ಬೆಂಗಳೂರು ಉಸ್ತುವಾರಿ ಹಿರಿಯರು ತೀರ್ಮಾನ ಮಾಡ್ತಾರೆ: ಬಿ ಎಸ್ ವೈ ನೇತೃತ್ವದಲ್ಲಿ ಹೋಗ್ತೀವಿ – ಸಚಿವ ನಾರಾಯಣ ಗೌಡ

: ಹೆಚ್.ಡಿ. ಕುಮಾರಸ್ವಾಮಿ ಆರ್ ಎಸ್ಎಸ್ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ ತಕ್ಷಣ ಆರೆಸ್ಸೆಸ್ಸ್ ಗೌರವ ಕಡಿಮೆ ಆವುದಿಲ್ಲ. ಇದೆಲ್ಲ ಎಲೆಕ್ಷನ್ ಗಿಮಿಕ್ ಆಗಿರುವುದರಿಂದ ಅವರ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಕ್ರೀಡಾ ಸಚಿವ ನಾರಾಯಣ ಗೌಡ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ನಿಂದ ಹೆಚ್ ಡಿಕೆ ಪಾಠ ಕಲಿಯುವ ಅಗತ್ಯಯಿದೆ. ಅವರು ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ ಇದು ಎಂದರು.
ಬೈಎಲೆಕ್ಷನ್ ಬಗ್ಗೆ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚೀಲದಲ್ಲಿ ಹಣ ಹಂಚುತ್ತಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿ ಮಾತನಾಡಿ, ನಾವೇನು ಹಣ ಹಂಚುತ್ತಿಲ್ಲ. ಅವರೇನು ಎಲೆ ಅಡಿಕೆ ಕೋಡ್ತಾ ಇದ್ದಾರ? ಎಲೆ ಅಡಿಕೆ ಕೊಟ್ಟರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಕೋವಿಡ್ ನಿರೋಧಕ ಲಸಿಕೆ ನೂರು ಕೋಟಿ ದಾಟಿದೆ.ಆದರೂ ಟೀಕೆ ಟಿಪ್ಪಣೆ ನಡಿತಾ ಇದೆ. ತಜ್ಞರನ್ನ ಹುಡುಕಿ ನಮ್ಮ ದೇಶ ಹಾಗೂ ಬೇರೆ ದೇಶಕ್ಕೂ ಲಸಿಕೆ ಕೊಡ್ತಾ ಇದ್ದಾರೆ. ಟೀಕೆ ಮಾಡದೇ ಎದುರುಗಡೆ ಇರೋರು ಬಾಯಿ ಮುಚ್ಚಿಕೊಂಡು ಇರೋದು ಒಳ್ಳೆಯದು ಎಂದು ಕಿಡಿಕಾರಿದರು.
ಬೆಂಗಳೂರು ಉಸ್ತುವಾರಿ ಬಗ್ಗೆ ಹಿರಿಯರು ತೀರ್ಮಾನ ಮಾಡುತ್ತಾರೆ. ಬಿಎಸ್ ವೈ ಅವರನ್ನ ನಂಬಿ ನಾವು ಹೋಗಿದ್ದೇವೆ. ಮುಂದೆ ಬಿಎಸ್ ವೈ ನೇತೃತ್ವದಲ್ಲೇ ನಡೆದುಕೊಂಡು ಹೋಗುತ್ತೇವೆ. ಚಿಕ್ಕಪುಟ್ಟ ಸಮಸ್ಯೆ ಸರಿ ಹೋಗಿದೆ ಎಂದರು.