IMPACT : ಅಕ್ರಮವಾಗಿ ದಾಸ್ತಾನು ಮಾಡಿದ್ದ 130 ಕ್ವಿಂಟಾಲ್ ಪಡಿತರ ಅಕ್ಕಿ ವಶ: ಸುದ್ದಿ ಬಿತ್ತರಿಸಿದ 4 ದಿನಗಳಲ್ಲಿ ದಾಳಿ ನಡೆಸಿದ ಇಲಾಖೆ
EXCLUSIVE IMPACT ದಾವಣಗೆರೆ: ಬಡ ಮಧ್ಯಮ ವರ್ಗದವರ ಹಸಿವನ್ನು ನೀಗಿಸುವ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರತ್ಯೇಕ ಎರಡು ಕಡೆ ದಾಳಿನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 2 ಲಕ್ಷ ಮೌಲ್ಯದ 130.50 ಕ್ವಿಂಟಾಲ್ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
4 ದಿನಗಳ ಹಿಂದೆ ಗರುಡವಾಯ್ಸ್ ಪಡಿತರ ಅಕ್ಕಿ ಅಕ್ರಮ ಮಾರಾಟಾದ ನಿಯಂತ್ರಣಕ್ಕೆ ಬ್ರೇಕ್ ಯಾವಾಗ ಆಹಾರ ಮಂತ್ರಿಗಳೆ..? ಎಂಬ ಶಿರ್ಷಿಕೆಯಡಿ ವರದಿ ಬಿತ್ತರಿಸಿತ್ತು. ಇದು “ಗರುಡವಾಯ್ಸ್” ಬಿಗ್ಗ ಇಂಪ್ಯಾಕ್ಟ. ಒಂದೇ ತಿಂಗಳಲ್ಲಿ ಎರಡು ಇಂಪ್ಯಾಕ್ಟ್ ನ್ಯೂಸ್ ನೀಡಿದ ಗರುಡವಾಯ್ಸ್.
ದಾವಣಗೆರೆಯ ಅಜಾದ್ ನಗರ ಠಾಣಾ ವ್ಯಾಪ್ತಿಯ ಕೆ.ಆರ್.ರಸ್ತೆಯ ರಾಜ್ ಶಾದಿ ಮಹಲ್ ಹತ್ತಿರ ಎರಡು ಕಡೆ ಗೋದಾಮುಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿ ಸಿ ಆರ್ ಬಿ ಘಟಕದ ಡಿವೈಎಸ್ಪಿ ಬಸವರಾಜ್ ಬಿ.ಎಸ್, ಆಹಾರ ನಿರೀಕ್ಷಕರಾದ ರವಿ ಶಿವಮೂರ್ತಿ ಹಿಪ್ಪರಗಿ, ಆಜಾದ್ ನಗರ ಠಾಣೆಯ ಪಿಎಸೈ ಶೈಲಜಾ ಹಾಗೂ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಂಡವು ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿದ್ದ ಗೋದಾಮುಗಳ ಮೇಲೆ ದಾಳಿ ನಡೆಸಿದೆ.
ಪಡಿತರ ಅಕ್ಕಿ ಸಂಗ್ರಹಣೆ ಮಾಡಿದ್ದ ಇಬ್ಬರು ಆರೊಪಿಗಳ ವಿರುದ್ಧ ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ಪ್ರಕಾರ ಈ ಹಿಂದೆ ಕೂಡ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಆರೋಪದಡಿ ಇವರುಗಳ ಮೇಲೆ ಪ್ರಕರಣವಿದೆ ಅಂತೆ, ಅದ್ಯಾಕೋ ಪಡಿತರ ಅಕ್ಕಿ ಅಕ್ರಮ ಸಾಗಾಟದ ವಿರುದ್ದ ಸುದ್ದಿ ಬಂಧರೆ ಮಾತ್ರ ಎಚ್ಚೆತ್ತುಕೊಳ್ಳುತ್ತಾರೆ ಅನ್ನಿಸುತ್ತೆ. ಕಳೆದ ತಿಂಗಳು ಕೂಡ ಇದೇ ರೀತಿಯಾಗಿ ಅಕ್ರಮ ನಡೆಯುತ್ತಿದೆ ಅಂತಾ ಸುದ್ದಿ ಬಂದಿದ್ದರೂ ಕ್ಯಾರೆ ಎನ್ನದವರು, ನಿನ್ನೆ ಏಕಾ ಏಕಿ ದಾಳಿ ನಡೆಸಿದ್ದರ ಪರಿಣಾಮ ಅಲ್ಪ ಪ್ರಮಾಣದ ಪಡಿತರ ಅಕ್ಕಿ ದೊರೆತಿದೆ.
ಸರ್ಕಾರ ಬಡವರಿಗೆ ಅಂತಾ ಉಚಿತ ಅಕ್ಕಿ ನೀಡಿದರೆ ಅಕ್ರಮವಾಗಿ ಸಂಗ್ರಹ,ಮಾರಾಟ ಮಾಡುವುದನ್ನ ತಡೆಯಬೇಕಾದವರು ಯಾಕೆ ಸುಮ್ಮನಿರುತ್ತಿದ್ದಾರೆ ಅಂತಾ ಗೊತ್ತಾಗುತ್ತಿಲ್ಲ. ಅಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಇನ್ನೂ ಪ್ರಖ್ಯಾತಿ ಪಡೆದ ಅಕ್ಕಿ ಮಾಫಿಯಾದ ಕುಳಗಳು ಇದ್ದಾರೆ, ಹಾಗೂ ಇವರುಗಳ ಬಗ್ಗೆ ಸಂಬಂಧಿಸಿದ ಇಲಾಖೆಯವರಿಗೆ ಸಂಪೂರ್ಣ ಮಾಹಿತಿ ಇದೆ ಅಂತೆ. ಇನ್ನಾದರೂ ಅಕ್ರಮ ಅಕ್ಕಿ ಮಾಫಿಯಾಗೆ ಕಡಿವಾಣ ಹಾಕುತ್ತಾರಾ ಅಂತಾ ಕಾದು ನೋಡಬೇಕಿದೆ..