ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಕಾರ್ಯರೂಪಕ್ಕೆ ತರುವಂತೆ ಮೇಯರ್ ಬಳಿ ತೆರಳಿದ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ: ನನ್ನ ಅವಧಿಯಲ್ಲೇ ಸಿಹಿ ಸುದ್ದಿ – ಮೇಯರ್ ಎಸ್ ಟಿ ವೀರೇಶ್ ಭರವಸೆ
ದಾವಣಗೆರೆ: ಜಿಲ್ಲೆಯ ಪತ್ರಕರ್ತರು ಪ್ರಸಕ್ತ ಕೋವಿಡ್-೧೯ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿದ್ದು ಕೂಡಲೇ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನೀಡುವ ಮೂಲಕ ಪಾಲಿಕೆ ಪತ್ರಕರ್ತರ ನೆರವಿಗೆ ಧಾವಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಹಾನಗರ ಪಾಲಿಕೆಯ ಮೇಯರ್ ಎಸ್ ಟಿ ವಿರೇಶ್ ಹಾಗೂ ಆಯುಕ್ತ ವಿಶ್ವನಾಥ್ ಮುದಜ್ಜಿಯವರ ಬಳಿ ನಿಯೂಗ ಹೋಗಿ ಮನವಿ ಸಲ್ಲಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಮಾನ್ಯತೆ ಪಡೆದ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುವವರು ತೀವ್ರ ತರಹದ ಖಾಯಿಲೆಗೆ ಒಳಗಾದವರಿಗೆ ವೈದ್ಯರ ವರದಿ ಆದರಿಸಿ ಆರ್ಥಿಕ ನೆರವು ನೀಡುವುದು ಮತ್ತು ಆಕಸ್ಮಿಕ ಸಾವು ಕಂಡಾಗ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದು, ಪತ್ರಕರ್ತರಿಗೆ ಯಾವುದೇ ವಯಸ್ಸಿನ ನಿರ್ಬಂದವಿರಬಾರದು, ಮಾನ್ಯತೆ ಹೊಂದಿದ ಪತ್ರಿಕೆಗಳವರು ಸಂಪಾದಕರು ಮತ್ತು ಮಾಲೀಕರಿಂದ ಹಾಗೂ ವಾರ್ತಾ ಇಲಾಖೆಯಿಂದ ದೃಡೀಕರಿಸಬೇಕು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅನುಮೋದನೆಯನ್ನು ಪರಿಗಣಿಸಿ ಪತ್ರಕರ್ತರಿಗೆ ಆರ್ಥಿಕ ಸಹಾಯ ನೀಡಬೇಕು,ಮಾದ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಆದ್ಯತೆ ನೀಡಬೇಕು, ಪತ್ರಕರ್ತರು ಕಾರ್ಯನಿರ್ವಾಹಿಸುವವರ ಪತಿ ಅಥವಾ ಪತ್ನಿ ಸರ್ಕಾರಿ ಸೇವೆಯಲ್ಲಿ ನಿರತರಾಗಿದ್ದರೆ ಅಂಥವರಿಗೆ ಈ ಯೋಜನೆಗಳು ಅನ್ವಯವಾಗುವುದಿಲ್ಲ, ಮಾದ್ಯಮ ಪಟ್ಟಿಯಲ್ಲಿಲ್ಲದ ಪತ್ರಕರ್ತರು ಯೋಜನೆಯ ಲಾಭ ಪಡೆಯಬಹುದು ಅಂತವರು ನೇಮಕಾತಿ ಪತ್ರ ಮತ್ತು ವೇತನದ ಬ್ಯಾಂಕ್ ದಾಖಲೆಗಳನ್ನು ಸಲ್ಲಿಸಬೇಕೆಂಬ ಕಾನೂನುಗಳನ್ನು ರಚಿಸಿದ ಬಗ್ಗೆ ಪೂಜ್ಯ ಮಹಾಪೌರರ ಬಳಿ ಚರ್ಚಿಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ, ಪ್ರಸಕ್ತ ವರ್ಷದ ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಸುಮಾರು ೧೦ ಲಕ್ಷ ರು.,ಗಳನ್ನು ಮೀಸಲಿಡಲಾಗಿದೆಯಷ್ಟೇ ಆದರೆ ಇದುವರೆಗೂ ಯಾವೊಬ್ಬ ಆರ್ಥಿಕ ಸಮಸ್ಯೆಯಲ್ಲಿರುವ ಪತ್ರಕರ್ತರ ಸಂಕಷ್ಟಕ್ಕೆ ನೆರವಾಗಬೇಕೆಂದು ಇದರ ಬಗ್ಗೆ ಶಿವಮೊಗ್ಗ ಹಾಗೂ ಬೆಂಗಳೂರು ಬಿಬಿಎಂಪಿಯಲ್ಲಿ ಈ ಬಗ್ಗೆ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಹಣ ಮೀಸಲಿಟ್ಟಿದ್ದು ಅಲ್ಲಿನ ಕಾನೂನುಗಳ ಚೌಕಟ್ಟಿನಡಿ ಚರ್ಚಿಸಿ ತೀರ್ಮಾನಕ್ಕೆ ಬರುವಂತೆ ಮೇಯರ್ ಅವರಿಗೆ ಮನವಿ ಸಲ್ಲಿಸುವ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ತಿಳಿಸಿದ್ರು.
