ಲೋಕಲ್ ಸುದ್ದಿ

ಗುರಿ ತಲುಪಲು ಶಿಸ್ತು ಬೇಕು – ದಿನೇಶ್ ಕೆ ಶೆಟ್ಟಿ

ಗುರಿ ತಲುಪಲು ಶಿಸ್ತು ಬೇಕು - ದಿನೇಶ್ ಕೆ ಶೆಟ್ಟಿ

ದಾವಣಗೆರೆ :ಜೀವನದಲ್ಲಿ ಅಂದುಕೊಂಡ ಗುರಿ ತಲುಪಲು ಪ್ರತಿಯೊಬ್ಬರಿಗೂ ಶಿಸ್ತು ಬೇಕು, ಗುರುಗಳು ತೋರಿದ ಶಿಸ್ತಿನ ದಾರಿಯನ್ನು ಹಿಡಿದು ಶ್ರದ್ಧೆ ನಿಷ್ಠೆ ಇಂದ ಪ್ರಯತ್ನ ಪಟ್ಟರೆ ಸರಿಯಾದ ಗುರಿಯನ್ನು ಬೇಗ ತಲುಪಬಹುದು ಎಂದು ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ ಆದಂತ  ಶ್ರೀ ದಿನೇಶ್ ಕೆ ಶೆಟ್ಟಿ ಯವರು ಕಿವಿ ಮಾತನ್ನು ಹೇಳಿದರು.

ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.

 ಗುರಿ ತಲುಪಲು ಶಿಸ್ತು ಬೇಕು - ದಿನೇಶ್ ಕೆ ಶೆಟ್ಟಿ

ಮೊದಲಿಗೆ ಕ್ರಿಕೆಟ್ನ ಹೆಚ್ಚಿನ ತರಬೇತಿ ಪಡೆಯಲು ಬೆಂಗಳೂರು ಅಥವಾ ಮೈಸೂರಿಗೆ ಹೋಗಬೇಕಾಗುತ್ತಿತ್ತು ಅದು ತುಂಬಾ ದುಬಾರಿ ಯಾಗಿದ್ದ ಕಾರಣ ಪೋಷಕರು ಪ್ರತಿಭಾವಂತ ಕ್ರೀಡಾಪಟುಗಳನ್ನು ಕಳಿಸಲು ಹಿಂಜರಿಯುತ್ತಿದ್ದರು, ಆದರೆ ಈಗ ದಾವಣಗೆರೆಯಲ್ಲಿ ಕ್ರೀಡಾ ಪ್ರಾಧಿಕಾರದ ಕೋಚ್ ಆದ ಶ್ರೀ ಪಿ ವಿ ನಾಗರಾಜ್ ರವರು ಪ್ರಾರಂಭಿಸಿ ಈಗ ಅವರ ಮಾರ್ಗದರ್ಶನದಲ್ಲಿ ಬಿಸಿಸಿಐ ಕೋಚ್ ಆದಂತ  ಶ್ರೀ ಗೋಪಾಲಕೃಷ್ಣ, ಕೆ ಎಸ್ ಸಿ ಎ ಕೋಚ್ ಆದಂತ ಶ್ರೀ ತಿಮ್ಮೇಶ್, ಶ್ರೀ ಉಮೇಶ್ ಸಿರಿಗೆರೆ, ಶ್ರೀ ಕುಮಾರ್ ಅವರುಗಳ ನೇತೃತ್ವದಲ್ಲಿ ಅತ್ಯುತ್ತಮ ತರಬೇತಿ ನೀಡುತ್ತಿದ್ದು ದಾವಣಗೆರೆಯಲ್ಲಿಯೂ ಒಳ್ಳೆಯ ಪ್ರತಿಭೆಗಳನ್ನು ತಯಾರು ಮಾಡುತ್ತಿರುವುದು ಪ್ರಶಂಸನೀಯ. ಶಿಬಿರಕ್ಕೆ ಬಂದ ಕ್ರೀಡಾಪಟುಗಳು ತರಬೇತಿಯನ್ನು ಮುಂದುವರೆಸಿಕೊಂಡು ಅತ್ಯುತ್ತಮ ಸ್ಥಾನ ತಲುಪಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟ್ ಆಟಗಾರರಾದ  ಶ್ರೀ ಮಂಜುನಾಥ ಕ್ರಿಕೆಟ್ ಪ್ರೋತ್ಸಾಹಕರಾದ  ಶ್ರೀ ಶಾಮನೂರು ತಿಪ್ಪೇಶ್ ಕಿರಿಯ ತರಬೇತುದಾರರಾದ  ಶ್ರೀ ವೆಂಕಟೇಶ್, ಶ್ರೀ ಹೇಮಂತ್  ಹಿರಿಯ ಕ್ರೀಡಾಪಟುಗಳು ಶಿಬಿರಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top