ರಷ್ಯಾದಿಂದ ತೈಲ ಖರೀದಿಸುತ್ತಿದೆಯಂತೆ ಭಾರತ,?
ನವದೆಹಲಿ : ರಷ್ಯಾ ದೇಶವು ಉಕ್ರೇನ್ ಮೇಲೆ ನಡೆಸಿದ ದಾಳಿ ನಂತರ ಮಾಸ್ಕೋ ಮೇಲೆ ಹಲವಾರು ದೇಶಗಳು ನಿರ್ಬಂಧವನ್ನು ಹೇರಿವೆ. ಆದರೆ ಭಾರತ ಮಾತ್ರ ರಷ್ಯಾದೊಂದಿಗಿನ ತನ್ನ ವಹಿವಾಟನ್ನು ಮುಂದುವರಿಸುತ್ತಿದೆ. ಯುಎಸ್‌ನ ನಿರ್ಬಂಧಗಳ ಹೊರತಾಗಿಯೂ ರಷ್ಯಾದ ಶಕ್ತಿಯ ಮೂಲವನ್ನು ಕೆಲವು ದೇಶಗಳು ಅವಲಂಭಿಸಿದೆ. ಭಾರತವು ರಷ್ಯಾದೊಂದಿಗೆ ಇಂಧನ ಸಹಕಾರವನ್ನು ಗಾಢವಾಗಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಂತರ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಎರಡು ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ ಎಂಬ ವರದಿ ಆಗಿದೆ. “ರಿಯಾಯಿತಿ”ಯಲ್ಲಿ ನೀಡಲಾಗುತ್ತಿರುವ ರಷ್ಯಾದ ಇಂಧನವನ್ನು ಭಾರತ ಆಯ್ಕೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಪ್ರತಿಕ್ರಿಯೆ ನೀಡಿದ ಮೂಲಗಳು “ನಾವು ಅದನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದೆ.
ಕಳೆದ ಕೆಲವು ವಾರಗಳ ಯುರೋಪಿಯನ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಈ ನಡುವೆ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಭಾರತದ ಯೋಜನೆಗಳ ಭಾಗವಾಗಿ ರಷ್ಯಾದಿಂದ ಇಂಧನ ಖರೀದಿ ಕ್ರಮವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಯ ಪ್ರತಿಕ್ರಿಯೆ ಪ್ರಕಾರ ಸರ್ಕಾರವು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಂಡಿದೆ. ರಷ್ಯಾದೊಂದಿಗೆ ಇಂಧನ ಸಂಬAಧವನ್ನು ಇನ್ನಷ್ಟು ಗಾಢವಾಗಿಸುವ ನಿರೀಕ್ಷೆ ಇದೆ. ಈಗಾಗಲೇ, ಐಒಸಿಯಂತೆ, ಎಚ್‌ಪಿಸಿಎಲ್ ಕೂಡ ರಷ್ಯಾದ ಯುರಲ್ಸ್ ಕಚ್ಚಾ ತೈಲವನ್ನು ಯುರೋಪಿಯನ್ ಎನರ್ಜಿ ಟ್ರೇಡರ್ ವಿಟೋಲ್ ಮೂಲಕ ಖರೀದಿಸಿದೆ ಎಂದು ವರದಿ ಉಲ್ಲೇಖ ಮಾಡಿದೆ.