ತಿಪ್ಪೆಯಂತೆ ಸುರಿತಿದ್ದಾರೆ ವಿದ್ಯಾರ್ಥಿಗಳಿಗಾಗಿ ಮಾಡಿದ ಊಟ.! ಇದು ದಾವಗೆರೆಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಥೆ, ವಿದ್ಯಾರ್ಥಿನಿಯರ ವ್ಯಥೆ

ದಾವಣಗೆರೆ: ಹಸಿವಿನಿಂದ ಊಟ ಸಿಗದೇ ಪರಿತಪಿಸಿ ಸಾವಪ್ಪುವವರು ಒಂದು ಕಡೆ, ಊಟ ಇದ್ದರೂ ಬಿಸಾಕುವವರು ಮತ್ತೊಂದು ಕಡೆ. ಇವರಿಬ್ಬರಲ್ಲದೇ ಮತ್ತೊಂದು ವರ್ಗವಿದೆ. ಊಟ ಸಿಕ್ಕರೂ ಅದನ್ನು ತಿನ್ನಲಾಗದೇ ನರಳಾಡುವವರು.

ಈ ಮೂರನೇ ವರ್ಗ ಬಹುತೇಕ ವಿದ್ಯಾರ್ಥಿಗಳು. ಹಾಸ್ಟೆಲ್‌ಗಳಲ್ಲಿ ಮಾಡಿದ ಅಡುಗೆಯನ್ನು ತಿನ್ನಲೂ ಆಗದೇ ಬಿಡಲೂ ಆಗದೆ ನರಳುವವರು ಈ ವಿದ್ಯಾರ್ಥಿ ವರ್ಗ. ಇತ್ತೀಚೆಗೆ ಹಾಸ್ಟೆಲ್ ಅಡುಗೆ ಊಟ ಮಾಡಿ ವಿದ್ಯಾರ್ಥಿಗಳು ಅವಸ್ಥರಾದ ಘಟನೆ ಈ ವಿಷಯಕ್ಕೆ ಪುಷ್ಟಿ ನೀಡಬಲ್ಲದು.

ನಾವು ಹೇಳ ಹೊರಟಿರುವುದು ಇದೇ ವಿಷಯಕ್ಕೆ ಸಂಬಂಧಿಸಿದ ಹಾಸ್ಟೆಲ್ ಒಂದರ ಕಥೆ. ಇದು ನಗರದ ಎಂ.ಸಿ.ಸಿ.ಬಿ ಬ್ಲಾಕ್‌ನಲ್ಲಿ ಭಾರತ ಸೇವಾದಳ ಕಚೇರಿ ಹಿಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯರ ನಿಲಯ.


ಇಲ್ಲಿ ಸುಮಾರು 150 ವಿದ್ಯಾರ್ಥಿನಿಯರ ಪೈಕಿ ಬಹುತೇಕರು ಇಲ್ಲಿ ಮಾಡಿದ ಅಡುಗೆಯನ್ನು ತಿನ್ನಲು ಬಯಸದೆ ಬೆಳಿಗ್ಗೆ ತಿಂಡಿ, ಊಟಕ್ಕೆ ಹೊರಗೆ ಹೋಟೆಲ್, ಕ್ಯಾಂಟೀನ್ ಅವಲಂಬಿಸಿರುವುದು ಸರ್ಕಾರಿ ಹಾಸ್ಟೆಲ್‌ನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.ಆದರೆ ಅದೇ ವಿದ್ಯಾರ್ಥಿನಿಯರಿಗೆ ನೀಡುವ ತಿಂಡಿ, ಊಟವನ್ನು ನಿತ್ಯವೂ ಇದೇ ಹಾಸ್ಟೆಲ್‌ ಹಿಂಭಾಗದ ಕಾಂಪೌಂಡ್ ಗೆ ಹೊಂದಿರುವ ಖಾಲಿ ನಿವೇಶನದಲ್ಲಿ ಬಕೆಟ್‌ಗಳಲ್ಲಿ ತುಂಬಿ ತಂದು ಹಾಡಹಗಲೇ ಸುರಿಯಲಾಗುತ್ತಿದೆ. ಇದರಿಂದ ನಾಯಿ, ಹಂದಿಗಳ ಕಾಟವೂ ಅಲ್ಲಿ ಹೆಚ್ಚಾಗಿದೆ. ಇದು ಸಾರ್ವಜನಿಕರನ್ನು ಕೆರಳಿಸಿದೆ.

ಊಟ, ತಿಂಡಿ ಸರಿ ಇಲ್ಲವೋ? ಅಥವಾ ಅಡುಗೆ ಮಾಡುವವರು ಸರಿಯಾ ದ ಆಹಾರ ತಯಾರಿಸುತ್ತಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಈ ಊಟದ ರಾಶಿ ನೋಡುತ್ತಲೇ ಜನರ ಮನದಲ್ಲಿ ಮೂಡುತ್ತದೆ.
ವಿದ್ಯಾರ್ಥಿನಿಯರು ತಮ್ಮ ಕುಟುಂಬ, ಹೆತ್ತವರ ಸಂಕಷ್ಟದ ಮಧ್ಯೆಯೂ ಕಾಲೇಜು ಶಿಕ್ಷಣಕ್ಕೆಂದು ಹಾಸ್ಟೆಲ್ ಪ್ರವೇಶ ಪಡೆದಿರುತ್ತಾರೆ.

ಹಾಸ್ಟೆಲ್‌ನ ಅವ್ಯವಸ್ಥೆ ಬಗ್ಗೆ ಹೇಳಿಕೊಂಡರೆ ತಮ್ಮ ಓದಿಗೆ ತೊಡಕಾಗಬಹುದು ಎಂಬ ಉದ್ದೇಶದಿಂದ ತಾವಾಗಿಯೇ ಹೊರಗಡೆ ಖರ್ಚು ಮಾಡಿ ಆಹಾರ ಸೇವಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರತಿ ದಿನವೂ ಇಲ್ಲಿ ಕಸದಂತೆ ಆಹಾರ ಸುರಿಯುತ್ತಿರು ವಿಷಯ ವಾರ್ಡನ್ ಗಮನಕ್ಕೆ ಇದ್ಯಾವ ಹಾಸ್ಟೆಲ್ ವಿಚಾರವೂ ಬರುತ್ತಿಲ್ಲವೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನಾದರೂ ಸಮಾಜ ಕಲ್ಯಾಣ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸುವರೇ ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!