ಚಿತ್ರದುರ್ಗ ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನಲ್ಲಿ “ಕಲಾವರ್ಣ” ಭಿತ್ತಿಪತ್ರಿಕೆ ಉದ್ಘಾಟನೆ:

ಚಿತ್ರದುರ್ಗ: ಎಸ್ ಆರ್ ಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಭಿತ್ರಿಪತ್ರಿಕೆಯ ಗೌರವ ಸಂಪಾದಕರಾದ ಶ್ರೀ ಗಂಗಾಧರ್ ಈ. ಇವರು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೆ ಪಠ್ಯೇತರವಾಗಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸಲು ಕಲಾವರ್ಣ ಎಂಬ ಶೀರ್ಷಿಕೆ ಅಡಿಯಲ್ಲಿ ಭಿತ್ತಿ ಪತ್ರಿಕೆ ಯನ್ನು ಕಾಲೇಜು ಪ್ರಾರಂಭಿಸಿದೆ.
ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಪಠ್ಯಗಳ ಜೊತೆ ಜೊತೆಯಲ್ಲೇ ಕಥೆ, ಕವನ, ಚಿತ್ರಕಲೆ, ಸಾಮಾನ್ಯ ಜ್ಞಾನ, ಹೀಗೆ ಹತ್ತು ಹಲವಾರು ಸೃಜನಶೀಲ ಬರಹಗಳನ್ನು ಹೊರ ತರಲು ಒಂದು
ಉತ್ತಮ ವೇದಿಕೆ ಇದಾಗಿದೆ ಎಂದು ತಿಳಿಸಿದರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ವೇದಿಕೆಯಲ್ಲಿ ಪ್ರಧಾನ ಸಂಪಾದಕರಾದ ಶ್ರೀ ಅಣ್ಣಪ್ಪ ಎಚ್ .ಸಂಪಾದಕರಾದ ಶ್ರೀ ಧನಂಜಯ, .ಶ್ರೀ ನಟರಾಜ ಎಂ.ವಿ. ಹಾಗೂ ಸದಸ್ಯರಾದ ಶ್ರೀ ಪ್ರದೀಪ್ ಕುಮಾರ್, ಡಾ.ಮಹಾಂತೇಶ್, ಶ್ರೀಗುರುರಾಜ,ಶ್ರೀಮತಿ ನೀಲುಫರ್ ಪಾಟೀಲ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳಾದ ಕುಮಾರಿ ಶ್ರೀನಿಧಿ. ಶ್ರೇಯಸ್. ಛಾಯಾ . ಉಳಿದ ವಿದ್ಯಾರ್ಥಿಗಳು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.