ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ: ಮೆರವಣಿಗೆಗೆ ಕೋವಿಡ್ ಅಡ್ಡಿ, ಆರಕ್ಷಕರಿಂದ ಡಿಸಿ ಕಚೇರಿಗೆ ಬಸ್ ನಲ್ಲಿ ತೆರಳಲು ಅವಕಾಶ
ದಾವಣಗೆರೆ : ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ಆಗ್ರಹಿಸಿನಗರದ ಜಯದೇವ ವೃತ್ತದಲ್ಲಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುಚ್ಚವನಹಳ್ಳಿ ಮಂಜುನಾಥ್ ಬಣದಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರವು ಪ್ರತಿ ವರ್ಷ ರೈತರೂ ಬೆಳೆಯುವ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ( ಎಂ.ಎಸ್.ಪಿ ) ಘೋಸಿಸುತಿದ್ದು ಅದರಲ್ಲಿ ಮೆಕ್ಕೆಜೋಳ , ಭತ್ತ , ರಾಗಿ , ಶೇಂಗ , ಹತ್ತಿ , ಸೂರ್ಯಕಾಂತಿ ಇವುಗಳು ಸೇರಿವೆ ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ರೂ . 1,860 ಘೋಷಣೆ ಮಾಡಿದೆ ಆದರೆ ಎ.ಪಿ.ಎಂ.ಸಿ ಮಾರ್ಕೆಟ್‌ನಲ್ಲಿ ಕಂಪನಿ ಖರೀದಿದಾರರು , ಖಾಸಗಿ ಖರೀದಿದಾರರು ರೂ . 1,400 ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಧರದಲ್ಲಿ ಖರೀಧಿಸುತ್ತಾರೆ ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ರೂ . 1,860-00 ರೂ . 1,400-00 ರೂ . 460-00 ಪ್ರತಿ ಕ್ವಿಂಟಲ್‌ಗೆ ನಷ್ಟ 50 ಕ್ವಿಂಟಲ್ ಬೆಳೆದ ರೈತನಿಗೆ ವರ್ಷಕ್ಕೆ ರೂ . 46,000-00 ಸಾವಿರ ನಷ್ಟವಾಗುತಿದೆ. ಕೇಂದ್ರ ಸರ್ಕಾರವು -2014 ರಿಂದಲೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆದಿಲ್ಲ ಇದರಿಂದ ಮೆಕ್ಕೆಜೋಳ ಬೆಳದ ರೈತರಿಗೆ ತೀರ್ವವಾದ ನಷ್ಟವಾಗಿದೆ.
ಕೇಂದ್ರ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ರೈತರು ತಕ್ಷಣಕ್ಕೆ ಕೇಂದ್ರ ಸರ್ಕಾರದ ಖರೀದಿ ಕೇಂದ್ರದಲ್ಲಿ ಮಾರಾಟಮಾಡುತ್ತಾರೆ ,
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾದರೆ ರೈತರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ ಇಂಥ ಸಂದರ್ಭವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ .
ಈ ಮೇಲಿನ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಘೋಷಣೆ ಮಾಡುವ ಕನಿಷ್ಠ ಬೆಂಬಲ ಬೆಲೆಗೆ ( ಎಂ.ಎಸ್.ಪಿ ) ಕಾನೂನು ಬದ್ಧ ಕಾಯ್ದೆಯನ್ನು ಮಾಡಬೇಕು ಅದರಲ್ಲಿ ಕನಿಷ್ಠ ಬೆಲೆಗೆ ಗಿಂತ ಕಡಿಮೆ ಖರೀಧಿಮಾಡುವ ಕಂಪನಿ , ಹಾಗೂ ಖಾಸಗಿ ಖರೀದಿದರರ ಲೈಸನ್ಸ್ ರದ್ದು , ಜೈಲುಶಿಕ್ಷೆ , ದಂಡ , ಇತ್ಯಾದಿ ಉಗ್ರ ಕಾಯ್ದೆಗಳನ್ನು ಜಾರಿಗೆ ತಂದರೆ ರೈತರಿಗೆ ನಷ್ಟದ ಸ್ವಲ್ಪ ಭಾಗವನ್ನು ಕಡಿಮೆಮಾಡಬಹಾದು ಆದ್ದರಿಂದ ಕೇಂದ್ರ ಸರ್ಕಾರವು ( ಎಂ.ಎಸ್.ಪಿ ) ಗೆ ಕಾಯ್ದೆ ತರಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯು ಜಯದೇವ ವೃತ್ತದಲ್ಲಿ ಸಂಕೇತಿಕವಾಗಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿಸಲ್ಲಿಸಿದರು.
ಈ ಸಂದರ್ಭದಲ್ಲಿ
ಹುಚ್ವನಹಳ್ಳಿ ಮಂಜುನಾಥ, ಹುಚ್ವನಹಳ್ಳಿ ಪ್ರಕಾಶ್, ಜಗಳೂರು ಚಿರಂಜೀವಿ, ಹನುಮಂತ, ಪ್ರಕಾಶ್, ನೀರ್ತಡಿ ತಿಪ್ಪೇಶ್, ನಾಗೇಂದ್ರಪ್ಪ ನಾಗನೂರು, ಮಲ್ಲೋನಹಳ್ಳಿ ರವಿಕುಮಾರ್ ಸೇರಿದಂತೆ ಇತರರು ಇದ್ದರು.