗಾಂಧಿನಗರದಲ್ಲಿ ಮೆಲ್ಲಗೆ ಸದ್ದು ಮಾಡ್ತಿದ್ದಾನೆ. ಆತನ ಹೆಸರು ಸಿ.ಎಚ್. ನಾಯಕ್. ಆತನಿಗೆ ಕುಂದಾನಗರಿ ಬೆಳಗಾವಿಯ ಮತ್ತೊಬ್ಬ ಹೈದ ರಾಜಶೇಖರ್ ಸಾಥ್ ಕೊಡ್ತಿದ್ದಾನೆ. ಇವರಿಬ್ಬರೂ ಅಪ್ಪಟ ಹಳ್ಳಿ ಹೈದರೇ… ಸಿ.ಎಚ್. ನಾಯಕ್ ಗಾಂಧಿನಗರದಲ್ಲಿ ಈಗಾಗಲೇ ಸಹನಿರ್ದೇಶಕನಾಗಿ 8 ವರ್ಷದಿಂದ ಬೆವರು ಸುರಿಸಿ ಈಗ ಮೊದಲ ಬಾರಿಗೆ ನಿರ್ದೇಶಕನಾಗಲು ಹೊರಟಿದ್ದಾನೆ. ರಾಜಶೇಖರ್ ಆತನಿಗೆ ಸಾಥ್ ಕೊಟ್ಟು ಸಹನಿರ್ದೇಶಕನಾಗಿ ನಿಂತಿದ್ದಾನೆ.

ಈತ ನಾಯಕನಾಗಲು ಬಂದವನಲ್ಲ.! ಕಥೆ ಹೇಳಲು ಹೊರಟವನು.!! C H Nayak

ಸಿ.ಎಚ್. ನಾಯಕ್ ನೋಡೋಕೆ ಗಡ್ಡ ಬಿಟ್ಟು ಥೇಟ್ ಹಳ್ಳಿ ಹುಡುಗನಂತೆಯೇ ಕಂಡರೂ ಆತನೊಳಗಿನ ಪ್ರತಿಭೆ ಮಾತ್ರ ಅಗಾಧ. ಇಲ್ಲಿ ನಾನು ಸುಮ್ಮನೇ ಇವರನ್ನ ಹೊಗಳ್ತಿಲ್ಲ! ಹೊಗಳಿಕೆಗೂ ಒಂದು ಯೋಗ್ಯತೆ ಬೇಕಾಗುತ್ತದೆ. ಹಾಗೇ ಪ್ರತಿಭೆಗೆ ಅಸೂಹೆ ಎಂಬುದು ಇರಬಾರದು; ಜಾತಿ, ಮತ, ಪಂಥಗಳ ಬೇಲಿ ಇರಬಾರದು. ಆ ಎಲ್ಲ ಗಡಿ ದಾಟಿ ಬಂದ ಈ ಹುಡುಗ ಸಿ.ಎಚ್.‌ನಾಯಕ್ ( ಚೆನ್ನಬಸವ ನಾಯಕ್ ) ಮೊದಲ ಪ್ರಯತ್ನದಲ್ಲೇ ತಾನೊಬ್ಬ ಮೇರು ನಿರ್ದೇಶಕನಾಗಬಲ್ಲೆ ಎಂಬುದನ್ನ ಸಾಧಿಸಿ ತೋರಿಸಿದ್ದಾನೆ. ಆತನೇ ನಿರ್ಮಾಣ ಮಾಡಿ, ನಿರ್ದೇಶಿಸಿ, ನಟಿಸಿದ “ಗುರುತಿಸದ ಶಾಹಿ” ಕಿರುಚಿತ್ರ ಈಗಾಗಲೇ ಜನಮನ ಗೆದ್ದಿದೆ. “ರೆವಿನ್ಯೂ ಆಕ್ಟ್ 94CC” ಯನ್ನು ಜನರು ಅರ್ಥ ಮಾಡಿಕೊಳ್ಳೋದೇ ಕಷ್ಟ! ಅಂತದ್ದರಲ್ಲಿ ಅದನ್ನೇ ಕಿರುಚಿತ್ರ ಮಾಡಿ “ಗುರುತಿಸದ ಶಾಹಿ” ಮೂಲಕ ನೆಲಮೂಲದ ಜನರಿಗೆ ಅದರ ಆಳ ಅಗಲಗಳನ್ನು ತಿಳಿ ಹೇಳಿದವನು ಈತ. ಅಂತಹ ಧೈತ್ಯ ಪ್ರತಿಭೆ ಈಗ “XXXL” ಎಂಬ ವಿಭಿನ್ನ ಕಥಾಹಂದರದ ಕಥೆಯನ್ನ ಹೆಣೆದು, ಚಿತ್ರಕಥೆ ಮಾಡಿ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಹೊರಟಿದ್ದಾನೆ. ಈ ನಾಯಕ್ ಈಗಾಗಲೇ “ಹರೇ ರಾಮ ಹರೇ ಕೃಷ್ಣ” ಹಾಗೂ “ಅಂಬಾಸಿಡರ್” ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾನೆ. ಮೊದಲೇ ಹೇಳಿದ ಹಾಗೆ 8 ವರ್ಷ ಗಾಂಧಿನಗರದ ನೀರು ಕುಡಿದು, ಇಲ್ಲಿನ ಏಳುಬೀಳುಗಳನ್ನು ಕಂಡು ಪಳಗಿದ್ದಾನೆ. ಅದರ ಪ್ರತಿಫಲವೇ ಈಗ ” XXXL” ಸಿನಿಮಾ. ನಾಯಕ್ ತಮ್ಮದೇ ಹೆಸರಿನಲ್ಲಿ  ಸಿ_ಎಚ್_ನಾಯಕ್_ಕ್ರಿಯೇಷನ್ಸ್ ಎಂಬ ಹೆಸರಿನಲ್ಲಿ  ನಿರ್ಮಾಣ ಸಂಸ್ಥೆಯನ್ನೂ ಹುಟ್ಟುಹಾಕಿ ರಿಸ್ಕ್ ತೆಗೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಈ XXXLಗೆ ಹೊಸ ಪ್ರತಿಭೆ  ವರ್ದನ್ ಎಂಬಾತನನ್ನ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ ನಿರ್ದೇಶಕ ಸಿ.ಎಚ್. ನಾಯಕ್. ನಟಿಯ ಹುಡುಕಾಟದಲ್ಲಿದ್ದಾರೆ. ಈ “XXXL” ಸಿನಿಮಾಗೆ ಆಚಾರ್ಯ ಸುಬ್ರಹ್ಮಣ್ಯ ಎಂಬ ಯುವ ನಿರ್ದೇಶಕ ಸಂಗೀತ ಹೆಣೆಯುತ್ತಿದ್ದಾರೆ. ಇತ್ತೀಚೆಗೆ ಬಾರೀ ಸದ್ದು ಮಾಡಿದ ಮತ್ತೊಬ್ಬ ಯುವ ನಿರ್ದೇಶಕ ನವೀನ್ ನಿರ್ದೇಶನದ “ಪಾಲಾರ್” ಸಿನಿಮಾಗೂ ಆಚಾರ್ಯ ಸುಬ್ರಹ್ಮಣ್ಯ ಸಂಗೀತ ನೀಡಿದ್ದರು. ಇನ್ನು ತುಳು ಭಾಷೆಯ ಖ್ಯಾತ ಸಿನಿಮಾ “ಪೆರಿಕ್ಯೂಲ್ಯೂ” ಹಾಗೂ ಕನ್ನಡದ ಪ್ರಖ್ಯಾತ ಧಾರವಾಹಿಗಳಿಗೆ ಕ್ಯಾಮೆರಾ ವರ್ಕ್ ಮಾಡಿದ ನಚಿಕೇತ್ ಈ “XXXL” ಗೂ ಕ್ಯಾಮೆರಾ ಹಿಡಿದಿದ್ದಾರೆ.

