ಉದ್ಯೋಗ ಆಕಾಂಕ್ಷಿಗಳ ಭರವಸೆ ಯುವ ವಿಜೇತ ಉದ್ಯೋಗ ಆಕಾಂಕ್ಷಿಗಳ ಭರವಸೆ 

ಉದ್ಯೋಗ ಆಕಾಂಕ್ಷಿಗಳ ಭರವಸೆ ಯುವ ವಿಜೇತ ಉದ್ಯೋಗ ಆಕಾಂಕ್ಷಿಗಳ ಭರವಸೆ

ದಾವಣಗೆರೆ :ಇತ್ತೀಚಿನ ದೀನಗಳಲ್ಲಿ ಯುವಜನತೆ ಖಾಸಗಿ ಕೆಲಸಗಳಿಗೆ ಸೌಲಭ್ಯಗಳಿಗೆ ಮಾರು ಹೋಗದೆ ಸರ್ಕಾರಿ ನೌಕರಿಗೆ ಸೇರುವ ಬಗ್ಗೆ ಹೆಚ್ಚಿನವರು ಆಸಕ್ತಿ ವಹಿಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಸರ್ಕಾರಿ ನೌಕರಿ ಎಂದರೆ ಸುರಕ್ಷತೆ ಆಕರ್ಷಕ ಸಂಬಳ ಭತ್ಯೆ ಇತರೆ ಅಂಶಗಳು ಯುವಕರನ್ನು ಸಾಮಾನ್ಯವಾಗಿ ಆಕರ್ಷಿಸುತ್ತದೆ ಹಾಗೆ ಮಧ್ಯ ಕರ್ನಾಟಕದ ಹೃದಯ ಭಾಗವಾಗಿರುವ ದಾವಣಗೆರೆಯ ಯುವಕರ ಆಸಕ್ತಿ ಏನೂ ಸರ್ಕಾರಿ ನೌಕರಿ ಕಡೆ ಇದೆ ಆದರೆ ಅದರ ಫಲಿತಾಂಶ ಮಾತ್ರ ಶೂನ್ಯ ಎಂದರೆ ತಪ್ಪಾಗಲಾರದು.

ಈ ನಿಟ್ಟಿನಲ್ಲಿ ಯುವ ಸಬಲೀಕರಣದ ಭಾಗವಾಗಿ ಯುವಜನತೆಯ ನಡೆ ಸರ್ಕಾರಿ ಉದ್ಯೋಗದ ಕಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಸಮಾನ ಮನಸ್ಕರ್ ತಂಡವೇ ‘ಯುವ’ ‘ವಿಜೇತ ತಂಡ’

ಮಧ್ಯ ಕರ್ನಾಟಕದ ಉದ್ಯೋಗ ಆಕಾಂಕ್ಷಿಗಳ ಭರವಸೆ ತರಬೇತಿ ಕೇಂದ್ರವಾದ ವಿನ್ನರ್ಸ್ ಕೆರಿಯರ್ ಅಕಾಡೆಮಿ ಸಂಸ್ಥಾಪರಾದ ಶಿವರಾಜ್ ಕಬ್ಬೂರ್ ರವರ ನೇತೃತ್ವದಲ್ಲಿ ದಾವಣಗೆರೆ ಹಾಗೂ ರಾಜ್ಯದ ಹಿರಿಯ ಸರ್ಕಾರಿ ಅಧಿಕಾರಿಗಳು ನೌಕರರು ಮತ್ತು ತರಬೇತಿದಾರರು ಹಾಗೂ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಯ ಸಂಪನ್ಮೂಲ ವ್ಯಕ್ತಿಗಳು ಕಾಲೇಜು ಅಧ್ಯಾಪಕ ಮಿತ್ರರು ಯುವ ವಿಜೇತ ತಂಡದ ಭಾಗವಾಗಿ ಕಾರ್ಯ ಪ್ರವೃತ್ತರಾಗಿರುವುದು ಹೆಮ್ಮೆಯ ಸಂಗತಿ.

