ಕೋಗುಂಡೆ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ

ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿ ಕೋಗುಂಡೆ ಗ್ರಾಮದಲ್ಲಿ ದಿನಾಂಕ 30/03/2024 ರಂದು ಸಂಜೆ 6.30 ಕ್ಕೆ ಶ್ರೀ ಬಸವೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ”ಜರುಗಲಿದೆ.

ರಾತ್ರಿ 9-30 ಕ್ಕೆ ಶ್ರೀ ಬಸವೇಶ್ವರ ಯುವಕ ನಾಟ್ಯ ಕಲಾ ಸಂಘ ಇವರಿಂದ “ಧರ್ಮ ತುಂಬಿದ ಮನೆ” ಸಾಮಾಜಿಕ ನಾಟಕ ಇರುತ್ತದೆ.

ದಿನಾಂಕ 31-3-2024 ಭಾನುವಾರ ಜವಳ, ಹರಕೆ, ಒಪ್ಪಿಸುವುದು ಇತ್ಯಾದಿ ಕಾರ್ಯಕ್ರಮಗಳು ಸಂಜೆ 7-00 ಗಂಟೆಗೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾ ತಂಡ ಇವರಿಂದ 31-03-2024 ರಂದು ವೀರಗಾಸೆ ಪ್ರದರ್ಶನ ,ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಇರುತ್ತದೆ.


1-4-2024
ಬೆಳಿಗ್ಗೆ 8-30 ಗಂಟೆಗೆ ಓಕುಳಿ ಉತ್ಸವ ಮತ್ತು ಗಂಗಾಪೂಜೆ ಹಾಗೂ ರಾತ್ರಿ 8-30 ಕ್ಕೆ ಕಂಕಣ ವಿಸರ್ಜನೆ ಇರುತ್ತದೆ
ಸಮಸ್ತ ಎಲ್ಲ ಭಕ್ತಾದಿಗಳು ಸ್ವಾಮಿಯ ಕೃಪೆಗೆ ಪಾತ್ರರಾಗಲು ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!