ಕಾಫಿ ಕುಡಿಯಿರಿ, ಕ್ಯಾನ್ಸರ್ ನಿಂದ ದೂರವಿರಿ
ಏನಪ್ಪಾ ಇದು, ಪೌಡ್ರ್ ಹಾಕೋಳಿ, ಸೆಂಟ್ ಹಾಕೋಳಿ,ತಲೆ ಬಾಚ್ಕೊಳಿ ಅನ್ನೋ ದುನಿಯಾ ಫಿಲಂ ಡೈಲಾಗ್ ಇದ್ದಂಗಿದೆ, ಕಾಫಿಗೂ ಕ್ಯಾನ್ಸರ್ ಗೂ ಏನ್ರೀ ಲಿಂಕು? ಅಂತೀರ.
ಜಪಾನ್ ನಲ್ಲಿ 38,000 ಆರೋಗ್ಯವಂತ ಕಾಫಿ ಕುಡಿಯೋ ಅಭ್ಯಾಸ ಇರೋ ಯುವಜನತೆಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ರಂತೆ. 13 ವರ್ಷಗಳ ನಂತರ ಇವರಲ್ಲಿ ಕೇವಲ 157 ಮಂದಿಗೆ ಮಾತ್ರ ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ ಇತ್ತಂತೆ.
ಮತ್ತೆ ಕಾಫಿ ಕುಡಿಯೋರಿಗಿಂತ, ಕಾಫಿ ಕುಡೀದೇ ಇರೋರಲ್ಲಿ ಬಾಯಿ ಕ್ಯಾನ್ಸರ್ ಕಾಣಿಸ್ಕೋಳೋ ಚಾನ್ಸ್ ಶೇಕಡ 50 ರಷ್ಟು ಜಾಸ್ತಿ ಅಂತೆ ಕಣ್ರೀ.
ಹಾಲಿಗೊಂದು ಕಾಲ ಆದ್ರೆ ಕಾಫಿಗೊಂದು ಕಾಲ…
