ಶಂಕಿತ ಉಗ್ರರನ್ನು ಪತ್ತೆ ಹಚ್ಚಿದ ಸಿ.ಸಿ.ಬಿ. ಅಭಿನಂದನೆ: ಎನ್.ಇ.ನಾಗರಾಜ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಸಿ ಭಾರಿ ಅನಾಹುತ ಎಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರನ್ನು ಸಿ.ಸಿ.ಬಿ. ಪೊಲೀಸರು ಪತ್ತೆಹಚ್ಚಿ ಬಂಧಿಸಿರುವುದನ್ನು ಹಿಂದೂ ಯುವ
ಸೇನೆ ಜಿಲ್ಲಾಧ್ಯಕ್ಷ ಎನ್.ಇ.ನಾಗರಾಜ್ ಅಭಿನಂದಿಸಿದ್ದಾರೆ. ಬಾರಿ ಅನಾಹುತವನ್ನು ವಿಫಲಗೊಳಿಸಿರುವ ಪೊಲೀಸರಿಗೆ ಅಭಿನಂದನೆಗಳು.
ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಯಾವುದೇ ತೆರನಾದ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವನ್ನು ಪತ್ತೆಹಚ್ಚಿ ಬೇರು ಸಮೇತ ಅಂತಹ ಉಗ್ರರನ್ನು ಸದೆಬಡಿಯಬೇಕು ಎಂದು ಹಿಂದೂ
ಯುವಸೇನೆ ಜಿಲ್ಲಾಧ್ಯಕ್ಷ ಎನ್.ಇ. ನಾಗರಾಜ್ ಒತ್ತಾಯಿಸಿದ್ದಾರೆ.
ಅಬಕಾರಿ ತೆರಿಗೆಗೆ ವಿರೋಧ
ರಾಜ್ಯ ಸರ್ಕಾರ ಅಬಕಾರಿ ಮೇಲೆ ಶೇಕಡಾ ೨೦% ರಷ್ಟು ತೆರಿಗೆ ಹೆಚ್ಚಿಸಿ ಬಡವರ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಎನ್.ಇ.ನಾಗರಾಜು ಅಗ್ರಹಿಸಿದ್ದಾರೆ.
ಕಷ್ಟಜೀವಿಗಳು ಮದ್ಯಪಾನ ಮಾಡುತ್ತಾರೆ. ಅಂತಹವರ ಮೇಲೆ ಶೇಕಡಾ ೨೦% ರಷ್ಟು ತೆರಿಗೆ ಹೆಚ್ಚಿಸಿರುವುದು ಸರಿಯಲ್ಲ. ಈ ಹಣದಿಂದ ಗ್ಯಾರಂಟಿ ಯೋಜನೆ ಜಾರಿ ಮಾಡುವುದು ಸರಿಯಲ್ಲ. ರಾಜ್ಯ
ಸರ್ಕಾರ ತೆರಿಗೆ ರದ್ದುಪಡಿಸಬೇಕೆಂದು ನಗರಸಭೆ ಮಾಜಿ ಸದಸ್ಯ ಎನ್.ಇ.ನಾಗರಾಜ್ ಒತ್ತಾಯಿಸಿದ್ದಾರೆ. ವಂದನೆಗಳೊಂದಿಗೆ.