ದಾವಣಗೆರೆಯಲ್ಲಿ 31ರಂದು ಬೃಹತ್ ಉದ್ಯೋಗ ಮೇಳ 35 ಕಂಪನಿಗಳು, 4800 ಉದ್ಯೋಗಾವಕಾಶ

ದಾವಣಗೆರೆಯಲ್ಲಿ 31ರಂದು ಬೃಹತ್ ಉದ್ಯೋಗ ಮೇಳ 35 ಕಂಪನಿಗಳು, 4800 ಉದ್ಯೋಗಾವಕಾಶ

ದಾವಣಗೆರೆ: ಇದೇ ದಿನಾಂಕ 31ರ ಬುಧವಾರದಂದು ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು, ಜಿಎಂಐಟಿ ಆವರಣ ದಾವಣಗೆರೆಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಶ್ವೇತಾ ಮರಿಗೌಡರ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 35 ಕಂಪನಿಗಳಿಂದ 4800 ಉದ್ಯೋಗವಕಾಶಗಳು ವಿವಿಧ ಕಂಪನಿಗಳಲ್ಲಿ ಲಭ್ಯವಿದ್ದು, ಹತ್ತನೇ ಕ್ಲಾಸ್ ಪಾಸಾದ ವಿದ್ಯಾರ್ಥಿಗಳಿಂದ ಹಿಡಿದು ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗವಕಾಶಗಳು ದೊರೆಯಲಿವೆ ಎಂದು ಹೇಳಿದರು.

ಜಿಎಂಐಟಿ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಮಾತನಾಡಿ, ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಸ್ಮೈಡರ್ ಎಲೆಕ್ಟ್ರಿಕ್, ಬಜಾಜ್ ಅಲಿಯನ್ಸ್, ಬಿ ಎಫ್ ಡಬ್ಲ್ಯೂ, ಸ್ಯಾಮ್ಸಂಗ್, ಲೈಟಿಂಗ್ ಟೆಕ್ನಾಲಜೀಸ್, ಸೆವೆಂತ್ ಸೆನ್ಸ್ ಟೆಕ್ನಾಲಜಿಸ್, ಜಿಎಂ ಸಮೂಹ ಸಂಸ್ಥೆಗಳು, ಫೇಸ್ ಪವರ್ ಸಿಸ್ಟಮ್ಸ್, ಹೋಂಡಾ ಮೋಟಾರ್ಸ್, ಸಾಸ್ಮೋಸ್ ಟೆಕ್ನಾಲಜೀಸ್ ಮುಂತಾದ ಹಲವು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಈಗಾಗಲೇ 2000 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪತ್ರಿಕಾಗೋಕ್ತಿಯಲ್ಲಿ ಮನವಿ ಮಾಡಿದರು.

31ನೇ ಬುಧವಾರದಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಭೀಮಸಮುದ್ರ ಖಜಾಂಚಿಗಳಾದ ಜಿ.ಎಸ್. ಅನಿತ್ ಕುಮಾರ್ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಬಿ.ಡಿ. ಕುಂಬಾರ್ ಮತ್ತು ವಿವಿಧ ರಾಜಕೀಯ ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಭಾಗವಹಿಸುವ ವಿದ್ಯಾರ್ಥಿಗಳು ಇತ್ತೀಚಿನ ಭಾವ ಚಿತ್ರದೊಂದಿಗೆ ತಮ್ಮ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಬಯೋಡೇಟಾದೊಂದಿಗೆ ಕನಿಷ್ಠ 5 ರಿಂದ 10 ಪ್ರತಿಗಳೊಂದಿಗೆ ಬರಬೇಕಾಗಿ ಕೋರಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಉದ್ಯೋಗ ಮೇಳವು ನಡೆಯಲಿದೆ ಎಂದರು. ಅಭಿಷೇಕ್, ಅಭಿಲಾಷ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!