33 ನೇ ವಾರ್ಡ್‌ನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭಕ್ಕೆ ಅರ್ಜಿ ಆಹ್ವಾನ – ಕೆ.ಎಂ.ಸುರೇಶ್

ದಾವಣಗೆರೆ: 2020-21 ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ದಾವಣಗೆರೆಯ 33 ನೇ ವಾರ್ಡ್‌ನ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಸದ್ಯದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ಹೇಳಿದರು.
*ದಾವಣಗೆರೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಸೋಮೇಶ್ವರ ವಿದ್ಯಾಲಯ ಮತ್ತು ಸರಸ್ವತಿ ನಗರ ಬಿ ಬ್ಲಾಕ್‌ನ ಶ್ರೀ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆ, ಸರಸ್ವತಿ ನಗರದ ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಸತತ ಎರಡನೇ ವರ್ಷವೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆಯ 33 ನೇ ವಾರ್ಡ್ ನಲ್ಲಿ ವಾಸವಾಗಿದ್ದು 2020-21 ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಶೇಕಡಾ 85 ಮತ್ತು ಅಧಿಕ ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ.*
*ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿ, ವಾಸ ಸ್ಥಳ ದೃಡೀಕರಣಕ್ಕಾಗಿ ಆಧಾರ್ ಕಾರ್ಡ್, ತಮ್ಮ ಇತ್ತೀಚೆಗಿನ 2 ಪಾಸ್ ಪೋರ್ಟ್ ಅಳತೆಯ ಪೋಟೋಗಳನ್ನು ದಿನಾಂಕ 31-10-2021 ರ ಒಳಗಾಗಿ ಸಲ್ಲಿಸಬೇಕು. ದಾಖಲೆಗಳನ್ನು ಸಲ್ಲಿಸುವುದಕ್ಕಾಗಿ ಈ ಕೆಳಗಿನವರನ್ನು ಸಂಪರ್ಕಿಸಬೇಕು.*
*1. ಕೆ.ಎಂ.ಸುರೇಶ್ 9686748362*
*2. ಕೆ.ಎಂ.ವೀರೇಶ್, ಮಹಾನಗರ ಪಾಲಿಕೆ ಸದಸ್ಯರು 9844466838*
*3. ಎಸ್.ಟಿ.ಸೋಮಶೇಖರ್ 9880337686*
*4. ಕೆ.ರಾಘವೇಂದ್ರ ನಾಯರಿ 9844314543*
*5. ಬಿ.ಎಮ್.ಗದಿಗೇಶ್ 9901916637*
*6. ಸಿದ್ದೇಶ್ 9844212344*
*ಅಭಿನಂದನಾ ಸಮಾರಂಭವನ್ನು ಕೋವಿಡ್19 ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಯ ಅನುಸಾರ ಅತ್ಯಂತ ಸರಳವಾಗಿ ಆಯೋಜಿಸಲಾಗುವುದು. ಕಾರ್ಯಕ್ರಮ ನಡೆಯುವ ದಿನಾಂಕ ಮತ್ತು ಸ್ಥಳವನ್ನು ಅರ್ಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು ಎಂದು ಶ್ರೀ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.*
*33ನೇ ವಾರ್ಡನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಯಾವುದೇ ಜಾತಿ, ಮತ, ಧರ್ಮ, ಪಂಥವಿಲ್ಲದೇ ಪ್ರೋತ್ಸಾಹಿಸಬೇಕೆಂಬ ಸದುದ್ದೇಶದಿಂದ ನಡೆಯುವ ಈ ಅಭಿನಂದನಾ ಕಾರ್ಯಕ್ರಮದ ಯಶಸ್ಸಿಗಾಗಿ 33ನೇ ವಾರ್ಡ್ ನ ಸಮಸ್ತ ನಾಗರಿಕ ಬಂಧುಗಳ ಸಹಕಾರ ಕೋರಲಾಗಿದೆ.*
*ಕೆ.ಎಮ್.ಸುರೇಶ್*
*ಗೌರವ ಕಾರ್ಯದರ್ಶಿಗಳು*
*ಶ್ರೀ ಸೋಮೇಶ್ವರ ಪ್ರತಿಷ್ಠಾನ*
*ಶ್ರೀ ಸೋಮೇಶ್ವರ ವಿದ್ಯಾ ಸಂಸ್ಥೆ.*
*ದಾವಣಗೆರೆ*
*ಮೊಬೈಲ್ ಸಂಖ್ಯೆ:9686748362 9844422633*