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಒಂದು ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಕೋರಿ ಟೆಂಡರ್ ಅನ್ನು ಕರೆದಿದೆ. ಇದೇ ರೀತಿಯಲ್ಲಿ ಮತ್ತೊಂದು ಇಂಧನ ರಫು ಸಾಧ್ಯತೆ ಇದೆ. ಇತ್ತೀಚಿನ ಪಾಶ್ಚಿಮಾತ್ಯ ನಿರ್ಬಂಧಗಳು ರಷ್ಯಾದ ತೈಲ ಮತ್ತು ಅನಿಲವನ್ನು ಯಾವ ದೇಶಗಳು ಕೂಡಾ ಖರೀದಿ ಮಾಡದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ನಡುವೆ ರಷ್ಯಾವು ಭಾರತದಂತಹ ಕೆಲವು ಪ್ರಮುಖ ಇಂಧನ ಆಮದುದಾರರಿಗೆ ವಿಶೇಷ ರಿಯಾಯಿತಿ ದರದಲ್ಲಿ ತೈಲವನ್ನು ಮಾರಾಟ ಮಾಡುವ ಆಫರ್ ಅನ್ನು ನೀಡಿದೆ. ಈ ಅವಕಾಶವನ್ನು ಬಳಸಿಕೊಂಡಿರುವ ಭಾರತೀಯ ರಿಫೈನರ್‌ಗಳು ರಿಯಾಯಿತಿ ತೈಲವನ್ನು ಖರೀದಿಸಲು ಟೆಂಡರ್‌ಗಳನ್ನು ಕರೆದಿದೆ. ಟೆಂಡರ್‌ಗಳನ್ನು ಹೆಚ್ಚಾಗಿ ವ್ಯಾಪಾರಿಗಳು ಗೆದ್ದಿದ್ದಾರೆ, ಅವರು ಕಡಿಮೆ ಬೆಲೆಯ ರಷ್ಯಾದ ತೈಲದ ದಾಸ್ತಾನುಗಳನ್ನು ಸಂಗ್ರಹಿಸುತ್ತಿದ್ದಾರೆ. ರಾಷ್ಟçದ ಅಗ್ರ ತೈಲ ಸಂಸ್ಥೆಯಾದ ಐಒಸಿ ಕಳೆದ ವಾರದ ಕೊನೆಯಲ್ಲಿ ಬ್ರೆಂಟ್‌ಗೆ ಬ್ಯಾರೆಲ್‌ಗೆ $20-25 ರಿಯಾಯಿತಿಯಲ್ಲಿ ಇಂಧನವನ್ನು ಖರೀದಿ ಮಾಡಿದೆ.
ಭಾರತದ ತೈಲ ಸಂಸ್ಕರಣಾ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ರಷ್ಯಾದಿಂದ ಅತೀ ಅಪರೂಪಕ್ಕೆ ಯುರಲ್ಸ್ ಕಚ್ಚಾವನ್ನು ಖರೀದಿ ಮಾಡಿದೆ. 2 ಮಿಲಿಯನ್ ಬ್ಯಾರೆಲ್ ರಷ್ಯಾದ ಯುರಲ್ಸ್ ಕಚ್ಚಾವನ್ನು ಅಪರೂಪವಾಗಿ ಭಾರತದ ತೈಲ ಸಂಸ್ಕರಣಾ ಸಂಸ್ಥೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಖರೀದಿ ಮಾಡಿದ್ದು, ಇದು ಮೇ ತಿಂಗಳಿನಲ್ಲಿ ರಷ್ಯಾದಿಂದ ಭಾರತಕ್ಕೆ ಆಮದು ಆಗಲಿದೆ ಎಂದು ವ್ಯಾಪಾರ ಮೂಲಗಳು ಗುರುವಾರ ತಿಳಿಸಿವೆ. ದೇಶದ ಟಾಪ್ ರಿಫೈನರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ವಾರ ಅದೇ ರಷ್ಯಾದ ದರ್ಜೆಯ 3 ಮಿಲಿಯನ್ ಬ್ಯಾರೆಲ್‌ಗಳನ್ನು ಖರೀದಿಸಿದ ನಂತರ ಈ ಖರೀದಿ ನಡೆದಿದೆ. ರಷ್ಯಾದ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳು ಅನೇಕ ಕಂಪನಿಗಳು ಮತ್ತು ದೇಶಗಳು ರಷ್ಯಾದ ತೈಲವನ್ನು ನಿರ್ಬಂಧ ಮಾಡಿದೆ. ಇದರಿಂದಾಗಿ ರಷ್ಯಾದ ತೈಲಗಳೂ ಭಾರೀ ಕುಸಿತ ಕಂಡಿದೆ. ಆದರೆ ಈ ಬಗ್ಗೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.