ದಾವಣಗೆರೆಯಲ್ಲಿ ಹಲವು ದಿನಗಳ ನಂತರ ಓರ್ವ ವ್ಯಕ್ತಿಗೆ ಸಾಮಾನ್ಯ ಕೊವಿಡ್ ಪಾಸಿಟವ್ ದೃಡ.!

ದಾವಣಗೆರೆ: ಈ ದಿನದ 1 ಪಾಸಿಟಿವ್ ವಿವರ :
74 ವರ್ಷದ ವ್ಯಕ್ತಿ, ಶೀತ, ಜ್ವರ, ಉಸಿರಾಟದ ತೊಂದರೆ ಇಂದ 27/12/2022 ರಂದು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ನೆನ್ನೆ ಕಫದ ಮಾದರಿ ತೆಗೆದಿದ್ದು ಇವತ್ತು ಪಾಸಿಟಿವ್ ಬಂದಿರುತ್ತದೆ. ಪ್ರಾಥಮಿಕ -7, ದ್ವಿತೀಯ 3 ಸಂಪರ್ಕಗಳ ಕಫದ ಮಾದರಿ ಸಂಗ್ರಹಣೆ ಮಾಡಲಾಗಿದೆ. ವ್ಯಕ್ತಿಯ ಪತ್ನಿಯು 12-16 ಡಿಸೆಂಬರ್ ವರೆಗೆ ತುಮಕೂರಿನಲ್ಲಿ ಇದ್ದು ಬಂದಿರುತ್ತಾರೆ. ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ. ಮಾರ್ಗಸೂಚಿಗಳ ಪ್ರಕಾರ ವ್ಯಕ್ತಿಯ ಪಾಸಿಟಿವ್ ರಿಪೋರ್ಟ್ ನ ಸಿ.ಟಿ ದರ 25 ಕ್ಕಿಂತ ಹೆಚ್ಚು (27) ಇರುವುದರಿಂದ ಜಿನಾಮಿಕ್ ಪರೀಕ್ಷೆಗೆ ಕಳುಹಿಸುವ ಅಗತ್ಯ ಇಲ್ಲದೆ ಇರುವುದರಿಂದ BF 7 ಅಲ್ಲದ ಸಾಮಾನ್ಯ ಕೋವಿಡ್ ಎಂದು ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ.