Isro; ಚಂದ್ರಯಾನ 3 ಯಶಸ್ವಿ : ಶುಭ ಹಾರೈಕೆ

ದಾವಣಗೆರೆ, ಆ. 25: ಇದು ನಮ್ಮ ಭಾರತಕ್ಕೆ ಐತಿಹಾಸಿಕ ಕ್ಷಣವಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದಂತಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿರುವ ಇಸ್ರೋ (ISRO) ವಿಜ್ಞಾನಿಗಳಿಗೆ ಶುಭ ಕೋರಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ನಗರದ ಹಳೇ ಬಸ್ ನಿಲ್ದಾಣದ ಬಳಿ ರಮೇಶ್ ಕಾಫಿ ಬಾರ್ ಬಳಗ, ಪತ್ರಿಕಾ ವಿತರಕರ ಬಳಗ, ವಾಯುವಿಹಾರಿಗಳ ಬಳಗದ ಸ್ನೇಹಿತರು ಗುರುವಾರ ಇಸ್ರೋ ವಿಜ್ಞಾನಿಗಳಿಗೆ ಶುಭಾಶಯ ಕೋರಿ. ನಮ್ಮ ವಿಜ್ಞಾನಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ಇಡೀ ವಿಶ್ವವೇ ನಮ್ಮ ಭಾರತವನ್ನು ಹೋಗಳುವಂತಗಲಿ ಎಂದು ಆಶಿಸಿದರು.

isro; ಇಂದು ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಚಂದ್ರನ ಸ್ಪರ್ಶ; ವಿಶೇಷ ಪೂಜೆ

ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯ ಬಸಣ್ಣ, ಸತೀಶ್ ಆಚಾರ್, ರಮೇಶ್, ಕೊಟ್ರಬಸಪ್ಪ, ಅರುಣ್ ಕುಮಾರ್, ಅನಿಲ್ ಬಾರೆಂಗಳ್, ಬಸವರಾಜ, ಶೇಖರ್, ಷಣ್ಮುಖಪ್ಪ, ಅಡಿವೆಪ್ಪ, ಮುರುಗೇಶ್ ಬಾಳೆಕಾಯಿ, ಅಬ್ರಹಾಂ, ಶಿವಣ್ಣ, ಶಶಿಧರ, ಅರುಣ, ಕೆ.ಬಿ.ವಾಸಣ್ಣ, ಗೋವರ್ಧನ್, ಪಟಾಕಿ ಶಿವು, ಪೋಪಟ್ ಲಾಲ್ ಜೈನ್, ಕಿಶೋರ್, ರಾಘವೇಂದ್ರ ಇತರರು ಇದ್ದರು.

**

ಚಂದ್ರಯಾನ 3 ಯಶಸ್ವಿ ; ವಿಜಯೋತ್ಸವ

ನಗರದಲ್ಲಿ ಸುವರ್ಣ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಶಿಶು ಪಾಲನ ಕೇಂದ್ರದಲ್ಲಿರುವ ಮಕ್ಕಳು ಮತ್ತು ಪೋಷಕರೊಂದಿಗೆ ವಿಜಯೋತ್ಸವವನ್ನು ಸಿಹಿ ಹಂಚುವ ಮತ್ತು ಭಾರತ ಮಾತಾ ಕಿ ಜೈ ಎಂದು ವಂದೇ ಮಾತರಂ ಘೋಷಣೆಯೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಮಾತನಾಡಿ ಯಶಸ್ವಿಗೆ ಕಾರಣರಾದ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!