ಇಂದಿನ ಯುವಕರಿಗೆ ತಾನು ಏನಾಗಬೇಕೆಂಬ ಗುರಿಗಳಿಲ್ಲದೆ ತಮ್ಮಲ್ಲಿ ಸಾಮರ್ಥ್ಯವಿದ್ದರೂ ಅದನ್ನು ಗುರುತಿಸುವವರಿಲ್ಲದೆ ಕೀಳರ್ಮಿಯಿಂದ ಸರಿಯಾದ ಮಾರ್ಗದರ್ಶನವಿಲ್ಲದೆ ಪ್ರೇರಣೆ ಇಲ್ಲದೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೌಕರಿ ಪಡೆಯದೆ ಸಣ್ಣಪುಟ್ಟ ಕೆಲಸಗಳಲ್ಲಿ ಜೀವನ ಕಳೆಯುವಂತಾಗಿರುವುದನ್ನು ನಾವೆಲ್ಲ ಕಂಡಿದ್ದೇವೆ.

ತಂತ್ರಜ್ಞಾನ ಯುಗದಲ್ಲಿರುವ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿ ಅದರ ದಾಸರಾಗಿರುವುದು ಸಹಜ ಸಂಗತಿ ಓದಿ ಸಾಧಿಸುವ ಸಮಯದಲ್ಲಿ ಬಾರ್ ಪಬ್ ಮೋಜು ಮಸ್ತಿ ಎಂದು ಸಮಯ ವ್ಯರ್ಥ ಮಾಡುತ್ತಿರುವುದು ದುರಂತವೇ ಸರಿ.

ಇದನ್ನೆಲ್ಲಾ ಮನಗಂಡ ಸಮಾನ ಮನಸ್ಕರ್ ಯುವ ವಿಜೇತ ತಂಡ ಇದುಕ್ಕೊಂದು ಪರಿಹಾರ ಕೊಡುವ ಪ್ರಯತ್ನ ಮಾಡುತ್ತಿರುವುದು ಸಂತೋಷದ ಸಂಗತಿ. ಮುಂದಿನ ಪೀಳಿಗೆಯ ಯುವಕರ ಭವಿಷ್ಯಕ್ಕೆ ಸೂಕ್ತ ಮಾರ್ಗದರ್ಶನ ಮಾಡುವ ಹಿನ್ನೆಯಲ್ಲಿ ಯುವ ವಿಜೇತ ತಂಡ ಕೆಲಸ ಮಾಡುವ ಭರವಸೆಯನ್ನು ಹೊಂದಿದೆ.

ಯುವ ವಿಜೇತ ಕಾರ್ಯಕ್ರಮವು ಯುವ ಜನತೆಗೆ ಉದ್ಯೋಗ ಸಿದ್ಧತೆಯ ಕುರಿತು ಅರಿವು ಆತ್ಮವಿಶ್ವಾಸ ವ್ಯಕ್ತಿತ್ವ ವಿಕಸ ಓದುವ ಹವ್ಯಾಸ ಯಶಸ್ಸಿನ ಸೂತ್ರಗಳು ಬರವಣಿಗೆ ಕೌಶಲ್ಯಗಳು ಜೀವನ ಕೌಶಲ್ಯಗಳು ಜೀವನದ ಮೌಲ್ಯಗಳು ಸರ್ಕಾರದ ಸವಲತ್ತುಗಳ ಬಗ್ಗೆ ತಿಳಿಸಿಕೊಡುವ ಉದ್ದೇಶವನ್ನು ಹೊಂದಿರುತ್ತದೆ.

ಯುವ ವಿಜೇತದ ಪ್ರಥಮ ಕಾರ್ಯಕ್ರಮವು ವಿನ್ನರ್ಸ್ ಕೆರಿಯರ್ ಅಕಾಡೆಮಿ ಮತ್ತು ಇತರ ಎಲ್ಲಾ ಸಮಾನ ಮನಸ್ಕರರ ಸಹಕಾರದೊಂದಿಗೆ ದಿನಾಂಕ 6/3 /2023ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಉದ್ಯೋಗ ಆಕಾಂಕ್ಷಿಗಳು ಸದ್ಧಾತ್ಮಕ ಪರೀಕ್ಷೆ ತರಬೇತಿಯಲ್ಲಿರುವರು ದೃಢವಾದ ಕನಸನ್ನು ಗುರಿಯನ್ನು ಹೊಂದಿರುವವರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ.

ಯುವಕರ ನಡೆ ಸರ್ಕಾರಿ ಉದ್ಯೋಗದ ಕಡೆ

Leave a Reply

Your email address will not be published. Required fields are marked *

error: Content is protected !!