ಫ್ರೊ ನಾಪತ್ತೆ.! ಕಾರು ಪತ್ತೆಯಾಯ್ತು ಒಂದು ಕಡೆ.! ಹುಡುಕಿದಾಗ ಸಿಕ್ಕಿದ್ದು ಮೃತ ದೇಹ.! ಈ ಚೈನ್ ಲಿಂಕ್ ಬಿಡಿಸೋಕೆ ಪೊಲೀಸರ ಹರಸಾಹಸ.!

ದಾವಣಗೆರೆ: ಶಿವಮೊಗ್ಗದ ಕೃಷಿ ಕಾಲೇಜಿನ ಪ್ರೀತಿಯ ವಿದ್ಯಾರ್ಥಿಗಳ ಗುರುಗಳಾಗಿದ್ದ ಪ್ರೋ.ಗಂಗಾಪ್ರಸಾದ್ (59) ಅವರ ಮೃತದೇಹ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಚಿಕ್ಕಬಾಸೂರು ತಾಂಡದ (ವಿಜಯಪುರ)ಕೆರೆ ಸಮೀಪ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಶುರುವಾಗಿದೆ.
ಫ್ರೊ.ಗಂಗಾಪ್ರಸಾದ್ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ದೊಗ್ಗನಾಳ್ ಗ್ರಾಮದವರಾಗಿದ್ದುರು,ಅಪಾರ ಜನಮನ್ನಣೆ ಗಳಿಸಿದ್ದರು. ಹೀಗಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆ ಎಂಬ ಪ್ರಶ್ನೆ ದೃಢವಾಗಿ ನಿಂತಿದೆ. ಅಲ್ಲದೇ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಸಾವಿನ ಬಗ್ಗೆ ಅನುಮಾನ ಇದೆ ಎಂದು ಅವರ ಸಂಬಂಧಿಕರೊಬ್ಬರು ದೂರು ದಾಖಲಿಸಿದ್ದಾರೆ.
ಪ್ರೋ.ಗಂಗಾ ಪ್ರಸಾದ್ ಮೊದಲು ಧಾರವಾಡ ಕೃಷಿ ವಿಶ್ವವಿದ್ಯಾಲಯಲ್ಲಿ ಇದ್ದರು, ತದ ನಂತರ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿದ್ದರು. ಶಿವಮೊಗ್ಗದ ಬಸವೇಶ್ವರ ನಗರದಲ್ಲಿ ಮನೆ ಮಾಡಿಕೊಂಡಿದ್ದರು.
ಕೆಲ ವರ್ಷಗಳ ಹಿಂದೆ ಸ್ಲಲ್ಪ ಖಿನ್ನತೆಗೆಗೊಳಾಗಿದ್ದು, ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಆಗ ಮಿಸ್ಸಿಂಗ್ ಪ್ರಕರಣ ದಾಖಲಾಗಿದ್ದು, ಮೊಬೈಲ್ ಟ್ಯಾಪ್ ಮಾಡಿದ್ದ ವೇಳೆ ಶಿರಸಿಯಲ್ಲಿ ಸಿಕ್ಕಿದ್ದರು. ಅದಾದ ಬಳಿಕ ಸೋಮವಾರ ಮನೆ ಬಿಟ್ಟು ಹೋಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.
ಗುರುಪ್ರಸಾದ್ ಶವದ ಸುತ್ತ ಅನುಮಾನ ಯಾಕೆ.?
