ಲೋಕಿಕೆರೆ ವೀರ ಯೋಧ ನಾಗರಾಜ್ ರವರಿಗೆ ಹುಟ್ಟೂರಿನಲ್ಲಿ ಗೌರವ ಸನ್ಮಾನ

ದಾವಣಗೆರೆ:ಈಗೀನ ಟ್ರೆಂಡ್ ಜನರೇಷನ್, ಎಂಜಿನಿಯರ್, ಸಾಫ್ಟ್ ವೇರ್,ಇತರೇ ನೌಕರಿ ಬಯಸಿದರೇ ದೇಶ ಕಾಯೋರು ಯಾರು? ಯುವಜನತೆ ವೈಯಕ್ತಿಕ ಶಿಸ್ತು ಕಟ್ಟುನಿಟ್ಟಿನ ಜೀವನ ಕ್ರಮ ಅನುಸರಿಸಿ ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಸತತ 20 ವರ್ಷಗಳ ಕಾಲ ಗಡಿಭದ್ರತಾ ಅದೇ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ಬಳಿಕ ಗ್ರಾಮಪಂಚಾಯಿತಿ, ಹಾಗೂ ಗ್ರಾಮಸ್ಥರ ಅದ್ಧೂರಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ನನ್ನ ತಂದೆ ತಾಯಿ ರೈತರು ಅವರು ವಿಧ್ಯೆ ಕಲಿಯಲಿಲ್ಲ, ನನಗೆ ಕೂಲಿ ನಾಲಿ ಮಾಡಿ ಪದವಿ ಗಳಿಸಿ ಸೇನೆಯಲ್ಲಿ ಸೇವೆ ಮಾಡಬೇಕು ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಮಹಾದಾಸೇ ಇಂದ 2003 ರಲ್ಲಿ ಸೇನೆಗೆ ಆಯ್ಕೆ ಆದ ನಂತರ ಸಿಕಂದರಾಬಾದ್, ಬಿಹಾರ,  ಜಾರ್ಖಂಡ್, ಪಂಜಾಬ್ ಪ್ರಾಂತ್ಯದಲ್ಲಿ ಜಮ್ಮು, ಕಾಶ್ಮೀರ, ಅಸ್ಸಾಂ ,ಮಣಿಪುರದ ಇಂಪಾಲ್, ದೆಹಲಿ, ಹೈದರಾಬಾದ್ ಕರ್ನಾಟಕದ ಬೆಂಗಳೂರು ಹೀಗೆ ದೇಶದ ಹಲವಾರು ರಾಜ್ಯಗಳಲ್ಲಿ ಉಗ್ರಗಾಮಿಗಳ ಹತೋಟಿ, ಗಡಿಯಲ್ಲಿ ವಿಚಿತ್ರಾಕಾರಿ  ಶಕ್ತಿಗಳ ವಿರುದ್ಧ  ಯುಧ್ಧಕ್ಕಿಳಿದು ಹೋರಾಟ ಮಾಡುವ ಸಂದರ್ಭದಲ್ಲಿ ನನ್ನ ಜೊತೆ ಇಧ್ಧ ಹಲವು ಯೋಧರು ಗುಂಡೇಟು ಬಿದ್ದಾಗ ಎದೆ ಗುಂದದೇ ವೈರಿಗಳ ವಿರುದ್ಧ ಕಾದಾಡಿ ನಮ್ಮವರನ್ನು ಅವರ ದೇಹ ಹೊತ್ತು ಮುಖ್ಯ ಸೇನಾ ಕ್ಯಾಂಪ್ ಗೆ ಬಂದು ಘಟನೆ ಸನ್ನಿವೇಶ ಗಳನ್ನು ನಾಗರಾಜ್ ವಿವರಿಸಿದಾಗ ನೆರೆಧ ಗ್ರಾಮದ ಹಿರಿಯರು ಯುವಜನರು ಹೆಂಗಳೆಯರ ಕಣ್ಣಲ್ಲಿ ಅಚ್ಚರಿ ಮೆಚ್ಚುಗೆಯ ಆನಂದಭಾಷ್ಪ ಕಂಡುಬಂತು.

ಗ್ರಾಮಕ್ಕೆ ಆಗಮಿಸಿದ ಯೋಧ ನಾಗರಾಜ್ ರವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷೆ ಪಾರ್ವತಮ್ಮ ಅಡಿವೆಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಶ್ವಿನಿ, ಕಾರ್ಯದರ್ಶಿ ಸುರೇಶ್
ಸದಸ್ಯರಾದ ಮೂರ್ತೆಪ್ಪ, ಅಭಿಷೇಕ್, ಓಬಳೇಶ್, ಉಮೇಶ್, ಶ್ರೀಮತಿ ನಾಗಮ್ಮ ನಿಜಲಿಂಗಪ್ಪ ಮಾಜಿ ಅಧ್ಯಕ್ಷ ಶಿವಮೂರ್ತಿ,ಎಸ್ ಎಸ್ ರವಿಕುಮಾರ್ , ಪೂಜಾರ ಆನಂದ್,ಚೌಟಗಿ ಹನುಮಂತಪ್ಪ,ಭೀಮಪ್ಪ, ರೇವಣ್ಣ,ಪರಸಪ್ಪ ಗ್ರಂಥಪಾಲಕ ಮಂಜಪ್ಪ, ಪತ್ರಕರ್ತ ಸೊಸೈಟಿ ಅಧ್ಯಕ್ಷ ಪುರಂದರ್ ಲೋಕಿಕೆರೆ,ಪಿ.ಓ.ಅಂಜಿನಪ್ಪಕುಬೇರಪ್ಪ,ಕೆ,ಎನ್. ತಿಪ್ಪೇಶ್, ಕೆ..ಎಸ್. ಮಂಜಪ್ಪ, ಸೇರಿದಂತೆ ನೂರಾರು ಗ್ರಾಮಸ್ಥರು ಸ್ತ್ರೀಶಕ್ತಿ ಸಂಘಗಳ ಸದಸ್ಯರು ಶಾಲಾ ಕಾಲೇಜುಗಳ ಮಕ್ಕಳು ಯೋಧ ನಾಗರಾಜ್ ರವರ ಕುಟುಂಬ ಬಂಧುಗಳು ಪಾಲ್ಗೊಂಡಿದ್ದರು. ಅದ್ಧೂರಿ ಸ್ವಾಗತದ  ನಂತರ ಪ್ರಮುಖ ವೃತ್ತಗಳಲ್ಲಿ, ಮೆರವಣಿಗೆ ಮೂಲಕ ಅವರನ್ನು ಐತಿಹಾಸಿಕ ಈಶ್ವರ ದೇವಾಲಯದ  ಮುಂಬಾಗದ ಆವರಣದಲ್ಲಿ  ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!