IGP: ಅಕ್ರಮ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೊದಾಮಿನ ಮೇಲೆ ದಾಳಿ ನಡೆಸಿದ ಪೂರ್ವ ವಲಯ ಐಜಿಪಿ ತಂಡ

ಹಾವೇರಿ: ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮದೋಡು ಗ್ರಾಮದಲ್ಲಿ ಅಕ್ರಮವಾಗಿ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಪೂರ್ವ ವಲಯ ಐಜಿಪಿ ಕಚೇರಿಯ ತಂಡದಿಂದ ದಾಳಿ ಮಾಡಲಾಗಿದೆ. ಐ ಜಿ ಪಿ ರವಿ. ಎಸ್. ಮಾರ್ಗದರ್ಶನದಲ್ಲಿ ಡಿ. ವೈ. ಎಸ್. ಪಿ. ತಿರುಮಲೇಶ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಬಿತ್ತನೆ ಬೀಜವನ್ನು ವಶಕ್ಕೆ ಪಡಿಯಲಾಗಿದೆ.

ಕಮದೋಡು ಗ್ರಾಮದ ಮಲ್ಲಿಕಾರ್ಜುನ ಅಂಗಡಿ ಹಾಗೂ ಇತನ ಪುತ್ರ ಕಿರಣ್ ಎಂಬುವವರಿಗೆ ಸೇರಿದ ಗೋಡೌನ್ ನಲ್ಲಿ 40kgಯ ಒಟ್ಟು 125 ಚೀಲಗಳುಲ್ಲಿ ಸುಮಾರು 5000 kg ಯಷ್ಟು ಬಿತ್ತನೆ ಮೆಕ್ಕೆಜೋಳ ಬೀಜವನ್ನ ಅಕ್ರಮವಾಗಿ ಸಂಗ್ರಹಣೆ ಮಾಡಿರುತ್ತಾರೆ. ಇದರ ಓಟ್ಟು ಅಂದಾಜು ಮೌಲ್ಯ 3.5 ಲಕ್ಷ ಎಂದು ತಿಳಿದುಬಂದಿದ್ದು, ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರವಾನಿಗೆಯಿಲ್ಲದೇ ಅನಧಿಕೃತ ದಾಸ್ತಾನು ಮಾಡಿದ್ದ ಬಿತ್ತನೆ ಬೀಜವನ್ನು ವಶಕ್ಕೆ ಪಡೆಯಲಾಗಿದೆ.

ಬಿತ್ತನೆ ಬೀಜ, ಗೊಬ್ಬರ ಮಾರಾಟಗಾರರ ಮೇಲೆ ನಿರಂತರವಾಗಿ ದಾಳಿ ಮಾಡಿ ನಕಲಿ ಬಿಜ ಗೊಬ್ಬರ ಮಾರಾಟಗಾರರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇತ್ತೀಚೆಗೆ ಕೃಷಿ ಸಚಿವ ಬಿ‌. ಸಿ. ಪಾಟೀಲ್ ಹೇಳಿದ್ದರು. ರಾಜ್ಯಾದ್ಯಂತ ಕೃಷಿ ವಿಚಕ್ಷಣಾ ದಳ ಹಾಗೂ ಕರ್ನಾಟಕ ಪೊಲೀಸ್ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಕೃಷಿ ಸಚಿವರ ತವರು ಜಿಲ್ಲೆ ಹಾವೇರಿ ಹಾಗೂ ಉಸ್ತುವಾರಿ ಜಿಲ್ಲೆ ಕೊಪ್ಪಳದಲ್ಲಿ, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕೃಷಿ ಜಾಗೃತ ಕೋಶದವತಿಯಿಂದ ದಾಳಿ ನಡೆಸಿ ಅಪಾರ ಪ್ರಮಾಣದ ನಕಲಿ ಬಿತ್ತನೆ ಬೀಜ,ಗೊಬ್ಬರ,ಅಕ್ರಮ ದಾಸ್ತಾನು ಹಾಗೂ ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

 

Leave a Reply

Your email address will not be published. Required fields are marked *

error: Content is protected !!