ಹರಪನಹಳ್ಳಿ: ಹರಪನಹಳ್ಳಿ ತಾಲ್ಲೂಕು ಯಡಿಹಳ್ಳಿ ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಟಿ. ರಾಮಪ್ಪ, ಉಪಾಧ್ಯಕ್ಷರಾಗಿ ನಿರ್ಮಲ ಬಾಯಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಗಿರೀಶ್ ಬಾಬು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಮುಖಂಡ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೆ.ಶೇಖರಪ್ಪ. ಮಾಜಿ ಅಧ್ಯಕ್ಷರಾದ ನೇತ್ರ ಶಿವಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಎಂ. ವಿಜಯಕುಮಾರ್, ಮಹೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜಪ್ಪ ರಮೇಶ್ ನಾಯಕ್, ನವೀನ್ ಕುಮಾರ್, ಹೆಚ್.ಕೊಟ್ರೇಶ, ಹನುಮಂತಪ್ಪ ಕೆ. ಬೀರಪ್ಪ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಗಣೇಶ್ ಕೆ ಯಡಿಹಳ್ಳಿ