ಈತ ನಾಯಕನಾಗಲು ಬಂದವನಲ್ಲ.! ಕಥೆ ಹೇಳಲು ಹೊರಟವನು.!! C H Nayak

ಬಹುತೇಕ ಹೊಸಬರ ತಂಡವನ್ನೇ ಕಟ್ಟಿಕೊಂಡು ದಿಟ್ಟತನದಿಂದ ಹೊಸ ಸಾಹಸಕ್ಕೆ ಕೈ ಹಾಕಿರುವ ಸಿ.ಎಚ್. ನಾಯಕ್ ಭಾನುವಾರ (ಮೇ21) ರಂದು ಸಂಜೆ 5 ಗಂಟೆಗೆ ಚಾಮರಾಜಪೇಟೆಯ ಕಲಾವಿದರ ಸಂಘದ ರಾಜ್ ಕುಮಾರ್ ಭವನದಲ್ಲಿ ತಮ್ಮ‌ ಮೊದಲ ನಿರ್ದೇಶನದ XXXL ಸಿನಿಮಾದ ಟೈಟಲ್ ಬಿಡುಗಡೆ ಮಾಡಿಸಿದ್ದಾರೆ. ಚಿತ್ರದ ಇನ್ನುಳಿದ ಪಾತ್ರಗಳಿಗೂ ನಾಯಕ್ ತಲಾಷ್ ನಡೆಸುತ್ತಿದ್ದಾರೆ. ತಮ್ಮನ್ನೂ ಸೇರಿಕೊಂಡು ಹೊಸ ಹಾಗೂ ಅಪ್ಪಟ ಪ್ರತಿಭೆಗಳ ಪ್ರತಿಭೆಯನ್ನೇ ಒರೆಗೆ ಹಚ್ಚಿ ಅಪ್ಪಟ ಚಿನ್ನ ತೆಗೆಯಲು ನಾಯಕ್ ಸಜ್ಜಾಗಿದ್ದಾರೆ.

ಈತ ನಾಯಕನಾಗಲು ಬಂದವನಲ್ಲ.! ಕಥೆ ಹೇಳಲು ಹೊರಟವನು.!! C H Nayak

ಕೊನೇ ಮಾತು: ಇಂಜಿನಿಯರಿಂಗ್ ಮಾಡಿರುವ ಈ ಹುಡುಗ ಸಿ.ಎಚ್.ನಾಯಕ್, ಸದಾ ಸಾಹಿತ್ಯ, ಕಥೆ, ಕವನ ಅಂತ ಓದಿನ ಗೀಳಿಗೆ ಬಿದ್ದು ಗಾಂಧಿನಗರಕ್ಕೆ ಬಂದವನು!
ಈ ಹಳ್ಳಿ ಹುಡುಗನಿಗೆ ಒಳ್ಳೆಯದಾಗಲಿ, ಸಿನಿಮಾ ಯಶಸ್ವಿಯಾಗಲಿ, ಆತನ ಶ್ರಮ, ಆಲೋಚನೆಗಳಿಗೆ ಪ್ರತಿಫಲ ಸಿಗಲಿ, ಯಶಸ್ಸು ಕಾಣಲಿ. ಆ ಹುಡುಗನ ಬದುಕು ಹಸನಾಗಲಿ… All the best C.H.Nayak…

Ramesh Hirejambur Ramesh hirejambur
ಕರ್ನಾಟಕ ನಾಯಕರ ಒಕ್ಕೂಟ

Click to comment

Leave a Reply

Your email address will not be published. Required fields are marked *

Most Popular

To Top