ಸಯೇಜ್‌ನಿಂದ ಕವನ ಸ್ಪರ್ಧೆಗೆ ಆಹ್ವಾನ

ಸಯೇಜ್‌ನಿಂದ ಕವನ ಸ್ಪರ್ಧೆಗೆ ಆಹ್ವಾನ

ದಾವಣಗೆರೆ: ನಗರದಲ್ಲಿ ಜಲಸಿರಿ ೨೪*೭ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಸುಯೇಜ್ ಕಂಪನಿಯಿಂದ ನಗರದ ನಾಗರೀಕರಿಗೆ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಜಲ ಸಂರಕ್ಷಣೆಯ ಮಹತ್ವದ ವಿಷಯ ಕುರಿತು ಕವನ ಸ್ಪರ್ಧೆಗೆ ಕವನಗಳನ್ನು ಆಹ್ವಾನಿಸಲಾಗಿದೆ.

ನಗರದ ೧೮ ರಿಂದ ೩೦ ವಯೋಮಾನದೊಳಗಿನ ಹಾಗೂ ೩೦ ರಿಂದ ೬೦ ವಯೋಮಾನದೊಳಗಿನ ಸಾರ್ವಜನಿಕರು ತಮ್ಮ ೧೮ ರಿಂದ ೨೫ ಸಾಲುಗಳ ಮಿತಿಯನ್ನಿಟ್ಟುಕೊಂಡು ಒಳಗೊಂಡಿರಬೇಕು.

ಸ್ವರಚಿತ ಕವನಗಳನ್ನು ಮಾತ್ರ ಸ್ಪರ್ಧೆಗೆ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸುವ ಕವನಗಳು ಅನುವಾದ ಕವನಗಳಾಗಿರದೆ ಸ್ವರಚಿತವಾಗಿದ್ದು ಈವರೆಗೆ ಎಲ್ಲೂ ಪ್ರಕಟವಾಗಿರಬಾರದು. ಕವನಗಳನ್ನು ಕಳುಹಿಸಲು ೧೫ನೇ ಮಾರ್ಚ್ ಬುಧವಾರ ಕೊನೆಯ ದಿನವಾಗಿದ್ದು, ಆಸಕ್ತರು ತಮ್ಮ ಕವನಗಳನ್ನು ಟೈಪ್ ಮಾಡಿ, ನಗರದ ಹದಡಿ ರಸ್ತೆಯಲ್ಲಿರುವ ಸಪ್ತಗಿರಿ ಪ್ಲಾಜಾದ ಸುಯೇಜ್ ಪ್ರೋ.ಪ್ರೊ.ಲಿಮಿಟೆಡ್, ಸಲ್ಲಿಸಬೇಕು ಅಥವಾ ೯೮೮೬೪೭೭೭೭೧ ವಾಟ್ಸಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ.

ವಿಶ್ವ ಜಲ ದಿನಾಚರಣೆಯ ದಿನದಂದು ಎರಡು ವಿಭಾಗಳಲ್ಲಿ ಪಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ಕವನಗಳಿಗೆ ಸೂಕ್ತ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದೆಂದು ಸುಯೇಜ್ ಕಂಪನಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!