ದಾವಣಗೆರೆಯಲ್ಲಿ ಮನೆ ಕಳ್ಳತನ ಮಾಡಿದ್ದ 19 ವರ್ಷದ ಯುವಕ ಸೇರಿ ಇಬ್ಬರ ಬಂಧನ
ದಾವಣಗೆೆರೆ: ಮನೆ ಕಳ್ಳತನ ಹಾಗೂ ಮೋಟಾರ್ ಕಳ್ಳತನ ಮಾಡಿದ್ದ ಇಬ್ಬರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ತಲೆ ಮರೆಸಿಕೊಂಡಿದ್ದಾನೆ.
ಮನೆಯಲ್ಲಿ ಕಳ್ಳತನವಾದ ಬಗ್ಗೆ 2023ರ ಆಗಸ್ಟ್ 27 ರಂದು ಬಿ.ಕಲಪನಹಳ್ಳಿ ಗ್ರಾಮದ ಇಷ್ಠಲಿಂಗಯ್ಯ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ದಾವಣಗೆರೆ ಮುದ್ದಾಭೋವಿ ಕಾಲೋನಿಯ ಸಾದಿಕ್ (19) ಈತನನ್ನು ದಸ್ತಗಿರಿ ಮಾಡಿ ವಿಚಾರಿಸಲಾಗಿ, ಇವನು ಅಣ್ಣಾ ನಗರದ ಸಮೀವುಲ್ಲಾ ಹಾಗೂ ಗೌಸ್ ಪೀರ್ ಜೊತೆ ಸೇರಿ ಕಳ್ಳತನ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿದೆ.
ಬಂಧಿತರಿಂದ 13.91 ಲಕ್ಷ ರೂ. ಬೆಲೆಯ 28.13 ಗ್ರಾಂ ಬಂಗಾರದ ಆಭರಣ, ಹಿತ್ತಾಳೆ ಕೊಳಗ, 40 ಸಾವಿರ ರೂ. ಬೆಲೆ ನೀರೆತ್ತವು ಮೋಟಾರ್ ಹಾೂ ಕೃತ್ಯಕ್ಕೆ ಬಳಸಿದ 60 ಸಾವಿರ ರೂ. ಬೆಲೆಯ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿತರಿಂದ ಗ್ರಾಮಾಂತರ ಪೊಲೀಸ್ ಠಾಣೆಯ 3 ಪ್ರಕರಣ ಹಾಗೂ ಬಸವನಗರ ಠಾಣೆಯ 2 ಪ್ರಕರಣಗಳು ಪತ್ತೆಯಾಗಿವೆ. ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಅವನನ್ನೂ ಪತ್ತೆ ಮಾಡಿ ಮಾಲು ವಶಪಡಿಸಿಕೊಳ್ಳುವುದು ಬಾಕಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿತರನ್ನು ಪತ್ತೆಮಾಡುವಲ್ಲಿ ಯಶಸ್ವಿಯಾದ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್, ಬಿ ಇಸ್ಮಾಯಿಲ್, ಮಂಜುನಾಥ ಕಲ್ಲೇದೇವರ, ಹಾಗೂ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಜೋವಿತ್ ರಾಜ್ ಮತ್ತು ಸಿಬ್ಬಂದಿಗಳಾದ ದೇವೆಂದ್ರ ನಾಯ್ಕ್, ಅಣ್ಣಯ್ಯ, ಮಹಮ್ಮದ್ ಯುಸುಫ್, ವೀರೇಶ್, ಎಸ್ ಎಂ ಅಕ್ತರ್ ಇವರುಗಳಿಗೆ ಎಸ್ಪಿ ಉಮಾ ಪ್ರಶಾಂತ್ ಶ್ಲ್ಯಾಘಿಸಿದ್ದಾರೆ.