ಹರಿಹರ ಆಸ್ಪತ್ರೆಗೆ ಜನಪ್ರಿಯ ಶಾಸಕರ ಧೀಡಿರ್ ಭೇಟಿ

 ದಾವಣಗೆರೆ: ಹರಿಹರ ಜನಪ್ರಿಯ ಶಾಸಕರಾದ ಬಿ.ಪಿ ಹರೀಶ್ ಅವರು  ನಗರದ ತಾಲ್ಲೂಕು ಆಸ್ಪತ್ರೆಗೆ ಇಂದು ಧೀಡಿರ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅವ್ಯವಸ್ತೆಗಳನ್ನು ಕಂಡು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟದ ವ್ಯವಸ್ಥೆ ಇಲ್ಲದಿರುವುದು. ರೋಗಿಗಳಿಗೆ ಸರಿಯಾಗಿ ಸ್ಪಂದಿಸದಿರುವುದು. ಶೌಚಾಲಯಗಳು ಸ್ವಚ್ಛತೆಯಿಂದ  ಇಲ್ಲದಿರುವುದು, ರೋಗಿಗಳಿಗೆ ಆಸನದ ವ್ಯವಸ್ಥೆ ಇಲ್ಲದಿರುವುದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಕ್ಯಾಂಟೀನ್ ವ್ಯವಸ್ಥೆ ಇಲ್ಲದಿರುವುದು.

ರೋಗಿಗಳಿಗೆ ಹೊರ ವಲಯದಲ್ಲಿ ಔಷಧಿಗಳನ್ನು ಖರೀದಿಸುವಂತೆ ಹೇಳುವುದು, ರೋಗಿಗಳ ಬಟ್ಟೆ ತೊಳೆಯುವಲ್ಲಿ ಸಾಬೂನು ವ್ಯವಸ್ಥೆ ಕಲ್ಪಿಸದಿರುವುದು, ಆಸ್ಪತ್ರೆಯ ಸುತ್ತ ಮುತ್ತ ಶುಚಿ ಇಲ್ಲದಿರುವುದು, ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು, ರೋಗಿಗಳಿಗೆ ಆಸ್ಪತ್ರೆಯಲ್ಲಿ ವೀಲ್ ಚೇರಿನ ವ್ಯವಸ್ಥೆ ಕಲ್ಪಿಸದಿರುವುದು, ಆಂಬ್ಯುಲೆನ್ಸ್ ವ್ಯವಸ್ಥೆ. ಐ.ಸಿ.ಯು ಘಟಕವನ್ನು ಕಾರ್ಯನಿರ್ವಹಿಸದೆ ಸ್ಥಗಿತಗೂಳಿಸಲಾಗಿರುವುದು,ಆಕ್ಸಿಜನ್ ಘಟಕದ ನಿರ್ವಹಣೆ ಬಿಟ್ಟಿರುವುದು, ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗದೇ ಇರುವುದು.

ಆಸ್ಪತ್ರೆಯಲ್ಲಿ ಸಾಮಗ್ರಿಗಳ ಖರೀದಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ವಿಚಾರಣೆ ನಡೆಸಿದರು. ಸಾರ್ವಜನಿಕರಿಗೆ ಸಿಬ್ಬಂದಿಗಳು ಬೇಕಾ ಬಿಟ್ಟಿ ಮಾತನಾಡುವುದು. ಈ ಎಲ್ಲಾ ಅಂಶಗಳನ್ನು ಶಾಸಕರು ಧೀಡಿರ್ ಭೇಟಿ ನೀಡಿದ್ದರಿಂದಲೇ ಸಾಧ್ಯವಾಯಿತು. ಈ ಅವ್ಯವಸ್ಥೆಗಳನ್ನು  ಸರಿಪಡಿಸದೆ ಹೋದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳು, ರೋಗಿಗಳು, ಸಾರ್ವಜನಿಕರು ಹಾಗೂ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!