ಚಿತ್ರದುರ್ಗದಿಂದ ದಾವಣಗೆರೆ ಜಿಲ್ಲೆ ಪ್ರತ್ಯೇಕವಾಗಿ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೋವಿಡ್-೧೯ ಬಂದ ನಂತರವಂತೂ ಕೆಲ ಪತ್ರಿಕೆಗಳವರು ಪ್ರಕಟಣೆಗಳನ್ನೇ ನಿಲ್ಲಿಸಿದ್ದಾರೆ. ಅಂತವರ ನೆರವಿಗೆ ಸಂಘ-ಸಂಸ್ಥೆಗಳು ನಿಂತಿವೆ ಎಂದರು.
ಆದ್ದರಿಂದ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಭಿಪ್ರಾಯವನ್ನು ಪರಿಗಣಿಸಿ ಪಾಲಿಕೆಯಿಂದ ಆಯವ್ಯಯದಲ್ಲಿ ತೆಗೆದಿರಿಸಲಾಗಿರುವ ಪತ್ರಕರ್ತರ ಕಲ್ಯಾಣ ನಿಧಿಯಲ್ಲಿ ಪತ್ರಕರ್ತರಿಗೆ ಆರ್ಥಿಕ ಸಹಾಯ ನೀಡಬೇಕು, ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಅಥವಾ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದ್ಯತೆ ನೀಡಬೇಕು ಎಂದು ನಿಯೋಗ ದೊಂದಿಗೆ ಒತ್ತಾಯಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಮನವಿಯನ್ನು ಸ್ವೀಕರಿಸಿದ ಮೇಯರ್ ಎಸ್ ಟಿ ವಿರೇಶ್ ಮಾತನಾಡಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ನೀಡಿದ ಮನವಿಯಲ್ಲಿ ತಿಳಿಸಿರುವ ಕಾನೂನುಗಳು ಸೂಕ್ತವಾಗಿದ್ದು ಈ ಬಗ್ಗೆ ಇನ್ನೊಮ್ಮ ಸಭೆ ನಡೆಸಿ ಅಂತಿಮ ರೂಪ ನೀಡುವುದಾಗಿ ಬರವಸೆ ನೀಡಿದ್ರು.
ನಿಯೋಗದಲ್ಲಿ ಹಿರಿಯ ಪತ್ರಕರ್ತ ಪಾಲಿಕೆಯ ಮಾಜಿ ಸದಸ್ಯ ಬಾಮ ಬಸವರಾಜಯ್ಯ, ಹಿರಿಯ ಪತ್ರಕರ್ತರಾದ ಬಸವರಾಜ್ ದೊಡ್ಡಮನಿ, ವರದರಾಜ್, ಜಿಲ್ಲಾ ಉಪಾದ್ಯಕ್ಷ ಹೆಚ್ ಎಂ ಪಿ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ. ಮಂಜುನಾಥ್, ಖಜಾಂಚಿ ಮಾಗನೂರು ಮಂಜಪ್ಪ, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಆರ್ ಎಸ್ ತಿಪ್ಪೇಸ್ವಾಮಿ, ವಾರ್ತಾಧಿಕಾರಿ ಅಶೋಕ್ , ಕರವೇ ಅದ್ಯಕ್ಷ ರಾಮೇಗೌಡ, ಪಾಲಿಕೆಯ ಲೆಕ್ಕಪತ್ರ ಶಾಖೆಯ ಮುಖ್ಯಾದಿಕಾರಿ ಪ್ರಶಾಂತನಾಯ್ಕ, ಅದೀಕ್ಷಕ ನಾಮದೇವ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.