ನೀರಿನಲ್ಲಿ ಶವ ಸಿಕ್ಕ ಎರಡು ಗಂಟೆ ಬಳಿಕ ಅವರ ಕಾರು ಸಾಸ್ವೆಹಳ್ಳಿ ಎಡಿವಿಎಸ್ ಕಾಲೇಜಿನ ಬಳಿ ಪತ್ತೆಯಾಗಿದೆ. ಕಾರು ಸಂಪೂರ್ಣ ಲಾಕ್ ಆಗಿದ್ದು, ಕಾರಿನಲ್ಲಿ ಡೆತ್ ನೋಟ್ ಇದೆಯೋ ಇಲ್ಲವೋ ಎಂಬ ಬಗ್ಗೆ ಮಹಜರ್ ಮಾಡಬೇಕಾಗಿದೆ. ಇನ್ನು ಶವ ಮಾತ್ರ ಚಿಕ್ಕಬಾಸೂರು ತಾಂಡದ ಕೆರೆಯಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ಅಲ್ಲಿಯವರೆಗೆ ಕಾರಿನಲ್ಲಿಯೇ ಹೋಗಬಹೋದಿತ್ತು. ಆದರೆ ಕಾರನ್ನು ಅಲ್ಲಿ ಬಿಟ್ಟು ಕೆರೆ ಬಳಿ ನಡೆದುಕೊಂಡು ಹೋದರಾ, ಅಥವಾ ಯಾರಾದರೂ ಕೊಲೆ ಮಾಡಿ ಶವವನ್ನು ನೀರಿನಲ್ಲಿ ಹಾಕಿದ್ದಾರೆಯೇ.? ಎಂಬ ಪ್ರಶ್ನೆಗೆ ಪೋಸ್ಟ್‌ಮಾಟಂ ಬಂದ ಬಳಿಕ ಉತ್ತರ ತಿಳಿಯಲಿದೆ.
ಇನ್ನೂ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಗೂ ಸಂಬಂಧ ಇರದ ಇವರಿಗೆ ಇಲ್ಲಿಗೆ ಬಂದಿದ್ದು ಯಾಕೆ? ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಏನಿತ್ತು ಎಂಬ ಪ್ರಶ್ನೆ ಕಾಡುತ್ತಿದೆ.
ಪ್ರೋ.ಗಂಗಾಪ್ರಸಾದ್ ಶಿವಮೊಗ್ಗ ಕೃಷಿ ಕಾಲೇಜಿನ ಅನುವಂಶಿಕ ಮತ್ತು ತಳಿ ಅಭಿವೃದ್ಧಿ ಪ್ರೋಪೆಸರ್ ಆಗಿದ್ದು, ಇವರ ಕೈ ಕೆಳಗೆ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿತಿದ್ದಾರೆ. ಅನುವಂಶಿಕ ಮತ್ತು ತಳಿ ಅಭಿವೃದ್ಧಿ ಕಷ್ಟದ ವಿಷಯವಾಗಿದ್ದು ಅದನ್ನು ಸರಳ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಇವರ ವಿಶೇಷ. ಈ ಕಾರಣದಿಂದ ಅಪಾರ ವಿದ್ಯಾರ್ಥಿಗಳ ಬಳಗ ಇವರ ಹಿಂದೆ ಇತ್ತು.
ಶವ ಪತ್ತೆಯಾಗಿದ್ದು ಹೇಗೆ ?
ಚಿಕ್ಕಬಾಸೂರು ತಾಂಡ ( ವಿಜಯಪುರ) ಕೆರೆಯಲ್ಲಿ ಶವವೊಂದು ತೇಲಾಡುತ್ತಿರುವುದನ್ನು ಊರಿನ ಜನರು ಹೊಲಕ್ಕೆ ಹೋಗುತ್ತಿದ್ದವರು ನೋಡಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹೊನ್ನಾಳಿ ಸಿಪಿಐ ದೇವರಾಜ್ ತಂಡ ಸ್ಥಳಕ್ಕೆ ಬಂದಿದೆ. ನಂತರ ನುರಿತ ಈಜುಗಾರರನ್ನು ಕರೆಸಿ ಶವ ಹೊರತೆಗೆಯಲಾಗಿದೆ. ಶವ ಸಿಕ್ಕ ಜಾಗದಲ್ಲಿ ಕಾಲೇಜಿನ ಐಡೆಂಟಿ ಕಾರ್ಡ್, ಆಧಾರ್ ಕಾರ್ಡ್ ಮಾಹಿತಿ ಸಿಕಿದ್ದು, ತದ ನಂತರ ಸಂಬಂಧಿಕರಿಗೆ ಕಾಲೇಜಿನ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಇದಾದ ನಂತರ ಈ ಮೃತದೇಹ ಶಿವಮೊಗ್ಗ ಅಗ್ರಿಕಲ್ಚರಲ್ ಕಾಲೇಜಿನ ಪ್ರೋ.ಗಂಗಾಪ್ರಸಾದ್ ಅವರ ಮೃತ ದೇಹ ಎಂದು ಗುರುತಿಸಲಾಗಿದೆ. ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿ ಪೋಸ್ಟ್‌ಮಾಟಂ ಮಾಡಲಾಗಿದ್ದು, ಮೃತ ದೇಹವನ್ನು ಸಂಬಂಧಿಕರಿಗೆ ನೀಡಲಾಗಿದೆ.
