ಬಿಐಇಟಿ ಕಾಲೇಜಿನಲ್ಲಿ ಉದ್ಯೋಗ ನೇಮಕಾತಿ ಪರ್ವ
ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ವರ್ಷ ಕ್ಯಾಂಪಸ್ ನೇಮಕಾತಿ ದಾಖಲೆಯನ್ನು ನಿರ್ಮಾಣ ಮಾಡಿದ್ದು, ದೇಶ-ವಿದೇಶದಲ್ಲಿ ಶಾಖೆಗಳನ್ನು ಹೊಂದಿರುವ ಅನೇಕ ಪ್ರತಿಷ್ಠಿತ ಕಂಪನಿಗಳು ಬಿಐಇಟಿ ಗೆ ಭೇಟಿ ನೀಡಿ ಅರ್ಹ ೪೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿವೆ ಎಂದು ಡಾ. ಎಚ್.ಬಿ.ಅರವಿಂದ ತಿಳಿಸಿದ್ದಾರೆ.
ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕ್ರೈಸ್ಟ ಗ್ಲೋಬಲ್ ಕಂಪನಿಗೆ ೨೩, ವಿಪ್ರೋ ೬೫, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ೪೦, ಅರ್ನಸ್ಟ್ ಅಂಡ್ ಎಂಗ್ ಕಂಪನಿಯು ೪೯, ಎಸ್‌ಎಲ್‌ಕೆ ಸಾಪ್ಟವೇರ್ ಸಲ್ಯೂಷನ್ಸ್ ಕಂಪನಿಯು ೧೫, ಕ್ಯಾಪ್ಜೆಮಿನಿ ಕಂಪನಿಯು ೧೦, ಬ್ರಿಟಿಷ್-ಡಚ್ ಕಂಪನಿಯಾದ ಕೆಪಿಎಮ್‌ಜಿ ೩೪ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ.
ಸಿಲ್ವರ್‌ಪೀಕ್ ಗ್ಲೋಬಲ್ ಕಂಪನಿಯು ೧೬, ಹೇರಿನ್ ಇಲೆಕ್ಟ್ರಾನಿಕ್ಸ್ ಕಂಪನಿಯು ೧೭, ಜೆನ್ಸಾರ್ ೧೨ ಐನ್ಯೂಬ್ ಕಂಪನಿಗೆ ೧೩, ಜಪಾನ್ ಕಂಪನಿಯಾದ ರಾಕೂಟೆನ್‌ಗೆ ನಾಲ್ವರು, ಇದಲ್ಲದೇ ಗ್ರೇನ್ -ಟೆಕ್, ಶಶಿ ಎಕ್ಸಪೋರ್ಟ, ರೋಬೋಸಾಫ್ಟ್ ಇತ್ಯಾದಿ ಕಂಪನಿಗಳು ಕ್ಯಾಂಪಸ್ ನಿಯೋಜನೆಯಲ್ಲಿ ನೂರಾರು ವಿದ್ಯಾರ್ಥಿಗಳನ್ನು ಆಯ್ಕೆಮಾಡಿವೆ ಎಂದವರು ತಿಳಿಸಿದ್ದಾರೆ.