ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಬಿಜೆಪಿ ಗೆಲ್ಲುತ್ತೆ: ಬೊಮ್ಮಾಯಿ ಕೈ ಬಲ ಆಗುತ್ತೆ – ಬೈರತಿ ಬಸವರಾಜ್

ದಾವಣಗೆರೆ: ಹಣ ಹಂಚೋದೇನಿದ್ದರೂ ಕಾಂಗ್ರೆಸ್ ಸಂಸ್ಕೃತಿ ಹೊರತು ಬಿಜೆಪಿಯದ್ದಲ್ಲ. ನಾವೆಲ್ಲೂ ಹಣ ಹಂಚಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿರುಗೇಟು ನೀಡಿದ್ದಾರೆ.
ಸಿಂದಗಿ, ಹಾನಗಲ್ ಉಪಚುಮಾವಣೆಯಲ್ಲಿ ಬಿಜಡಪಿಯವರು ಚೀಲದಲ್ಲಿ ಹಣ ಹಂಚುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದರು.
ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಎರಡರಲ್ಲು ಜಯ ನಮ್ಮದೇ ಅದರಲ್ಲಿ ಯಾವುದೇ ಸಂಶಯ ಬೇಡ. ಆಗ ಬಿಎಸ್ ವೈ ಕಠಿಣ ಅಂತಾ ಹೇಳಿದ್ದರು. ಈಗ ಆ ವಾತವಾರಣ ಇಲ್ಲ. ಸಿಂದಗಿ, ಹಾನಗಲ್ ಗೆದ್ದು ಬೊಮ್ಮಾಯಿ ಕೈ ಬಲ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.