ಕೊಲೆ ಶಂಕೆ ಎಂಬ ದೂರಿನ ಮೇಲೆ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರು ಇಹಲೋಕ ತ್ಯಜಿಸಿದ್ದು ಸತ್ಯಾಸತ್ಯತೆ ತಿಳಿದು ಬರಬೇಕಿದೆ.
-ಗಂಗಾ ಪ್ರಸಾದ್ ಖಿನ್ನತೆಗೆ ಒಳಪಟ್ಟಿದ್ದು ನಿಜನಾ?
ಪ್ರೊ.ಗಂಗಾ ಪ್ರಸಾದ್ ಖಿನ್ನತೆಗೆ ಒಳಗಾಗಿದ್ದು ನಿಜನಾ? ಒಂದು ವೇಳೆ ಖಿನ್ನತೆಗೆ ಒಳಪಟ್ಟಿದ್ದರೇ ಯಾಕಾಗಿ ಖಿನ್ನತೆಗೆ ಒಳಪಟ್ಟಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅಲ್ಲದೇ ಮೂಲಗಳು ಹೇಳುವ ಪ್ರಕಾರ ಕಾಲೇಜಿನಲ್ಲಿ ನಡೆದ ಕೆಲ ಘಟನೆಗಳು ಅವರ ಮನಸ್ಸನ್ನು ಘಾಸಿಗೊಳಿಸಿತ್ತು ಎಂದು ಹೇಳಲಾಗುತ್ತಿದೆ. ಆದರೆ ಯಾವ ಘಟನೆ ಅವರ ಮನಸ್ಸನ್ನು ಘಾಸಿಗೊಳಿಸಿತ್ತು ಎಂಬುದು ಇನ್ನೂ ಗೊತ್ತಾಗಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ನೀರಿನಲ್ಲಿ ಬಟ್ಟೆ ಸಮೇತ ಬೀಳಬಹುದಿತ್ತು, ಆದರೆ ಬಟ್ಟೆ, ಚಪ್ಪಲ್, ಕಾರ್ ಕೀ ದಡದ ಮೇಲೆ ಸಿಕ್ಕಿರುವುದು ಹಲವು ಅನುಮಾನ ಉಂಟಾಗಿದೆ.
ಪ್ರೋ.ಗಂಗಾ ಪ್ರಸಾದ್ ನನ್ನ ಪ್ರೀತಿಯ ಗುರುಗಳು, ಅವರು ಧಾರವಾಡದಲ್ಲಿ ಇದ್ದಾಗ ಕ್ಲಿಷ್ಟಕರ ವಿಷಯವನ್ನು ಸರಳವಾಗಿ ಹೇಳಿಕೊಡುತ್ತಿದ್ದರು. ಎಲ್ಲರೊಂದಿಗೆ ಪ್ರೀತಿಯಿಂದ ಇರುತ್ತಿದ್ದರು. ಆದರೀಗ ಅವರ ಶವ ಪತ್ತೆಯಾಗಿರುವುದು ತೀವ್ರ ನೋವುಂಟಾಗಿದೆ. ಅವರ ಕೈ ಕೆಳಗೆ ಸಾವಿರಾರು ವಿದ್ಯಾರ್ಥಿಗಳು ಕಲಿತಿದ್ದು, ಉನ್ನತ ಹುದ್ದೆಗೆ ಹೋಗುವ ಶಿಷ್ಯಂದಿರಲ್ಲಿ ನಾನು ಒಬ್ಬ. ಸೂಕ್ತ ತನಿಖೆ ಯಾಗಬೇಕಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ.
– ಹನುಮಂತರಾಯ, ಹಾವೇರಿ ಎಸ್ ಪಿ (ಪ್ರೋ.ಗಂಗಾ ಪ್ರಸಾದ್ ಶಿಷ್ಯ)